ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗೌರಿ ಕಲ್ಯಾಣ’ ಧಾರವಾಹಿಯು ವೀಕ್ಷಕರ ಮನಸೂರೆಗೊಂಡಿದೆ. ಇದೀಗ ಧಾರವಾಹಿಯ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ‘ಗೌರಿ ಕಲ್ಯಾಣ ಸೀರಿಯಲ್ ಸಂತೆ’ ಎಂಬ ವಿಶೇಷ ಕಾರ್ಯಕ್ರಮವು ತುಮಕೂರು ಜಿಲ್ಲೆ, ಚಿಕ್ಕನಾಯಕನ ಹಳ್ಳಿ ತಾಲ್ಲೋಕಿನ ‘ಹುಳಿಯಾರು ಪಟ್ಟಣ’ ದಲ್ಲಿ ಇದೇ ಮಾರ್ಚ್ 21, ಸಂಜೆ ಶನಿವಾರದಂದು ”ಶ್ರೀ ಸೇವಾಲಾಲ್ ಸಾಂಸ್ಕçತಿಕ ಸದನ”ದಲ್ಲಿ ನಡೆಯಲಿದೆ.
ಶನಿವಾರದಂದು ಗೌರಿ ಕಲ್ಯಾಣ ತಂಡವು ಹುಳಿಯಾರಿನ ಜನತೆಯನ್ನು ಭೇಟಿ ಮಾಡಲಿದೆ. ಅಂದು ಪ್ರಮುಖ ಜೋಡಿಯಾದ ಗೌರಿ ಮತ್ತು ವಿವೇಕ್ ವೇದಿಕೆಯ ಮೇಲೆ ಮಿಂಚಲಿದ್ದಾರೆ. ತಂಗಿಯಾಗಿ ಕಾಣಿಸಿಕೊಂಡಿರುವ ಮೋನಿಕಾ ಮತ್ತು ಅನನ್ಯ ಕೂಡ ಹೆಜ್ಜೆ ಹಾಕಲಿದ್ದಾರೆ. ಅಲ್ಲದೆ ‘ಶ್ರೀಗಂಧದ ಗುಡಿ’ಯ ಲೀಡ್ ಜೋಡಿಗಳಾದ ಹರಿ ಮತ್ತು ಚಂದನಾ ಕೂಡ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಹುಳಿಯಾರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಪ್ರವೇಶ ಉಚಿತವಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ. ಜತೆಗೆ ಕಲಾವಿದರೊಂದಿಗೆ ಫೋಟೋ ತೆಗೆಸಿಕೊಳ್ಳುವ ಅವಕಾಶ ಇರುತ್ತದೆ. ಟಿವಿದಲ್ಲಿ ನೋಡುವ ಪಾತ್ರಗಳನ್ನು ನೇರವಾಗಿ ಕಾಣುವ ಸುವರ್ಣ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿರೆಂದು ಕಲರ್ಸ್ ಕನ್ನಡ ವಾಹಿನಿಯು ಕೋರಿಕೊಂಡಿದೆ.
ಹುಳಿಯಾರಿನಲ್ಲಿ ಕಲರ್ಸ್ ಕನ್ನಡದ `ಗೌರಿ ಸೀರಿಯಲ್ ಸಂತೆ’ ಸಂಭ್ರಮ



