ಮುಳಬಾಗಿಲು: ಸಾಮಾಜಿಕ ಕಳಕಳಿಯ ವ್ಯಕ್ತಿಯಾಗಿದ್ದು ಈಗ ಮುಳಬಾಗಿಲು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ಆರ್ ಎಸ್ ಸುಹಾಸ್ ಶೆಟ್ಟಿಯವರಿಗೆ ಸಿಕ್ಕಿರುವ ಅಧಿಕಾರದಲ್ಲಿ ಜನರಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಬಹುದು ಎಂದು ಕೋಲಾರ ಶಾಸಕ ಮತ್ತು ಜಿ ಮಂಜುನಾಥ್ ತಿಳಿಸಿದರು.
ನಗರದ ಬಜಾರು ರಸ್ತೆಯಲ್ಲಿರುವ ವಾಸವಿ ಭವನದಲ್ಲಿ ನೂತನವಾಗಿ ನೇಮಕಗೊಂಡಿರುವ ಆರ್ ಎಸ್ ಸುಹಾಸ್ ಶೆಟ್ಟಿ ಅವರಿಗೆ ಏರ್ಪಡಿಸಿದ್ದ ಅಭಿನಂದನ ಸಮಾರಂಭದಲ್ಲಿ ಮಾತನಾಡಿ. ಆರ್ಯ ಏಷ್ಯ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾತಿನಿಧ್ಯತೆ ನೀಡುತ್ತಿದೆ. ಇವರು ನೇಮಕಕ್ಕೆ ಕಾಂಗ್ರೆಸ್ ಮುಖಂಡ ವಿ ಆದಿನಾರಾಯಣ ಪ್ರಮುಖ ಪಾತ್ರ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಎಂಎಲ್ಸಿ ಅನಿಲ್ ಕುಮಾರ್ ಹಾಗೂ ನಾನು ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಕಾರ ವಿತ್ತು ಆರ್ ಎಸ್ ಸುಹಾಸ್ ಶೆಟ್ಟಿ ತಾಲ್ಲೂಕಿನ ಜನರಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಬಹುದು ಎಂದರು.
ಅವನಿಗೆ ಬ್ಲಾ÷್ಯಕ್ ಕಾಂಗ್ರೆಸ್ ಅಧ್ಯಕ್ಷ ವಿ ಆದಿ ನಾರಾಯಣ ಮಾತನಾಡಿ. ಆರ್ಯವೈಶ್ಯ ಸಮುದಾಯದ ಕೆವಿ ರಾಮ ಪ್ರಸಾದ್ ಅವರಿಗೆ ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ. ಇದೇ ಸಮುದಾಯದ ಆರ್ ಎಸ್ ಶೆಟ್ಟಿ ಅವರಿಗೆ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷ ನೀಡಿದೆ. ಈ ಕಾರಣದಿಂದ ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯಾದ ನನಗೆ ಸಂಪೂರ್ಣ ಬೆಂಬಲ ನೀಡಬೇಕು ಎಂದರು.
ನಗರದಲ್ಲಿ 100 ಎಕರೆ ಜಮೀನನ್ನು ಸರ್ಕಾರದಿಂದ ಶಾಸಕ ಕೊತ್ತೂರ್ ಜಿ ಮಂಜುನಾಥ್ ಮಂಜೂರು ಮಾಡಿಸಿಕೊಟ್ಟರೆ ಬಡವರ್ಗದವರಿಗೆ ಪದಾಧಿಕಾರದ ವತಿಯಿಂದ ನಿವೇಶನಗಳನ್ನು ನೀಡಬಹುದು ತಾಲೂಕಿನಲ್ಲಿ ಆರ್ಯವೈಶ್ಯ ಸಮುದಾಯದ ಯುವಕರಿಗೆ ನಾನಾ ಸಂಸ್ಥೆಗಳಲ್ಲಿ ನಾಮನಿಗಳಿಗೆ ಅವಕಾಶ ನೀಡುವುದರ ಜೊತೆಗೆ ಮುಂದೆ ನಡೆಯುವ ಸ್ಥಳೀಯ ಸಂಸ್ಥೆ ಗಳ ಚುನಾವಣೆಗಳಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷ ಆರ್ ಎಸ್ ಸುಹಾಸ್ ಶೆಟ್ಟಿ ಮಾತನಾಡಿ. ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಾಗಲು ಉಸ್ವಾರಿ ಸಚಿವರು ಬೈರತಿ ಸುರೇಶ್. ಕೋಲಾರ ಶಾಸಕ ಕೊತ್ತೂರು ಮಂಜುನಾಥ್. ಎಂಎಲ್ಸಿ ಅನಿಲ್ ಕುಮಾರ್. ಅವನಿಗೆ ಬ್ಲಾ÷್ಯಕ್ ಕಾಂಗ್ರೆಸ್ ಅಧ್ಯಕ್ಷ ವಿ ಅದಿನಾರಾಯಣ ಸೇರಿದಂತೆ ಇದ್ರೆ ಪಕ್ಷದ ಮುಖಂಡ ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರಿಗೆ ಈ ಮೂಲಕ ಕೃತಜ್ಞತೆಗಳನ್ನು ಬಯಸುತ್ತೇನೆ ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ತಿಳಿಸಿದರು.
ಜೈವಿಕ ಇಂಧನ ಮಂಡಳಿ ಮಾಜಿ ಉಪಾಧ್ಯಕ್ಷ ಜಿ ರಾಮಲಿಂಗ ರೆಡ್ಡಿ. ತಾಲೂಕು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಡಾ ಆರ್ ಆರ್ ಪ್ರಕಾಶ್. ಕಾರ್ಯದರ್ಶಿ ವೈಎಸ್ ಸುಬ್ಬಯ್ಯಶೆಟ್ಟಿ. ಜಂಟಿ ಕಾರ್ಯದರ್ಶಿ ಎಎಸ್ ಕಾಶಿ ವಿಶ್ವನಾಥ್ ಶೆಟ್ಟಿ. ನಿರ್ದೇಶಕರಾದ ಆರ್ ಎಸ್ ಸುಬ್ರಮಣ್ಯಂ. ಪಿ ಟಿ ಕೃಷ್ಣಮೂರ್ತಿ. ಬಿ ಆರ್ ಶಿವಕುಮಾರ್. ಡಾ. ಆರ್ ಆರ್ ನರೇಂದ್ರ. ಬಿಜೆಪಿ ಮುಖಂಡ ಎಂಪಿ ಅನಿಲ್ ಕುಮಾರ್. ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಆರ್ ಆರ್ ರಾಜೇಂದ್ರ ಗೌಡ. ಮುಖಂಡ ಎಂ ಗೋಪಾಲ್. ದರ್ಕಾಸ್ತು ಸಮಿತಿ ಸದಸ್ಯ ಜಮ್ಮನಹಳ್ಳಿ ಕೃಷ್ಣಪ್ಪ. ಸಮಾಜ ಸೇವಕ ಸಂಗೊಳ್ಳಿ ವೆಂಕಟೇಶ್ ಮತ್ತಿತರರು ಹಾಜರಿದ್ದರು.
ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಸುಹಾಸ್ ಶೆಟ್ಟಿ ನೇಮಕ: ಅಭಿನಂದನಾ ಸಮಾರಂಭ



