ಬೆಂಗಳೂರು: ಆಲ್ ಇಂಡಿಯಾ ಕಾಫಿ ವರ್ಕರ್ಸ್ ಕೋ ಆಪರೇಟಿವ್ ಸೊಸೈಟಿ ಫೆಡರೇಷನ್ ಲಿಮಿಟೆಡ್ ಡೆಲ್ಲಿ, ಪ್ರೆಸಿಡೆಂಟ್ ಮತ್ತು ಇಂಡಿಯನ್ ಕಾಫಿ ಹೌಸ್ ಅಧ್ಯಕ್ಷರು ಹಾಗೂ ಸಮಾಜ ಸೇವಕರು ಆಗಿರುವ ಓ.ಕೆ ರಾಜಗೋಪಾಲನ್ ರವರಿಗೆ ಇನ್ಸ್ಟಿನ್ ಇಂಟರ್ ನ್ಯಾಷನಲ್ ಯೂನಿವರ್ಸಿಟಿ ವತಿಯಿಂದ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಓ.ಕೆ.ರಾಜಗೋಪಾಲನ್ ರವರು 1949ರಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲೂರಿನಲ್ಲಿ ಜನಸಿದರು.ಮಾಧ್ಯಮಿಕ ಶಿಕ್ಷಣ ಮುಗಿಸಿದ ನಂತರ ಮಧ್ಯಪ್ರದೇಶದ ಜಬಲ್ಪುರಕ್ಕೆ ಹೋದರು, ನಂತರ ಇಂಡಿಯನ್ ಕಾಫಿ ಹೌಸ್ ನಲ್ಲಿ ಸಾಮಾನ್ಯ ಕೆಲಸಗಾರರಾಗಿ ಸೇರಿದರು.ಜಬಲ್ ಪುರ್ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಲ್.ಎಲ್.ಬಿ ಪದವಿ ಪಡೆದರು.
ರಾಜಗೋಪಾಲನ್ ಇಂಡಿಯ ಕಾಫಿ ಹೌಸ್ ಆಡಳಿತ ಮುಖ್ಯಸ್ಥರಾಗಿ ಮತ್ತು ಸೊಸೈಟಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿರಂತರ 22ವರ್ಷಗಳಿಂದ ಅಧ್ಯಕ್ಷ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಕಾರ್ಮಿಕರ ಹಿತಾಸಕ್ತಿ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಕುರಿತು ಆಡಳಿತ ಚರುಕುಗೊಳಿಸಿದರು.
ಇವರ ಆಡಳಿತದಲ್ಲಿ ಕಾಫಿ ಹೌಸ್ ಗಳನ್ನು ನವೀಕರಣ, ಆಧುನಿಕ ಶೈಲಿಗಳಲ್ಲಿ ಬದಲಾಯಿಸಲಾಯಿತು.ಓ.ಕೆ.ರಾಜಗೋಪಾಲನ್ ರವರ ದಕ್ಷ ಆಡಳಿತ ಇಂದು ಇಂಡಿಯ ಕಾಫಿ ಹೌಸ್ ವಿಶ್ವಮಟ್ಟದಲ್ಲಿ ಹೆಸರು ಗಳಿಸಿದೆ.