ಕನಕಪುರ: ನಗರದ ಆರ್ ಇ ಎಸ್ ಸಂಸ್ಥೆಯ ಆವರಣ ದಲ್ಲಿರುವ ಆರ್ ಎಂ ಪಿ ಎಚ್ ಎಸ್ ಶಾಲೆಯ ಬಿಸಿ ಯೂಟ ಸಹಾಯಕಿ ಗೌರಮ್ಮ ಎಂಬ ಮಹಿಳೆ ಅಡುಗೆ ಮಾಡುವಾಗ ಸಂಭವಿಸಿದ ಆಕಸ್ಮಿಕ ಅವಘಢಕ್ಕೆ ಸಿಲುಕಿ ಚಿಕಿತ್ಸೆ ಫಲಿಸದೆ ನೆನ್ನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತ ರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕನಕಪುರ ಪೋಲೀಸ್ ಠಾಣೆಯಲ್ಲಿ ಸಂಧಾನ ಸಭೆ ನಡೆಸಲಾಯಿತು.
ಮೃತ ಗೌರಮ್ಮ ನವರ ಕುಟುಂಬಕ್ಕೆ ಪರಿಹಾರಕ್ಕಾಗಿ ಆಗ್ರಹಿಸಿ ಸರ್ಕಲ್ ಇನ್ಸ್ಪೆಕ್ಟರ್ ಮಿಥುನ್ ಶಿಲ್ಪಿ ಯವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪ್ರತಿತಿಭಟನಾಕರರ ಆಗ್ರಹಕ್ಕೆ ಮಣಿದ ರೂರಲ್ ಕಾಲೇಜಿನ ಆಡಳಿತ ಮಂಡಳಿಯು ಸೂಕ್ತ ಪರಿಹಾರಕ್ಕೆ ಸಮ್ಮತಿ ಸೂಚಿಸಿ ಆಡಳಿತ ಮಂಡಳಿ ವತಿಯಿಂದ 2 ಲಕ್ಷ ಪರಿಹಾರ ಹಾಗೂ ಮೃತರ ಮಗ ಶಶಿಧರ್ ಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಲು ಒಪ್ಪಿಗೆ ಸೂಚಿಸಿದರು, ಶಾಲೆಯ ಮುಖ್ಯ ಶಿಕ್ಷಕ ಸಹ ವೈಫಲ್ಯದ ಹೊಣೆ ಹೊತ್ತು 2 ಲಕ್ಷ ಪರಿಹಾರ ನೀಡಲು ಒಪ್ಪಿಗೆ ಸೂಚಿಸಿ,
ಅಕ್ಷರ ದಾಸೋಹ ಹಾಗೂ ಶಿಕ್ಷಣ ಇಲಾಖೆಯಿಂದ 2 ಲಕ್ಷ ಹಾಗೂ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಪರಿಹಾರ ಕೊಡಿಸುವ ನಿರ್ಣಯ ಕೈಗೊಳ್ಳಲಾಯಿತು.ಶಾಂತಿ ಸಂಧಾನ ಸಭೆಯಲ್ಲಿ ಆರ್ ಇ ಎಸ್ ಸಂಸ್ಥೆಯ ಅಧ್ಯಕ್ಷ ಹೆಚ್.ಕೆ.ಶ್ರೀಕಂಠು, ಕಾರ್ಯದರ್ಶಿ ಪುಟ್ಟಸ್ವಾಮಿ, ನಿರ್ಧೇಶಕರಾದ ಕೆ. ಬಿ ನಾಗರಾಜು, ಎಂ.ಎಲ್ ಶಿವಕುಮಾರ್, ಮಂಜು ಹಾಗೂ ಮೃತರ ಪರ ಪ್ರಗತಿಪರ ಸಂಘಟನೆಯ ಅಧ್ಯಕ್ಷರಾದ ಕುಮಾರಸ್ವಾಮಿ, ಕನ್ನಡ ಭಾಸ್ಕರ್, ಪ್ರಶಾಂತ್ ಹೊಸದುರ್ಗ, ಕೋಟೆ ಕಿಟ್ಟಣ್ಣ, ನಂಜುಂಡಿ , ಬಿಸಿಯೂಟ ರಾಮನಗರ ಜಿಲ್ಲಾಧ್ಯಕ್ಷೆ ನಿರ್ಮಲ ಹೆಚ್ , ಎಸ್ ಡಿ ಎಂ ಸಿ ರಾಜ್ಯ ಉಪಾಧ್ಯಕ್ಷರಾದ ಎನ್ ಎಂ ಶಂಭುಗೌಡ , ಹಾಗೂ ಮೃತರ ಸಂಬಂಧಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.