This is the title of the web page
This is the title of the web page

ಸಾಧಕರಿಗೆ ಅಭಿನಂದನೆ ಶ್ಲಾಘನೀಯ: ವಿ.ಅರವಿಂದ

ದೇವನಹಳ್ಳಿ: ಜೇಸಿಐ ದೇವನಹಳ್ಳಿ ಸಂಸ್ಥೆ ಪ್ರಾರಂಭವಾದಗಿನಿಂದ ಜೇಸಿಐ ಪ್ರೋತ್ಸಾಹಕರ ಸದಸ್ಯರ ಕುಟುಂಬದವರಿಗೆ   ಹಾಗೂ ಸಮಾಜ ಸೇವೆಯಲ್ಲಿ ರುವ ನಿಸ್ವಾರ್ಥ ಸಾಧಕರಿಗೆ ಅಭಿನಂದಿಸುತ್ತಿರುವುದು ಉತ್ತಮ ಶ್ಲಾಘನೀಯ ಎಂದು ಜೇಸಿ ಪೂರ್ವ ವಲಯ ನಿರ್ದೇಶಕ ವಿ.ಅರವಿಂದ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕೋರಚರಪಾಳ್ಯ ಶಾಲೆ ಆವರಣದಲ್ಲಿ ಜೇಸಿಐ ಅಭಿನಂಧನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಪ್ತಾಹದ 6ನೇ ದಿನದ ಅಂಗವಾಗಿ ಏರ್ಪಡಿಸಿದ್ದ ಅಭಿನಂಧನ ಕಾರ್ಯಕ್ರಮದಲ್ಲಿ ಜೇಸಿಐ ಸಂಸ್ಥೆಗೆ ಬೆನ್ನುಲುಬಾಗಿ  ಪ್ರೋತ್ಸಾಹಿಸಿದ ಯಶೋದಮ್ಮನವರಿಗೆ ಮತ್ತು ಶಿಕಕ್ಷರಾಗಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಶಿವಕುಮಾರ್, ಹಾಗೂ ತಾಲ್ಲೂಕು ಕಛೇರಿಯಲ್ಲಿ ತಹಸೀಲ್ದಾರ್ ವಾಹನಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಾಸುದೇವ ಮೂರ್ತಿರವರಿಗೆ ಅಭಿನಂದಿಸಿ ಗೌರವಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ಜೇಸಿಐ ಅಧ್ಯಕ್ಷ ವೇಣುಗೋಪಾಲ್, ಕಾರ್ಯದರ್ಶಿ ಅಮರ್, ನಿಕಟ ಪೂರ್ವಾಧ್ಯಕ್ಷ ಪ್ರವೀಣ್ ಕುಮಾರ್, ನಿಯೋಜಿತ ಅಧ್ಯಕ್ಷ ಕಿರಣ್, ಯೋಜನಾ ನಿರ್ದೇಶಕ ವಾಸುದೆವ ಹರೀಶ್, ಪೂರ್ವಾಧ್ಯಕ್ಷರುಗಳಾದ ಜೇಸಿ ಪೌಂಡೇಶನ್ ಅಧ್ಯಕ್ಷ ಜಿ.ಎ ರವೀಂದ್ರ, ಕಾರ್ಯದರ್ಶಿ ಎಂ.ಆನಂದ, ಖಜಾಂಚಿ ಎಸ್.ವಿ ಮಂಜುನಾಥ್, ಡಿ.ಎನ್ ನಾರಾಯಣಸ್ವಾಮಿ, ವಿಜಯಕುಮಾರ್, ನಾಗೇಂದ್ರಪ್ರಸಾದ್, ಹಾಜರಿದ್ದರು