ಬೆಂಗಳೂರು: ವಿಕಲಚೇತನರಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳು ತಲುಪುವ ರೀತಿ ಕಲಸ ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಹೇಳಿದರು.ಇಂದು ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ವಿಕಲಚೇತನರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಕಲಚೇತನರ ಕುಂದು ಕೊರತೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಸರ್ಕಾರದಿಂದ ನೀಡುವ ಎಲ್ಲಾ ಯೋಜನೆಗಳು ಅವರಿಗೆ ತಲುಪುವ ರೀತಿ ಹೆಚ್ಚು ಪ್ರಚಾರ ನೀಡುವಂತೆ ಹೇಳಿದರು.ಸರ್ಕಾರದಿಂದ ಬರುವ ವಿವಿಧ ಯೋಜನೆಗಳ ಬಗ್ಗೆ ವಿಕಲಚೇತನರಿಗೆ ಹೆಚ್ಚು ಅರಿವು ಮೂಡಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದಿಂದ ವಿಕಲಚೇತನರಿಗೆ ಅನೇಕ ರೀತಿಯ ಸರ್ಕಾರಿ ಸೌಲಭ್ಯಗಳು ನೀಡುತ್ತಿದೆ. ವಿಕಲಚೇತನ ವಿದ್ಯಾರ್ಥಿ ವೇತನ ಈ ಯೋಜನೆ ಅಡಿಯ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಅಂಗವಿಕಲರು ತಮ್ಮ ದೈನಂದಿನ ಚಟುವಟಿಕೆಗಳನ್ನು ಸುಲಭವಾಗಿ ನಿರ್ವಹಿಸಲು ಅನುಕೂಲವಾಗುವಂತೆ ಅವರಿಗೆ ಅಗತ್ಯವಾದ ಸಾಧನ ಸಲಕರಣೆಗಳನ್ನು ಗರಿಷ್ಠ 15 ಸಾವಿರ ರೂ.ಗಳು ಮಿತಿಯೊಳಗೆ ಉಚಿತವಾಗಿ ವಿತರಿಸಲು ಅವಕಾಶವಿದೆ ಎಂದು ಹೇಳಿದರು.
ತೀವ್ರತರನಾದ ದೈಹಿಕ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ನೀಡುವ ಯೋಜನೆಯಡಿ ಈ ಸೌಲಭ್ಯ ಪಡೆಯಲು ಶೇಕಡ 75 ರಷ್ಟು ಅಂಗವಿಕಲತೆ ಹೊಂದಿರಬೇಕು. ವಾರ್ಷಿಕ ಆದಾಯ, ಸ್ಥಳ, ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
ಹೊಲಿಗೆ ಯಂತ್ರ, ಅಂಗವಿಕಲರ ಗ್ರಾಮೀಣ ಪುನರಾವರ್ತಿ ಕಾರ್ಯಕ್ರಮ ಯೋಜನೆಯಡಿ ಜಿಲ್ಲೆಯಲ್ಲಿರುವ ವಿಕಲಚೇತನರ ಸಮಸ್ಯೆ ಹಾಗೂ ಅಗತ್ಯಗಳನ್ನು ಅರಿತು ಗ್ರಾಪಂ ಮಟ್ಟದಿಂದ ತಾಪಂ ಮಟ್ಟದವರಿಗೂ ವಿಕಲಚೇತನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಲು ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕಾಗಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಒಬ್ಬ ವಿಆರ್ಡಬ್ಲ್ಯೂ ಹಾಗೂ ತಾಲ್ಲೂಕು ಪಂಚಾಯಿತಿ ಮಟ್ಟದಲ್ಲಿ ಎಂಆರ್ ಡಬ್ಲ್ಯೂ ರವರನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ.
ಮರಣ ಪರಿಹಾರ ನಿಧಿ ಯೋಜನೆ ಗ್ರಾಮೀಣ ಪುನರಾವರ್ತಿ ಯೋಜನೆ ಅಡಿ ಆಯ್ಕೆ ಮಾಡಿಕೊಂಡಿರುವ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುತ್ತಿರುವಾಗ ಮರಣ ಹೊಂದಿದ್ದಲ್ಲಿ ಅವರ ಕುಟುಂಬಕ್ಕೆ ರೂ.50,000 ಧನಸಹಾಯವನ್ನು ಮಂಜೂರು ಮಾಡಲು ಈ ಯೋಜನೆ ಅಡಿ ಅವಕಾಶವಿರುತ್ತದೆ.
ಆಧಾರ ಯೋಜನೆ: ವಿಕಲಚೇತನರು ಕೈಗೊಳ್ಳುವ ಸ್ವಯಂ ಉದ್ಯೋಗ ಯೋಜನೆಯಡಿ ಗರಿಷ್ಠ 1 ಲಕ್ಷಗಳ ವರೆಗೂ ಸಾಲವನ್ನು ಬ್ಯಾಂಕ್ ಮುಖಾಂತರ ಮಂಜೂರು ಮಾಡುವ ಅವಕಾಶವಿರುತ್ತದೆ ಬ್ಯಾಂಕುಗಳು ಮಂಜೂರು ಮಾಡಿರುವ ಮೊತ್ತಕ್ಕೆ ಅನುಗುಣವಾಗಿ ವಿಕಲಚತನರಿಗೆ ಸಹಾಯಧನವನ್ನು ಯೋಜನೆಯ ವೆಚ್ಚ ಶೇಕಡ 50ರಷ್ಟು ಅಥವಾ ಗರಿಷ್ಠ ಐವತ್ತು ಸಾವಿರದ ವೀರದಂತೆ ಸಹಾಯಧನ ಬಿಡುಗಡೆ ಮಾಡಲಾಗುತ್ತದೆ ಹಾಗೂ ಸಾಲದ ಮರುಪಾವತಿಯನ್ನು 36 ಮಾಸಿಕ ಕಂತುಗಳಲ್ಲಿ ಬ್ಯಾಂಕ್ ನಿಗದಿಪಡಿಸಿದ ಬಡ್ಡಿ ಸಮೇತವಾಗಿ ವಸೂಲಿ ಈ ಯೋಜನೆ ಮಾಡಬೇಕಾಗಿರುತ್ತದೆ.
ಸಾಧನೆ ಮತ್ತು ಪ್ರತಿಭೆ ಯೋಜನೆಯಡಿ ಅಂತರ್ ರಾಜ್ಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿದವರಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಇದೇ ರೀತಿ ಇನ್ನು ವಿವಿಧ ಯೋಜನೆಗಳನ್ನು ವಿಕಲಚೇತನರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಣಾಧಿಕಾರಿ ಪದ್ಮ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಮ್ಯ.ಎಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.