ನವದೆಹಲಿ: ಭಾರತ ಕುಸ್ತಿ ಫೆಡರೇಷನ್ನ ಅಡ್ಹಾಕ್ ಸಮಿತಿಯು ಜೈಪುರದಲ್ಲಿ ಅಯೋಜಿಸಿರುವ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಷಿಪ್ನಲ್ಲಿ ಕುಸ್ತಿಪಟುಗಳು ಸ್ಪರ್ಧಿಸಿ. ಆದರೆ ಅಮಾನತುಗೊಂಡಿರುವ ಸಂಜಯ್ ಸಿಂಗ್ ನೇತೃತ್ವದ ಸಮಿತಿಯು ಪುಣೆಯಲ್ಲಿ ನಡೆಸಲಿರುವ ಟೂರ್ನಿಯಲ್ಲಿ ಬೇಡ ಎಂದು ಒಲಿಂಪಿಯನ್ ಸಾಕ್ಷಿ ಮಲಿಕ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹೇಳಿಕೆ ನೀಡಿರುವ ಅವರು, ‘ಅಡ್ಹಾಕ್ ಸಮಿತಿಯು ನಡೆಸಲಿರುವ ಟೂರ್ನಿಯು ಅಧಿಕೃತವಾಗಿದೆ. ಅಮಾನತುಗೊಂಡಿರುವ ಸಮಿತಿಯಿಂದ ನಡೆಸುವ ಟೂರ್ನಿಯಲ್ಲಿ ಭಾಗವಹಿಸಬೇಡಿ’ ಎಂದಿದ್ದಾರೆ. ಜೈಪುರದಲ್ಲಿ ರಾಷ್ಟ್ರೀಯ ಚಾಂಪಿಯನ್ಷಿಪ್ ಫೆ.2ರಿಂದ 5ರವರೆಗೆ ನಡೆಯಲಿದೆ.
‘ಡಬ್ಲ್ಯುಎಫ್ಐ ಪುಣೆಯಲ್ಲಿ ಸಂಘಟಿಸಲಿರುವ ಟೂರ್ನಿಯಲ್ಲಿ ಆಡುತ್ತೇವೆ. ನಮ್ಮ ಅಖಾಡದ ಎಲ್ಲರೂ ಅಲ್ಲಿಗೆ ಹೋಗುತ್ತೇವೆ. ಈ ವಿವಾದವು ಹರಿಯಾಣಕ್ಕೆ ಮಾತ್ರ ಸೀಮಿತವಾಗಿದೆ. ದೆಹಲಿ, ಪಂಜಾ ಬ್ ಮತ್ತು ರಾಜಸ್ಥಾನದ ಎಲ್ಲ ಕುಸ್ತಿಪಟುಗಳೂ ಪುಣೆಗೆ ಹೋಗುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಮಹಿಳಾ ಕುಸ್ತಿಪಟು ಹೇಳಿದ್ದಾರೆ.