ಬೆಂಗಳೂರು: ಕರ್ನಾಟಕದಲ್ಲಿರುವ ನಿಮ್ಮ ಕಮಿಷನ್ ಚೋರ್ ಕಾಂಗ್ರೆಸ್ ಸರ್ಕಾರದಲ್ಲಿ ಕಾಮ್ ಚೋರ್ ಮಂತ್ರಿಗಳೇ ತುಂಬಿ ತುಳುಕುತ್ತಿತ್ದಾರೆ ಎಂದು ರಾಹುಲ್ಗಾಂಧಿ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಒಂದು ಕಡೆ ಆರೋಗ್ಯ ಸಚಿವ ದಿನೇಶ್ಗುಂಡೂರಾವ್ ಅವರು ಹಣಕಾಸು ಇಲಾಖೆಯಿಂದ ೮೮೦ ಕೋಟಿ ಅನುದಾನ ಬಿಡುಗಡೆ ಆಗಿದ್ದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖರೀದಿ ಮಾಡದೆ, ಸ್ಕಾ÷್ಯನಿಂಗ್ ಸೇವೆ ಒದಗಿಸುವ ಕಂಪನಿಗಳಿಗೆ ೧೪೩ ಕೋಟಿ ಬಾಕಿ ಬಿಲ್ ಪಾವತಿ ಮಾಡದೆ,
ಸಾರ್ವಜನಿಕರು ಪರದಾಡುವಂತೆ ಮಾಡಿದ್ದಾರೆ. ಇನ್ನೊಂದು ಕಡೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇಎಸ್ಐ ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಮಾಡಿದ ಕಂಪನಿಗಳಿಗೆ ೬೦ ಕೋಟಿ ಬಿಲ್ ಪಾವತಿ ಬಾಕಿ ಉಳಿಸಿಕೊಂಡು, ರೇಟ್ ಕಾರ್ಡ್ ಆಧಾರದಲ್ಲಿ ಔಷಧಿ, ಉಪಕರಣ ಖರೀದಿ ಮಾಡುವ ಮೂಲಕ ಕಾರ್ಮಿಕರ ಹಣ ಲೂಟಿ ಹೊಡೆಯಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ಎಲ್ಲ ಇಲಾಖೆಗಳಲ್ಲೂ ಹಿಂದಿನ ವರ್ಷಗಳದ್ದೇ ಸಾವಿರಾರು ಕೋಟಿ ಬಿಲ್ ಪಾವತಿ ಬಾಕಿ ಇರುವಾಗ ಈಗ ಇನ್ನೊಂದು ಬಜೆಟ್ ಮಂಡನೆ ಮಾಡಿ ಏನು ಸಾಧಿಸಲು ಹೊರಟಿದ್ದೀರಿ ಸ್ವಾಮಿ? ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ಸಲಹೆ ನೀಡಿದ್ದಾರೆ.
`ಕಮಿಷನ್ ಚೋರ್ ಸರ್ಕಾರ; ಕಾಮ್ ಚೋರ್ ಮಂತ್ರಿಗಳು!’



