ಕನಕಪುರ: ದೇಗುಲಮಠದ ಶಾಖಾ ಮಠವಾದ ತೋಟಹಳ್ಳಿ ಮಠದ ಲಿಂಗೈಕ್ಯ ಶ್ರೀ ಬಸವಲಿಂಗಸ್ವಾಮಿಜೀಗಳ 19 ನೇ ವರ್ಷದ ಸಂಸ್ಮರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸೋಮವಾರ ಮುಂಜಾನೆ ತೋಟಹಳ್ಳಿ ಮಠದಲ್ಲಿ ಶ್ರೀ ದೇಗುಲಮಠದ ಶ್ರೀ ನಿರ್ವಾಣಾ ಸ್ವಾಮಿಜೀಗಳ ಪಾದಪೂಜೆ ಯೊಂದಿಗೆ ಶ್ರೀ ಮಠದ ಬಸವಪ್ರಭು ಸ್ವಾಮಿಜಿಗಳ ನೇತೃತ್ವ ದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು,ಕಾರ್ಯಕ್ರಮದ ಅಂಗವಾಗಿ ಶ್ರೀ ಮಠದಲ್ಲಿನ ದೇವರಿಗೆ ವಿಶೇಷ ಅಲಂಕಾರ ದೊಂದಿಗೆ ಪೂಜೆಯನ್ನು ನೆರವೇರಿಸಿ ಬಂದಂತಹ ಭಕ್ತಾಧಿಗ ಳಿಗೆ ಅನ್ನಸಂತರ್ಪಣೆಯ ಏರ್ಪಡಿಸಲಾಗಿತ್ತು,
ಲಿಂಗೈಕ್ಯ ಶ್ರೀಗಳ ಪೂಜೆ ನೆರವೇರಿಸಿದ ದೇಗುಲಮಠದ ಹಿರಿಯ ಶ್ರೀಗಳಾದ ನಿರ್ವಾಣಾಮಹಾಸ್ವಾಮಿಜಿ ಭಕ್ತಾದಿಗಳಿಗೆ ಆರ್ಶಿವಚನ ನೀಡಿ ಇಂದು ಮಠಮಾನ್ಯಗಳನ್ನು ನಡೆಸುವುದು ಬಹಳ ಕಷ್ಟಕರವಾಗಿದ್ದು, ದೇಗುಲಮಠದ ಶಾಖಾ ಮಠವಾದ ತೋಟಹಳ್ಳಿಯ ಈ ಮಠವು ಗ್ರಾಮೀಣ ಜನರಲ್ಲಿ ಧಾರ್ಮಿಕ ಭಕ್ತಿ ಭಾವನೆಗಳನ್ನು ಮೂಡಿಸಿ ಪೂಜೆ,
ಬಿನ್ನಹಗಳ ಮೂಲಕ ಅದರಲ್ಲೂ ವಿಶೇಷವಾಗಿ ಕೃಷಿ ಚಟುವಟಿಕೆಗಳನ್ನು ನಡೆಸುವ ಮೂಲಕ ಮಠವನ್ನು ತುಂಬಾ ಚೆನ್ನಾಗಿ ಮುನ್ನೆಡಿಸಿಕೊಂಡು ಬರುತಿರುವ ಸ್ವಾಮೀಜಿಗಳ ಕಾರ್ಯಶ್ಲಾಘನೀಯವಾಗಿದೆ. ಯಾವುದೇ ಲಾಭ,ಆಸೆ, ಆಕಾಂಕ್ಷೆ ಇಲ್ಲದೆ ಈ ಮಠವನ್ನು ನಡೆಸುತ್ತಿರುವ ಇಲ್ಲಿನ ಶ್ರೀಗಳ ಶ್ರಮಕ್ಕೆ ಭಕ್ತರ ಸಹಕಾರ ಬಹಳ ಅಗತ್ಯವಾಗಿದೆ ಎಂದು ತಿಳಿಸಿದರು.
ದೇಗುಲ ಮಠದ ಕಿರಿಯ ಚನ್ನಬಸವಸ್ವಾಮಿಜಿ, ಮರಳವಾಡಿ ಬಸವ ಗುರುಕುಲ ಮಠದ ಶ್ರೀ ಮೃತ್ಯುಂಜಯ ಸ್ವಾಮಿಜಿ, ಸಾತನೂರು ಮಠದ ನಿಜಗುಣಸ್ವಾಮಿಜಿ, ಅಲಸಹಳ್ಳಿ ಮಠದ ಮಹಂತ ಸ್ವಾಮಿಜಿ, ಹೊರಳಗಲ್ಲು ಮಠದಸಿದ್ದಲಿಂಗಸ್ವಾಮಿಜಿ ಸೇರಿದಂತೆ ಹಲವು ಮಠಾಧೀಶರು ಹಾಗೂ ಭಕ್ತಾಧಿಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.