ಬೆಂಗಳೂರು: ತಾವು ತಮ್ಮ ವಿರುದ್ಧ ಬರುವ ಟೀಕೆಗಳನ್ನು ಸ್ವಾಗತಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನಸಭೆಯಲ್ಲಿಂದು ಮಾತನಾಡಿದ ಅವರು, ತಮ್ಮ ವಿರುದ್ಧ ಕೇಳಿ ಬರುವ ಟೀಕೆಗಳಿಗೆ ತಾವು ಬೇಸರ ಮಾಡಿಕೊಳ್ಳುವುದಿಲ್ಲ. ಅವುಗಳನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ಚಿನ್ನವನ್ನು ಪರೀಕ್ಷೆ ಮಾಡಬೇಕೆಂದರೆ ಬೆಂಕಿಗೆ ಹಾಕುತ್ತಾರೆ. ಅದೇ ರೀತಿಯಾಗಿ ಮನುಷ್ಯರನ್ನು ಪರೀಕ್ಷೆ ಮಾಡಬೇಕಾದರೆ ಟೀಕೆಗಳು ಬರುತ್ತವೆ. ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ ಎಂದು ಹೇಳುತ್ತಾರೆ. ಮಾಧ್ಯಮಗಳ ವಿರುದ್ಧ ತಾವು ಬೇಸರಪಟ್ಟುಕೊಳ್ಳುವುದಿಲ್ಲ. ತಮ್ಮ ವಿರುದ್ಧ ರೇಡ್ ಆದಾಗ ಅನೇಕ ಮಾತುಗಳು ಕೇಳಿಬಂದವು. ಯಾವುದಕ್ಕೂ ಬೇಸರ ಮಾಡಿಕೊಳ್ಳದೆ ಕೆಲಸ ಮುಂದುವರಿಸಿಕೊAಡು ಹೋಗುತ್ತೇನೆ ಎಂದು ಅವರು ಹೇಳಿದ್ದಾರೆ.



