ಬೆಂಗಳೂರು: ಗೋವಿಂದರಾಜನಗರ ಮಂಡಲ ಬಿಜೆಪಿ ಕಚೇರಿಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣರವರಿಗೆ ಮತ್ತು ದಕ್ಷಿಣ ಲೋಕಸಭಾ ಅಭ್ಯರ್ಥಿ ತೇಜಸ್ವಿಸೂರ್ಯರವರಿಗೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಮಂಡಲ ಬಿಜೆಪಿ ವತಿಯಿಂದ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಬಿಜೆಪಿ ಯುವ ಮುಖಂಡರಾದ ಡಾ||ಅರುಣ್ ಸೋಮಣ್ಣರವರು ಅಧ್ಯಕ್ಷರಾದ ವಿಶ್ವನಾಥಗೌಡ, ಬಿಜೆಪಿ ಮುಖಂಡರುಗಳು ಹೂಗುಚ್ಚ ನೀಡಿ, ಅಭಿನಂದನೆ ಸಲ್ಲಿಸಿ, ಶುಭ ಕೋರಿದರು.ವಿ.ಸೋಮಣ್ಣರವರು ಮಾತನಾಡಿ ಬಿಜೆಪಿ ಪಕ್ಷದ ಹೈಕಮಾಂಡ್ ನನ್ನ 45ವರ್ಷದ ರಾಜಕೀಯ ಸೇವೆ ಗುರುತಿಸಿ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನನ್ನ ಹೆಸರು ಘೋಷಣೆ ಮಾಡಿದೆ.
ಜನರ ಸೇವೆ ಮಾಡಲು , ರಾಜಕೀಯ ಕ್ಷೇತ್ರದಲ್ಲಿ ಯಶ್ವಸಿಯಾಗಲು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಮತ್ತು ಅದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರ ಆಶೀರ್ವಾದ, ಮಾರ್ಗದರ್ಶನ ಕಾರಣ. ತುಮಕೂರು ಲೋಕಸಭಾ ಕ್ಷೇತ್ರ ನನ್ನ ಕರ್ಮಭೂಮಿ ,
ನನಗೆ ಹೊಸದಲ್ಲ ಕ್ಷೇತ್ರದಲ್ಲಿ ಸೋಮಣ್ಣ ಯಾರು ಎಂಬುದು ಪ್ರತಿಯೊಬ್ಬ ಮತದಾರರಿಗೆ ಗೊತ್ತು. ಪ್ರಧಾನಿ ನರೇಂದ್ರಮೋದಿರವರ ದೂರದೃಷ್ಟಿ ಚಿಂತನೆ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ರಾಜಕೀಯ ಹಿರಿತನ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜಯಭೇರಿ ಪಡೆಯುವುದು ಖಚಿತ ಎಂದರು.
ಪ್ರಧಾನಿ ನರೇಂದ್ರಮೋದಿರವರ ಭವ್ಯ ಭಾರತ ಕನಸು, ನನಸು ಮಾಡಲು ದೇಶದ ನಾಗರಿಕರು ಸಹಕಾರ ನೀಡಬೇಕು. ಪ್ರಧಾನಿ ನರೇಂದ್ರಮೋದಿರವರು, ಕೇಂದ್ರ ಸಚಿವರಾದ ಅಮಿತ್ ಷಾ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪರವರು, ಬಸವರಾಜ್ ಬೊಮ್ಮಾಯಿ, ಹೆಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರಾದ ಪ್ರಲ್ದಾದ್ ಜೋಷಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಜೀ,
ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಮತ್ತು ಸಂಸದರಾದ ಜಿ.ಎಸ್.ಬಸವರಾಜ್ ಮತ್ತು ಬಿಜೆಪಿ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರರವರ ನೇತೃತ್ವದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟ 28ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ತೇಜಸ್ವಿ ಸೂರ್ಯರವರು ಮಾತನಾಡಿ ಪ್ರಾಮಾಣಿಕತೆ, ಕೆಲಸ ಮಾಡುವವರಿಗೆ ಬಿಜೆಪಿ ಪಕ್ಷ ಅವಕಾಶ ನೀಡತ್ತದೆ. 5 ವರ್ಷದಲ್ಲಿ ನಿಮ್ಮ ಪ್ರೀತಿ, ವಿಶ್ವಾಸ ಗಳಿಸಿದ್ದೇನೆ.ಮನೆ ಮಗನಂತೆ ಕಂಡಿದ್ದೀರ, ದೇಶದ ಜನರು ಬಿಜೆಪಿ ಪಕ್ಷಕ್ಕೆ ಓಟು ಹಾಕಲು ಕಾಯುತ್ತಿದ್ದಾರೆ, 25ಕೋಟಿ ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ.
ಬೆಂಗಳೂರುನಗರಕ್ಕೆ ಸಬ್ ಅರ್ಬನ್ ರೈಲು, 74ಕಿಲೋ ಮೀಟರ್ ಮೆಟ್ರೋ, ರಾಷ್ಟ್ರೀಯ ಭದ್ರತಾ ದಳ ಸ್ಥಾಪನೆ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅಮೇರಿಕಾ ಕಾನ್ಸುಲೇಟ್ ಕಛೇರಿ ಮತ್ತು 132ಜನೌಷಧಿ ಮಳಿಗೆ, ಬೆಂಗಳೂರುನಗರದಲ್ಲಿ 14ಸಾವಿರ ಮನೆಗಳನ್ನು ಪ್ರಧಾನಿ ಅವಾಸ್ ಯೋಜನೆಯಲ್ಲಿ ಮನೆ ನಿರ್ಮಿಸಲಾಗಿದೆ.
ಅಭಿವೃದ್ದಿ ಕೆಲಸಗಳು ಮತ್ತು ದೇಶ ಹಿತರಕ್ಷಣೆಗಾಗಿ ಜನರು ಬಿಜೆಪಿ ಮತ ನೀಡಬೇಕು ಈ ಬಾರಿ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದೆ ಎಂದು ಹೇಳಿದರು.ವಿಜಯನಗರ ಮಂಡಲ ಬಿಜೆಪಿ ಅಧ್ಯಕ್ಷ ಟಿ.ವಿ.ಕೃಷ್ಣ, ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಮ್ಮ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮೋಹನ್ ಕುಮಾರ್, ಬಾಬಿ ವೆಂಕಟೇಶ್, ಬಿಜೆಪಿ ಮುಖಂಡರುಗಳಾದ ಕ್ರಾಂತಿರಾಜು, ಸಿದ್ದಾರ್ಥ, ಸಿ.ಎಂ.ರಾಜಪ್ಪ, ಡೊಡ್ಡವೀರಯ್ಯ ಮತ್ತು ಬಿಜೆಪಿ ಕಾರ್ಯಕರ್ತರುಗಳು ಭಾಗವಹಿಸಿದ್ದರು.