ಬೆಂಗಳೂರು: ಸಿಸಿಬಿ ಪೊಲೀಸರು ತಿನೋ ಸೋಕ (50) ಎಂಬಾತನನ್ನು ಬಂಧಿಸಿ ಎರಡು ಕೋಟಿ ರೂ. ಮೌಲ್ಯದ ಕೊಕೇನ್ ವಶಪಡಿಸಿಕೊಂಡಿರುತ್ತಾರೆ.
ಕೋಸ್ಟರಿಕ ದೇಶದ ಇವನು ಡ್ರಗ್ ಪೆಡ್ಲರ್ ಆಗಿರುತ್ತಾನೆ. ಬೊಮ್ಮನಹಳ್ಳಿ ಲೀಸ್ ಠಾಣಾ ವ್ಯಾಪ್ತಿಯಲ್ಲಿ ಇವನನ್ನು ಬಂಧಿಸಲಾಗಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚೆನ್ನಮ್ಮನಕೆರೆ ಪೊಲೀಸರು ಕಲಿತ ಜೊಬ್ (36) ಎಂಬ ಆಫ್ರಿಕಾ ಪ್ರಜೆ ಬಂಧಿಸಿರುತ್ತಾರೆ.ಸುಮಾರು ಆರೂವರೆ ಲಕ್ಷ ರೂಪಾಯಿ ಬೆಲೆಬಾಳುವ ಕೊಕೇನ್ ವಶಪಡಿಸಿಕೊಂಡಿರುತ್ತಾರೆ.ದೇವನಹಳ್ಳಿ ಪೊಲೀಸರು ರಾಮುಗೌಡ ಮತ್ತು ಅಬೂಬಕರ್ ಖುರೇಶಿ ಇವರುಗಳನ್ನು ಬಂಧಿಸಿ ಒಂದು ಲಕ್ಷ ರೂ ಬೆಲೆ ಬಾಳುವ ಕೊಕೇನ್ ಮತ್ತು ಮೊಬೈಲ್ ಫೋನ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.