ಬೇತಮಂಗಲ: ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಮಂಗಲ ಗ್ರಾಮದಿಂದ ತಂಬಾರ್ಲಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಂದಾಜು ೮೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶಾಸಕಿ ರೂಪಕಲಾ ಅವರು ಡಾಂಬರೀಕರಣ ರಸ್ತೆ ಮಾಡುವ ಮೂಲಕ ದಶಕಗಳ ಬೇಡಿಕೆಯನ್ನು ಶಾಸಕರು ಈಡೇರಿಸಿದ್ದಾರೆ ಎಂದು ತಂಬಾರ್ಲಹಳ್ಳಿ ಗ್ರಾಮದ ಮುಖಂಡ ಮುನೇಗೌಡ ತಿಳಿಸಿದರು.
ಪಟ್ಟಣದ ಸಮೀಪದ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಮಂಗಲ ಗ್ರಾಮದಿಂದ ತಂಬಾರ್ಲಹಳ್ಳಿ ಗ್ರಾಮದ ರಸ್ತೆಯು ಗುಂಡಿ ಬಿದ್ದು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದ ಈ ರಸ್ತೆಯಿಂದ ಗ್ರಾಮಸ್ಥರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು.
ಜನರ ಮನವಿಗೆ ಸ್ಪಂದಿಸಿದ ಶಾಸಕರು, ವಿಶೇಷ ಅನುದಾನದಡಿ ಈ ರಸ್ತೆ ಕಾಮಗಾರಿಯನ್ನು ಮಂಜೂರು ಮಾಡಿಸಿದ್ದಾರೆ. ಪ್ರಸ್ತುತ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇದರಿಂದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.
ಜಿಲ್ಲೆಯಲ್ಲೇ ಕೆಜಿಎಫ್ ತಾಲೂಕು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಇದಕ್ಕೆ ಶಾಸಕರ ಇಚ್ಛಾಶಕ್ತಿ ಮತ್ತು ಮೂಲಸೌಕರ್ಯಗಳ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಿ ಕೈಗೊಳ್ಳಲಾಗಿದೆ ಎಂದರು.
ಜಯಮAಗಲ ಬಳಿ ಮಳೆಗಾಲದಲ್ಲಿ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು ಆದರೆ ಶಾಸಕರು ಸೇತುವೆ ನಿರ್ಮಾಣ ಮಾಡಿ ಬಹು ನಿರೀಕ್ಷಿತ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ ಎಂದರು.
ಗ್ರಾಮಸ್ಥರ ಹರ್ಷ: ತಮ್ಮ ಗ್ರಾಮಕ್ಕೆ ಸುಸಜ್ಜಿತ ರಸ್ತೆ ಒದಗಿಸಿಕೊಟ್ಟ ಶಾಸಕಿ ರೂಪಕಲಾ ಅವರ ಜನಪರ ಕೆಲಸಕ್ಕೆ ತಂಬಾರ್ಲಹಳ್ಳಿ ಹಾಗೂ ಜಯಮಂಗಲ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಗ್ರಾಮದ ಪರವಾಗಿ ಶಾಸಕರಿಗೆ ಆತ್ಮೀಯವಾಗಿ ಧನ್ಯವಾದಗಳನ್ನು ಅರ್ಪಿಸಲಾಗಿದೆ.
ದಿನನಿತ್ಯದ ಓಡಾಟಕ್ಕೆ ರಸ್ತೆ ತುಂಬಾ ಕಷ್ಟವಾಗಿತ್ತು. ಶಾಸಕರು ನಮ್ಮ ನೋವಿಗೆ ಸ್ಪಂದಿಸಿ ೮೦ ಲಕ್ಷ ವೆಚ್ಚದಲ್ಲಿ ರಸ್ತೆ ಮಾಡಿಸಿಕೊಡುತ್ತಿರುವುದು ಸಂತಸ ತಂದಿದೆ ಎಂದು ತಂಬಾರ್ಲಹಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗುತ್ತಿಗೆದಾರ ನಾರಾಯಣ ಸ್ವಾಮಿ, ಮುಖಂಡರಾದ ಮುನೇಗೌಡ, ನಂಜುAಡ ಗೌಡ, ರಮೇಶಪ್ಪ, ವೆಂಕಟರಾಮಪ್ಪ, ಜಯಮಂಗಲ ಮಣಿ, ರಾಮಚಂದ್ರ ಸೇರಿದಂತೆ ಸ್ಥಳೀಯ ಹಾಗೂ ಗ್ರಾಮಸ್ಥರು ಇದ್ದರು.
ಶಾಸಕಿ ರೂಪಕಲಾ ರವರಿಗೆ ಅಭಿನಂದನೆ



