ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಒಲವಿದೆ. ಜೆಡಿಎಸ್ ಪಕ್ಷದ ಭದ್ರಕೋಟೆ ಚಿಕ್ಕಬಳ್ಳಾಪುರ ಆದ್ರೆ ಇಲ್ಲಿ ಈ ಬಾರಿ ಹಣಬಲ ಹಾಗೂ ಸ್ವಾಭಿಮಾನದ ಮಧ್ಯ ಪೈಪೋಟಿ ನಡೆಯುತ್ತದೆ. ಕೆ.ಪಿ.ಬಚ್ಚೇಗೌಡರು ಪ್ರಮಾಣಿಕರು ಆದ್ರೆ ಭಯದ ವಾತಾವರಣ ಸೃಷ್ಟಿಸಿ ಚುನಾವಣೆ ನಡೆಸುವ ತಂತ್ರ ನಡೆಯುತ್ತಿದೆ. ಅದಕ್ಕೆ ಯುವ ಜನಾಂಗಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತೇನೆ ಎಂದು ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ದಿನೆದಿನೇ ಬೆಳವಣಿಗೆಯಾಗುತ್ತಿದೆ. ಕಳೆದ 45 ದಿನಗಳಿಂದ ಮನೆ ಮನೆ ಭೇಟಿ ನೀಡುತ್ತಿರುವ ಮಾಜಿ ಶಾಸಕ ಬಚ್ಚೇಗೌಡರು ಜನರಲ್ಲಿ ವಿಶ್ವಾಸ ಗಳಿಸುವ ಕೆಲಸ ಮಾಡ್ತಿದ್ದಾರೆ. ಇಂದು ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಂಚನಬಲೆ ಮದು ಹಾಗೂ ಅಂಗರೇಖನಹಳ್ಳಿ ರವಿಕುಮಾರ್ ಮನೆಗೆ ಭೇಟಿ ನೀಡಿ ಪಕ್ಷದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಲು ಹುರಿದುಂಬಿಸಿದರು.
ಪಕ್ಷದ ಬೆಳವಣಿಗೆ ಹಾಗೂ ಗೆಲುವಿಗೆ ಯುವಪಡೆಯನ್ನ ಚುರುಕುಗೊಳಿಸಲು ಇಬ್ಬರು ಜವಾಬ್ದಾರಿ ತೆಗೆದುಕೊಳ್ಳುವಂತೆ ಮಾತುಕತೆ ನಡೆಸಿದರು ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಚಿಕ್ಕಬಳ್ಳಾಪುರ ದಲ್ಲಿ ಈ ಭಾರಿ ಹಣ ಮತ್ತು ಸ್ವಾಭಿಮಾನದ ಮದ್ಯೆ ಕಧನ ನಡೆಯುತ್ತದೆ ಮಾಜಿ ಶಾಸಕ ಬಚ್ಚೇಗೌಡರು ಕೈ ಕಟ್ಟಿ ಕುಳಿತಿಲ್ಲ ಮನೆ ಮನೆ ಭೇಟಿ ಮಾಡಿ ಮತದಾರರ ಮನವೊಲಿಸುತಿದ್ದಾರ ಅವರೇನು ಇನ್ನೊಬ್ಬರ ಹಾಗೆ 50 ಲಕ್ಷಕ್ಕೋ ಒಂದು ಕೋಟಿಗೆ ಮಾರಾಟವಾಗೊ ವಸ್ತುವಲ್ಲ ಕ್ಷೇತ್ರದಲ್ಲಿ ಭಯದ ವಾತಾವರಣ ಸೃಷ್ಟಿಸಿ ಗೆಲ್ಲುವ ಕನಸು ಕಾಣುತ್ತಿರುವವರಿಗೆ ಸೋಲಿನ ರುಚಿ ತೋರಿಸುತ್ತಾರೆ ನಾನು ಯುವಕರ ಹಿಂದೆ ಇದ್ದು ಧೈರ್ಯ ತುಂಬುವ ಕೆಲಸ ಮಾಡುತ್ತೇನೆ ಎಂದರು.
ಈ ವೇಳೆ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ,ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ರಜಾ ಕಾಂತ್, ನಳಿನಿ ವೆಂಕಟೇಶ್,ಅಖಿಲ್ ರೆಡ್ಡಿ, ಮಂಚನಬಲೆ ಮದು, ಅಂಗರೇಖನಹಳ್ಳಿ ರವಿ, ವೀಣಾರಾಮು, ಅಣ್ಣೆಮ್ಮ, ಪ್ರಭಾನಾರಾಯಣಗೌಡ ಮತ್ತು ಇತರರು ಜತೆಗಿದ್ದರು.
Leave a Review