ಬೇಲೂರು: ಬೇಲೂರು ವಿಧಾನಸಭಾ ಕ್ಷೇತ್ರದ ಸಮಾವೇಶ ಮತ್ತು ಬೃಹತ್ ಮೆರವಣಿಗೆಯನ್ನು ಅತ್ಯಂತ ಸಂಭ್ರಮದಿಂದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ನಡೆಸಲಾಯಿತು.
ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ಆಕಾಂಕ್ಷೆಗಳಾದ ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಇ.ಹೆಚ್.ಲಕ್ಷ್ಮಣ್, ಕಾಂಗ್ರೆಸ್ ಮುಖಂಡರಾದ ಗ್ರಾನೈಟ್ ರಾಜಶೇಖರ ಮತ್ತು ವೈ.ಎನ್.ಕೃಷ್ಣೇಗೌಡ ಇವರ ನೇತೃತ್ವದಲ್ಲಿ ತಾಲ್ಲೂಕಿನ ಮಾದೀಹಳ್ಳಿ ಹೋಬಳಿ ಹಗರೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶ ಮತ್ತು ಬೃಹತ್ ಸಮಾವೇಶದ ಅಂಗವಾಗಿ ಹಗರೆಯ ಮುಖ್ಯರಸ್ತೆಯಲ್ಲಿ ಸಾವಿರಾರು ಕೈ ಪಡೆಯೊಂದಿಗೆ ನಾಶಿಕ್ ಡೋಲಿನೊಂದಿಗೆ ಹೊರಟ ಮೆರವಣಿಗೆಯಲ್ಲಿ ಗ್ರಾನೈಟ್ ರಾಜಶೇಖರ ಮತ್ತು ವೈ.ಎನ್.ಕೃಷ್ಣೇಗೌಡ ಇವರನ್ನು ಹೆಗಲ ಮೇಲೆ ಹೊತ್ತ ಅಭಿಮಾನಿಗಳು ತಮ್ಮ ನಾಯಕರಿಗೆ ಹಾಗೂ ಕಾಂಗ್ರೆಸ್ ಪಕ್ಷದ ಪದವಾಗಿ ಘೋಷಣೆ ಹಾಕುತ್ತಾ ನಾಶಿಕಗ ಡೋಲಿನ ತಾಳಕ್ಕೆ ಯುವಕರು ಸೇರಿದಂತೆ ಇನ್ನೂ ಮುಂತಾದವರು ಕುಣಿದು ಕುಪ್ಪಣಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿ ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ, ಈಗಾಗಲೇ ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷೆಗಳಾಗಿ ನಾನು, ವೈ.ಎನ್.ಕೃಷ್ಣೇಗೌಡ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವೈ.ಎನ್.ಕೃಷ್ಣೇಗೌಡ ಚುನಾವಣೆ ಸ್ಪರ್ದಿಸಲು ಅರ್ಜಿ ಸಲ್ಲಿಸಿದ್ದು, ಸಂಘಟನೆ ಮತ್ತು ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಜನರಿಗೆ ತಿಳಿಸಲು ಈಗಾಗಲೇ ಕಸಬಾ, ಹಳೇಬೀಡು, ಜಾವಗಲ್ ನಲ್ಲಿ ಬೃಹತ್ ಮಟ್ಟದ ಸಮಾವೇಶ ನಡೆಸಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಲಾಗಿದೆ. ಅಂತಯೇ ಇಂದು ನಡೆಯುತ್ತಿರುವ ಹಗರೆ ಕಾಂಗ್ರೆಸ್ ಸಮಾವೇಶ ಮತ್ತು ಬೃಹತ್ ಮೆರವಣಿಗೆ ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ವೈ.ಎನ್.ಕೃಷ್ಣೇಗೌಡ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಜನ ವಿರೋಧಿ ಆಡಳಿತ ನೀಡುತ್ತಾ ಬಂದಿದೆ.ಇಂತಹ ಸರ್ಕಾರವನ್ನು ಕಿತ್ತು ಹಾಕಿ ಕಾಂಗ್ರೆಸ್ ಸರ್ಕಾರಕ್ಕೆ ತಾವುಗಳು ಬೆಂಬಲ ನೀಡಬೇಕು. ವಿಶೇಷವಾಗಿ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ನಾನು ಸೇರಿ ಗ್ರಾನೈಟ್ ರಾಜಶೇಖರ ಮತ್ತು ಇ.ಹೆಚ್.ಲಕ್ಷ್ಮಣ್ ಅವರು ಒಟ್ಟಾಗಿ ಸೇರಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಿರ್ತನಾ ರುದ್ರೇಶ್ ಗೌಡ, ಬಿ.ಎಲ್.ಧರ್ಮೇಗೌಡ, ವಿಜಯಕುಮಾರ್, ಗಂಗಾಧರ, ಚಿಕ್ಕಬ್ಯಾಡಿಗೆರೆ ಮಂಜುನಾಥ, ಇಬ್ಬಿಡು ರಮೇಶ್, ಮಾದೇಗೌಡ, ಧನಪಾಲ್, ಎಂ.ಜೆ.ನಿಂಗರಾಜ್, ಹಾರೋಹಳ್ಳಿ ಪಾಪಣ್ಣ, ಹಳೇಬೀಡು ಕುಮಾರಣ್ಣ. ಹಳೇಬೀಡು ಮತ್ತು ಜಾವಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿರೂಪಾಕ್ಷ. ಹಗರೆಯ ರಾಮೇಗೌಡ, ಭೀಮೇಗೌಡ, ತಟ್ಟೆಹಳ್ಳಿ ದರ್ಶನ, ಲೀಲಾ ವೆಂಕಟೇಶ್, ಜೀಪು ಚಂದ್ರಣ್ಣ, ಯುವ ಘಟಕ ಅಧ್ಯಕ್ಷ ದರ್ಶನ, ರಾಯಪುರ ಶಿವಣ್ಣ, ಜಿಲ್ಲಾ ಅಧ್ಯಕ್ಷ ರಂಜಿತ್, ಜುಬೇರ್ ಅಹಮದ್, ಗೆಂಡೇಹಳ್ಳಿ ಚೇತನ್, ಗೋಬಿ ಕುಮಾರ್ ಇನ್ನೂ ಮುಂತಾದವರು ಹಾಜರಿದ್ದರು.
Leave a Review