ಮಂಗಳೂರು : ಮೂಡಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಅವರ ಆಡಿಯೋ ಮತ್ತು ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಇನ್ಸ್ಪೆಕ್ಟರ್ ವರ್ತನೆಯಲ್ಲಿ ಲೋಪವಿರುವುದು ನಿಜವಾದರೂ, ಅವರ ವಿರುದ್ಧದ ಕೆಲವು ದೂರುಗಳು ಪೂರ್ವಗ್ರಹ ಪೀಡಿತ ಮತ್ತು ಸುಳ್ಳು ಎಂದು ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.ಇಬ್ಬರು ಮಹಿಳೆಯರ ಆರೋಪ ಸುಳ್ಳು ಎಂದು ಪೊಲೀಸ್ ವರದಿಯಲ್ಲಿ ತಿಳಿದು ಬಂದಿದೆ. ಮಾಧ್ಯಮಗಳ ಮುಂದೆ ಬಂದಿದ್ದ ಆ ಮಹಿಳೆಯರಿಗೆ ಕಿರುಕುಳ ನೀಡಿಲ್ಲ.



