ಬೆಂಗಳೂರು: ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉರೇನಹಳ್ಳಿ ರಸ್ತೆಯಲ್ಲಿರುವ ವೀರ ರಾಘನ ಪಾಳ್ಯದಲ್ಲಿರುವ ಡಿಸಿಮಾ ಇಂಡಸ್ಟಿçಯಲ್ಲಿ ನಾಲ್ಕು ಕೋಟಿ ಹದಿಮೂರು ಲಕ್ಷ ರೂಪಾಯಿ ಬೆಲೆಬಾಳುವ ವಸ್ತುಗಳು ಕಳವಾಗಿರುತ್ತದೆ ಎಂದು ಯೋಗೇಶ್ ಕುಮಾರ್ ಮಾಲೀಕರು ದೂರನ್ನು ಸಲ್ಲಿಸಿರುತ್ತಾರೆ.
ಕಾರ್ಖಾನೆಯಲ್ಲಿ ರಾ ಮೆಟೀರಿಯಲ್ಗಳು, ಸಿಸಿ ಕ್ಯಾಮೆರಾ ಗಳು, ಡಿವಿಆರ್ ಗಳು, ಪ್ಲಾಂಟ್ ಮಿಷಿನರಿಗಳು ಹಾಗೂ ಇತರೆ ಸಾಮಾಗ್ರಿಗಳು ಕಳವಾಗಿರುತ್ತದೆ ಎಂದು ನೆಲಮಂಗಲ ಗ್ರಾಮಾಂತರ ಪೊಲೀಸರಿಗೆ ದೂರನ್ನು ಸಲ್ಲಿಸಿರುತ್ತಾರೆ.
ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.



