ಚಳ್ಳಕೆರೆ: ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಗೊಂಡು ತಹಶೀಲ್ದಾರರಿಗೆ ದೂರು ನೀಡಿದ್ದಾರೆ.ನಗರದ ಅಂಬೇಡ್ಕರ್ ನಗರದ ಮಹಿಳೆಯರು ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಕಾರ್ಡ್ ದಾರರಿಗೆ ಪಡಿತರ ವಿತರಣೆಯನ್ನು ತಿಂಗಳಲ್ಲಿ ಎರಡು ದಿನ ಮಾತ್ರ ವಿತರಣೆಯನ್ನು ಮಾಡಿ. ಬಾಗಿಲು ಹಾಕುತ್ತಾರೆ ಎಂದು ಮಹಿಳೆಯರ ದೂರಾಗಿದೆ.
ಮಹಿಳೆಯರು ಹೇಳುವಂತೆ ಪಡಿತರ ವಿತರಣೆಗೆ ಮುಂಚೆ ಬಯೋಮೆಟ್ರಿಕ್ ಬೆರಳಿನ ಗುರುತು ಪಡೆದು. ಪಡಿತರ ವಿತರಣೆಯನ್ನು ವಿಳಂಬ ಮಾಡಿ. ರೇಷನ್ ಬಂದಿಲ್ಲ ಎಂದು ಸುಳ್ಳು ಮಾಹಿತಿಯನ್ನು ನೀಡುತ್ತಾರೆ.ಸಂಬಂಧಪಟ್ಟ ಆಹಾರ ಇಲಾಖೆಯ ಫುಡ್ ಇನ್ಸ್ಪೆಕ್ಟರ್ ಹಾಗೂ ಫುಡ್ ಸಿರಸ್ತೆದಾರರಿಗೆ ಮೌಖಿಕ ದೂರು ಸಲ್ಲಿಸಿದಾಗ. ನ್ಯಾಯಬೆಲೆ ಅಂಗಡಿಯವರ ಪರವಾಗಿ ಮಾತನಾಡಿ. ಅವರು ಕೊಟ್ಟಾಗ ನೀವು ರೇಷನ್ ತೆಗೆದುಕೊಳ್ಳಬೇಕು. ಎಂದು ಹೇಳಿ ಕಳಿಸುತ್ತಾರೆ.
ತಮ್ಮ ನ್ಯಾಯಯುತ ಸರ್ಕಾರಿ ಪಡಿತರವನ್ನು ತೆಗೆದುಕೊಳ್ಳಲು ಕೊನೆಗೆ ಉಳಿದಿದ್ದು ಹೋರಾಟದ ಮಾರ್ಗ ಮಾತ್ರ ಎಂದು ನೊಂದ ಮಹಿಳೆಯರು ತಾಸಿಲ್ದಾರ್ ಅವರಿಗೆ ತಮ್ಮ ನೋವನ್ನು ಹೇಳಿಕೊಂಡರು.ಪ್ರತಿ ತಿಂಗಳು ಪಡಿತರ ತೆಗೆದುಕೊಳ್ಳುವಾಗ ಕಂಪ್ಯೂಟರ್ ಫೀಸ್ ಎಂದು ಒಬ್ಬರಿಗೆ ರೂ.20 ಗಳನ್ನು ವಸೂಲಿ ಮಾಡುತ್ತಾರೆ.
ಸರ್ಕಾರವು ಯಾವುದೇ ಶುಲ್ಕವಿಲ್ಲದೆ. ಪಡಿತರ ನೀಡುವುದಾಗಿ ಹೇಳಿದರೆ. ಇವರನ್ನು ಏಕೆ 20ರೂ ಕೊಡಬೇಕು ಎಂದು ಕೇಳಿದವರಿಗೆ ನಮ್ಮ ಮೇಲಿನ ಅಧಿಕಾರಿಗಳಿಗೆ ಕೊಡಬೇಕು ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಉತ್ತರಿಸುತ್ತಾರೆ.ಇವರ ದೂರನ್ನ ಸ್ವೀಕರಿಸಿದ ತಹಸಿಲ್ದಾರ್ರೆಹಾನ್ ಪಾಷಾ ಫುಡ್ ಶಿರಸ್ತೆ ದಾರ ವೀರಣ್ಣಅವರನ್ನು ಸಂಪರ್ಕಿಸಿದಾಗ.
ಈ ಅಧಿಕಾರಿ ಗೈರಾಜರಿಯಲ್ಲಿ. ಫುಡ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಅವರನ್ನು ಕರೆಸಿ. ಸಂಬಂಧಪಟ್ಟ ನಾಳೆ ಬೆಲೆಅಂಗಡಿ ಮಾಲೀಕನನ್ನು ಕರೆಸಿ. ಹಣ ಕೇಳುವುದಾಗಲಿ. ಸರ್ಕಾರಿ ಪಡಿತರ ವಿತರಣೆಯಲ್ಲಿ ವಿಳಂಬ ಮಾಡಿದರೆ. ನಿಮ್ಮ ಮೇಲೆ ನಾನು ಶಿಸ್ತಿನ ಕ್ರಮ ದಿರುಗಿಸಬೇಕಾಗುತ್ತದೆ ಎಂದು ಅಧಿಕಾರಿಗೆ ಎಚ್ಚರಿಸಿದರು.
ಇಲ್ಲಿಗೆ ಬಂದಿದ್ದ ಅನೇಕ ಪಡಿತರದಾರರು ಹೇಳುವಂತೆ ದರದಲ್ಲಿ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಈ ದೂರುಗಳು ಸರ್ವೇ ಸಾಮಾನ್ಯವಾಗಿವೆ. ಧ್ವನಿ ಎತ್ತಿ ಕೇಳುವ ಪಡಿತರದಾರರ ಕಾರ್ಡು ವಜಾ ಮಾಡುವು ದಾಗಿ. ತಮಗೆ ಬೆದರಿಕೆ ಹಾಕುತ್ತಾರೆ. ಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳೇ ನ್ಯಾಯಬೆಲೆ ಅಂಗಡಿ ಮಾಲೀಕ ರಿಂದ ಹಣದ ವಸೂಲಿಯಲ್ಲಿ ತೊಡಗಿದ್ದಾರೆ. ಎಂದು ತಮ್ಮ ಅಳಲನ್ನು ಪತ್ರಕರ್ತರೊಂದಿಗೆ ತೋಡಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ಅಂಬೇಡ್ಕರ್ ನಗರದ ದಲಿತ ಮುಖಂಡ ಭೀಮಣ್ಣ, ಸಮಾಜ ಸೇವಕ ಹಳೇ ಟೌನ್ ವೀರಭದ್ರ,ಇತರ ಮಹಿಳೆಯರು ಉಪಸ್ಥಿತರಿದ್ದರು.