This is the title of the web page
This is the title of the web page

ಕೋಲಾರದಲ್ಲಿ ಗಾಯನ, ಕಲಿಕಾ ಶಿಬಿರ ಸಮಾರೋಪ ಸಮಾರಂಭ

ಕೋಲಾರ: ಇಂದಿನ ಪೀಳಿಗೆಯ ಮಕ್ಕಳಲ್ಲಿ ಸಹಜ ಬಾಲ್ಯದ ಅನುಭವ ಕೊರತೆ ಉಂಟಾಗುತ್ತಿದ್ದು, ಸಹಜ ಬಾಲ್ಯದ ಅನುಭವ ಮೂಡಿಸುವ ಹಾಡುಗಾರಿಕೆ ಶಿಭಿರಗಳ ಎಲ್ಲಾ ಕಡೆ ನಡೆಯಬೇಕು. ಆಗ ಮಾತ್ರ ಅದು ನೈಜ ಶಿಕ್ಷಣವೆನಿಸಿಕೊಳ್ಳಲಿದೆ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ಹೂಹಳ್ಳಿ ನಾಗರಾಜ್ ಅಭಿಪ್ರಾಯಪಟ್ಟರು.

ಕೋಲಾರ ನಗರದ ಗಮನ ಮಹಿಳಾ ಸಮೂಹದಲ್ಲಿ ಈನೆಲ ಈಜಲ ಕಲಾ ತಂಡ, ಗಮನ ಮಹಿಳಾ ಸಮೂಹ ಸಂಸ್ಥೆಯ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಗಾಯನ ಕಲಿಕಾ ಶಿಬಿರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮಕ್ಕಳಿಗೆ ಬೇಸಿಗೆ ಹಾಡುಗಾರಿಕೆ, ಆಟಗಳನ್ನು ಆಡಿಸುವ ಮೂಲಕ ಮಕ್ಕಳೊಂದಿಗೆ ನಲಿಯಬೇಕು.

ಆದರೆ ಮಕ್ಕಳ ಸಹಜ ಬಾಲ್ಯ ಸುಖದಿಂದ ವಂಚಿತರಾಗುತ್ತಿದ್ದು, ಪಟ್ಟಣ ಪ್ರದೇಶಗಳಲ್ಲಿ ಬಾಲ್ಯದ ಸವಿರುಚಿಯ ಅನುಭವವಿಲ್ಲದೇ ಯಾಂತ್ರಿಕ ಬದುಕಿನಲ್ಲಿ ಸಿಲುಕಿದ್ದಾರೆ ಎಂದರು.ತಂತ್ರಜ್ಞಾನ ಮನರಂಜನೆಗಳ ಮೇಲೆ ಅವಲಂಬಿತರಾಗಿ ಮಕ್ಕಳು ತಮ್ಮ ಸಹಜ ಬೆಳವಣಿಗೆ ಹಾಗೂ ಬದುಕಿನ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಈ ಕಾರಣದಿಂದ ರಜಾ ಕಾಲದಲ್ಲಿ ಬೇಸಿಗೆ ಶಿಬಿರಗಳು ಆಯೋಜನೆಗೊಳ್ಳುತ್ತಿದ್ದು ಪೋಷಕರು ಗತ್ಯಂತರವಿಲ್ಲದೇ ಇದನ್ನು ಆಶ್ರಯಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ ಈ ನೆಲ, ಈ ಜಲ, ಕಲಾ ತಂಡ ವೆಂಕಟಚಲಪತಿ ಅಭಿಪ್ರಾಯಪಟ್ಟರು.

ಭಾರತೀಯ ಸಂಸ್ಕøತಿ ಹಾಗೂ ಕಲೆ ಉಳಿಯ ಬೇಕಾದರೆ ಹಾಗೂ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳ್ಳಬೇಕಾದರೆ ಮಕ್ಕಳ ಆಸಕ್ತಿ ವಲಯವನ್ನು ಗುರುತಿಸಿ ಉತ್ತೇಜಿಸುವುದು ಶಿಕ್ಷಣ ಸಂಸ್ಥೆಗಳ ಹಾಗೂ ಪೋಷಕರ ಕರ್ತವ್ಯವಾಗಿದೆ. ಆಗ ಮಾತ್ರ ಮಕ್ಕಳು ಪರಿಪೂರ್ಣತೆ ಹೊಂದಿ ಅವರ ಸಾಮಥ್ರ್ಯಕ್ಕನುಗುಣವಾಗಿ ಗುರಿಸಾಧಿಸಲು ಸಾಧ್ಯ ಎಂದು ಪೋಸ್ಟ ನಾರಾಯಣಸ್ವಾಮಿ ಹೇಳಿದರು.