ದೇವನಹಳ್ಳಿ: ನಮ್ಮ ರಾಜ್ಯದ ಯಾವುದೇ ಸಂಘ ಸಂಸ್ಥೆ,ಸಮುದಾಯಗಳ ಸಮಾವೇಶ ಮತ್ತು ಸಮ್ಮೇಳನಗಳು ಬರೀ ಮಾತಿನ ಉತ್ಸವಗಳಾಗಬಾರದು ಸಮಾಜದ ಪ್ರತಿಯೊಂದು ಸಮುದಾಯದ ವ್ಯಕ್ತಿಯ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಬೆಳವಣಿಗೆ ಹೊಂದಲು ಪೂರಕ ಕಾರ್ಯಕ್ರಮಗಳನ್ನು ನಡೆಸುವಂತಾಗಬೇಕು ಎಂದು ಸಮ್ಮೇಳನಾಧ್ಯಕ್ಷ ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಾಗೇಶ್.ವಿ.ಬೆಟ್ಟಕೋಟೆ ಹೇಳಿದರು.
ದೇವನಹಳ್ಳಿ ಟೌನ ನ ಡಾ.ಬಿ .ಆರ್ ಅಂಬೇಡ್ಕರ್ ಭವನದಲ್ಲಿ “ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ”ವನ್ನು ಸಮ್ಮೇಳನಾಧ್ಯಕ್ಷ ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಾಗೇಶ್.ವಿ.ಬೆಟ್ಟಕೋಟೆ ಅವರು ಉದ್ಘಾಟಿಸಿದರು.
ಹಿರಿಯ ವೈದ್ಯರು ಡಾ.ಟಿ.ಎಚ್.ಆಂಜಿನಪ್ಪ ಮಾತನಾಡಿ ಬೆಂಗಳೂರಿನಲ್ಲಿನ ಜನತೆಯ ಭಾಷಾವೈಖರಿ ಅನ್ಯ ಜಿಲ್ಲೆಗಳಿಗೆ ಹೋಲಿಸಿದರೆ ಬದಲಾವಣೆಗಳಿದ್ದರು ಇತ್ತೀಚಿನ ವಿದ್ಯಾಮಾನಗಳು ಗಮನಿದರೆ ಭಾಷಾಭಿಮಾನ ಇಲ್ಲಿಯವರೆಗೆ ಹೆಚ್ಚು ಆದರೆ ಕೆಲವು ಸಂದರ್ಭಗಳಲ್ಲಿ ಅವು ಅಭಾಸವಾಗದಂತೆ ಎಚ್ಚರ ವಹಿಸಬೇಕು ಹಾಗೂ ಇಂದಿನ ಯುವಕರು ಆರೋಗ್ಯದ ಬಗ್ಗೆ ಸಾಕಷ್ಟು ನಿಗಾ ಇರಬೇಕು, ನೋವಿಲ್ಲದ ಖಾಯಿಲೆಗಳ ಕುರಿತು ಜನರಲ್ಲಿ ನಿರ್ಲಕ್ಷ್ಯ ಬೇಡ ಹಾಗೆಯೇ ಶೀಘ್ರ ಕ್ಯಾನ್ಸರ್ ಚಿಕಿತ್ಸೆ ಕಾಯಿಲೆ ನಾಪತ್ತೆ ಆಗುತ್ತದೆ ಆದ್ದರಿಂದ ಯಾವುದೇ ಕಾಯಿಲೆಗಳನ್ನು ಶಿಸ್ತು ಬದ್ಧ ಆಹಾರ ಪದ್ದತಿ ಮತ್ತು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಹುಲಿಕಲ್ ನಟರಾಜ್ ಅವರು ಮಾತನಾಡಿ ಬರೀ ಮಾತಿನಲ್ಲಿ ಸಮಾಜದಲ್ಲಿ ಯಾವುದೇ ಬದಲಾವಣೆಗಳು ಸಾಧ್ಯವಿಲ್ಲ ವಾಸ್ತವವಾಗಿ ಸಮ್ಮೇಳನಗಳು ಹೆಸರು ಗಳಿಕೆಗೆ ಮಾತ್ರ ಆಚರಿಸಿದರೇ ಸಾಲದು ಸಮಾಜದ ಎಲ್ಲಾ ಧರ್ಮದವರನ್ನು ಒಗ್ಗೂಡಿಸಿ ಒಂದು ನೆಲೆಯಲ್ಲಿ ಹಲವಾರು ಸಾಮಾಜಿಕ ಅರಿವಿನ ಹಿನ್ನೆಲೆಯಳ್ಳ ಪುಸ್ತಕಗಳನ್ನು ಬಿಡುಗಡೆ ಮಾಡಿ ಇಂದಿನ ಯುವ ಸಮಾಜಕ್ಕೆ ಪ್ರೇರಣೆ ತುಂಬುವಂತಿರಬೇಕು ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಡ ಸಮ್ಮೇಳನದ ಅಧ್ಯಕ್ಷರ ಧರ್ಮಪತ್ನಿ ಪ್ರೊ. ಮಮತಾ, ಕಸಾಪ ಜಿಲ್ಲಾಧ್ಯಕ್ಷ ಪ್ರೊ . ಬಿ.ಎನ್.ಕೃಷ್ಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ,ತಾಲ್ಲೂಕು ಅಧ್ಯಕ್ಷ ಅರ್.ಕೆ.ನಂಜೇಗೌಡ, ನಿಕಟಪೂರ್ವ ಪ್ರಮೀಳಾ, ಗೌರವ ಕಾರ್ಯದರ್ಶಿಗಳಾದ ಪ್ರೊ.ರವಿಕಿರಣ್.ಕೆ.ಆರ್, ಸಂಘಟನಾ ಕಾರ್ಯದರ್ಶಿ ಶ್ರೀ ನಿವಾಸ್ ಗೌಡ, ಸಹ ಕಾರ್ಯದರ್ಶಿ ಕೆಂಪಣ್ಣ,ಜಿಲ್ಲಾ ಸಹ ಕಾರ್ಯದರ್ಶಿ ರಮೇಶ್ ಕುಮಾರ್ ,ಹೊಸಕೋಟೆ ತಾ.ಅಧ್ಯಕ್ಷ ಮುನಿರಾಜು, ನೆಲಮಂಗಲ ಅಧ್ಯಕ್ಷ ಪ್ರದೀಪ್ ಕುಮಾರ್,ಜಿಲ್ಲಾ ಪದಾಧಿಕಾರಿಗಳಾದ ಹೊಸಕೋಟೆ ಜಿ.ಶ್ರೀನಿವಾಸ್,ದೇವನಹಳ್ಳಿ ದೇವರಾಜು ,ಪ್ರವೀಣ್, ಪರಮೇಶ್ವರಯ್ಯ,ಚಂದ್ರಣ್ಣ,ಬೂದಿಗರೆ ಲೋಕೇಶ್, ವಿನೋದ್ ಕುಮಾರ್, ಬೂದಿಗೆರೆ ಪ್ರಕಾಶ್ ,ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳು,ಟೌನ್ ನ ಶಾಲಾ ಮತ್ತು ಕಾಲೇಜಿನ ವಿಧ್ಯಾರ್ಥಿಗಳು ಭಾಗವಹಿಸಿದ್ದರು.
Leave a Review