ಬೆಂಗಳೂರು: ಗಲಾಟೆ ಸಂದರ್ಭದಲ್ಲಿ ಪೊಲೀಸರು ನಡೆಸುತ್ತಿದ್ದ ಲಾಠಿ ಪ್ರಹಾರಕೆ ಹೊಸ ರೂಪಾಂತರದಲ್ಲಿ ಪೊಲೀಸ್ ಲಾಠಿ ಪ್ರಹಾರ ಮಾಡುವ ವಿಧಾನವನ್ನು ಇಂದು ಬೆಳಿಗ್ಗೆ ನಡೆಸಿಕೊಟ್ಟರು.
ಮೈಸೂರ್ ರಸ್ತೆಯಲ್ಲಿರುವ ಸಿಎಆರ್ ಕೇಂದ್ರಸ್ಥಾನದಲ್ಲಿ ಇಂದು ಬೆಳಿಗ್ಗೆ ನಡೆದ ಪೊಲೀಸ್ ಆಯುಕ್ತರ ಮಾಸಿಕ ಪರೇಡ್ ನಲ್ಲಿ ಪಿ ಎ ಆರ್ ಕೇಂದ್ರ ವಿಭಾಗದ ಪೊಲೀಸರು ನಡೆಸಿಕೊಟ್ಟ ಹೊಸ ರೂಪಾಂತರದ ಲಾಠಿ ಪ್ರಹಾರವನ್ನು ಕವಾಯಿತಿನ ಮೂಲಕ ತೋರಿಸಿಕೊಟ್ಟ ಅಧಿಕಾರಿಮತ್ತು ಸಿಬ್ಬಂದಿಗಳಿಗೆ ನಗರ ಪೊಲೀಸ್ ಆಯುಕ್ತ ದಯಾನಂದ್ ರವರ ಮೆಚ್ಚುಗೆ ವ್ಯಕ್ತಪಡಿಸಿದರು.
ಸುಮಾರು 300 ಜನ ಮಹಿಳಾ ಸಿಬ್ಬಂದಿಗಳು ಸೇರಿದಂತೆ ನಡೆಸಿಕೊಟ್ಟ ಈ ಹೊಸ ಲಾಠಿ ಡ್ರಿಲ್ಗೆ ಸಂತೋಷ ವ್ಯಕ್ತಪಡಿಸಿದ ಆಯುಕ್ತರು ರೂ. 1 ಲಕ್ಷ ರೂ ಬಹುಮಾನವನ್ನು ಘೋಷಣೆ ಮಾಡಿದರು.ತದನಂತರ ಸುಮಾರು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ವಿವಿಧ ಪ್ರಕರಣಗಳಲ್ಲಿ 30 ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ತಲ ಹತ್ತು ಸಾವಿರ ರೂಗಳನ್ನು ಘೋಷಣೆ ಮಾಡಿದರು. ಹಾಗೂ ಇತರೆ ಪ್ರಕರಣಗಳಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸಿದ ಪೊಲೀಸರಿಗೆ ಪ್ರಶಂಸನಾ ಪತ್ರಗಳನ್ನು ಸಹ ವಿತರಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲಿಸ್ ಆಯುಕ್ತರುಗಳಾದ ಸತೀಶ್ ಕುಮಾರ್, ರಮಣ್ ಗುಪ್ತ ಮತ್ತು ಸಂಚಾರಿ ಜಂಟಿ ಪೆÇಲೀಸ್ ಆಯುಕ್ತ ಅನುಚ್ಛೇದ ಹಾಗೂ ಡಿಸಿಪಿಗಳು ಮತ್ತು ಎಸಿಪಿ ವರ್ಗದವರು ಹಾಜರಿದ್ದರು.