ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗನ್ಗಳನ್ನು ಹಿಂದಿರುಗಿಸಲು ಸೂಚನೆ ನೀಡಲಾಗಿತ್ತಾದರೂ ಇವುಗಳ ಬಗ್ಗೆ ಕ್ರಮ ಜರುಗಿಸದ ಪೊಲೀಸ್ ಅಧಿಕಾರಿಗಳ ವಿರುದ್ಧ ನಗರ ಪೊಲೀಸ್ ಆಯುಕ್ತರು ಕೆಂಡಾಮಂಡಲರಾಗಿದ್ದಾರೆ.
ರೌಡಿಶೀಟರ್ಗಳ ಮನೆ ಮೇಲೆ ದಾಳಿ ನಡೆಸಿದಾಗ ಕೆಲವು ರೌಡಿಗಳ ಬಳಿಯೂ ಗನ್ ಇರುವುದು ಬೆಳಕಿಗೆ ಬಂದಿದೆ. ಅಶೋಕ್ ಅಡಿಗ ಸೇರಿದಂತೆ ಒಟ್ಟು 6 ರೌಡಿಶೀಟರ್ಗಳ ಬಳಿ ಗನ್ಗಳಿವೆ ಎಂಬ ಅಂಶ ತಿಳಿದುಬಂದಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಕೋಪಗೊಂಡ ಬೆಂಗಳೂರು ನಗರಪೊಲೀಸ್ ಆಯುಕ್ತಬಿ. ದಯಾನಂದ್, ಅಧಿಕಾರಿಗಳಿಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿ ದ್ದಾರೆ ಎಂದು ಹೇಳಲಾಗಿದೆ.