ಬೆಂಗಳೂರು: ಇಂದು ಸಂಜೆ ಸಿಎಂ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಲಿದ್ದಾರೆ. ಈ ಭೇಟಿಯಲ್ಲಿ ರಾಜ್ಯದ ರಾಜಕೀಯ ಬೆಳವಣಿಗೆಗಳು, ಬಣ ರಾಜಕೀಯ ಮತ್ತು ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಹೈಕಮಾಂಡ್ ಅಧಿಕಾರ ಹಂಚಿಕೆಯ `ಬಿಸಿ ತುಪ್ಪ’ವನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಮತ್ತೊಂದೆಡೆ, ಕಾಂಗ್ರೆಸ್ ಶಾಸಕರ ದೆಹಲಿ ಯಾತ್ರೆ ಮುಂದುವರಿಯುವ ಸುಳಿವು ದೊರೆತಿದೆ. ಈಗಾಗಲೇ ಡಿಕೆಶಿ ಬಣದ ಒಂದಷ್ಟು ಮಂದಿ ಶಾಸಕರು ದೆಹಲಿಗೆ ಹೋಗಿದ್ದು, ಇನ್ನೊಂದು ಸುತ್ತಿನಲ್ಲಿ ಸೋಮವಾರ ದೆಹಲಿಗೆ ಹೋಗಲು ಹಲವು ಮಂದಿ ಶಾಸಕರು ಸಿದ್ಧರಾಗಿದ್ದಾರೆ. ಪಕ್ಷದ ಉಸ್ತುವಾರಿ ರಣದೀಪ್ ಸುರ್ಜವಾಲಾ ಟ್ವಿಟ್ಗೆ ತಲೆಕೆಡಿಸಿಕೊಳ್ಳದ ಶಾಸಕರು, ಸಮಯ-ಸಂದರ್ಭ ಪರಿಶೀಲಿಸಿ ದೆಹಲಿಗೆ ತೆರಳಲು ಉದ್ದೇಶಿಸಿದ್ದಾರೆ. ಪ್ರತೇಕವಾಗಿ ಶಾಸಕರು ದೆಹಲಿಗೆ ತೆರಳಲು ಪ್ಲಾ÷್ಯನ್ ಮಾಡಿದ್ದಾರೆ. ಬೇರೆ ಬೇರೆ ಸ್ಥಳಗಳಿಂದ ದೆಹಲಿಗೆ ತೆರಳಲು ಶಾಸಕರು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.



