ತಿ.ನರಸೀಪುರ: ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ಯೋಜನೆಯಿಂದ 2048 ನೇ ಇಸವಿಗೆ ಭಾರತ ದೇಶ ವಿಶ್ವದಲ್ಲಿ ಅತಿ ಎತ್ತರದ ಸ್ಥಾನಕ್ಕೆ ಏರಲಿದ್ದು, ತಾವೇಲ್ಲರೂ ಮತ್ತೊಮ್ಮೆ ನರೇಂದ್ರ ಮೋದಿಯವರನ್ನ ಪ್ರಧಾನಿಯಾಗಿ ಮಾಡುವ ಮನಸ್ಸಿನೊಂದಿಗೆ ಭಾಜಪದ ಅಭ್ಯರ್ಥಿಯಾದ ನನಗೆ ಮತ ನೀಡಿ ಗೆಲ್ಲಿಸುವಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಮನವಿಮಾಡಿದರು.
ಪಟ್ಟಣದ ನಂಜನಗೂಡು ಮುಖ್ಯ ರಸ್ತೆಯ ಮಹದೇಶ್ವರ ಭವನದಲ್ಲಿ ಭೈರಾಪುರ ಶಕ್ತಿ ಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ ವರುಣಾ ವಿಧಾನ ಸಭಾ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅಭ್ಯರ್ಥಿ ಬಾಲರಾಜು ದೇಶದಲ್ಲಿ ದೀರ್ಘಕಾಲ ಆಡಳಿತ ನೆಡಸಿದ ಕಾಂಗ್ರೆಸ್ ಪಕ್ಷ ದೇಶವನ್ನು ಛಿದ್ರಮಾಡಿದರೆ, ನರೇಂದ್ರ ಮೋದಿಯವರ 10 ವರ್ಷ ಆಡಳಿತ ದೇಶವನ್ನು ಒಗ್ಗೂಡಿಸಿದೆ ಎಂದರು.
ದೇಶದ ನಾಗರೀಕರು ಸ್ವಾವಲಂಬಿ ಬದುಕು ನಡೆಸಲು ಕಾಂಗ್ರೆಸ್ ಬಿಟ್ಟಿಲ್ಲ ಆದರೆ ನರೇಂದ್ರ ಮೋದಿಯವರು ಪ್ರತಿಯೊಬ್ಬ ದೇಶದ ನಾಗರೀಕನೂ ಸ್ವಾಭಿಮಾನದ ಬದುಕು ನಡೆಸಲು ಯೋಜನೆ ಕೊಟ್ಟಿದ್ದಾರೆ ಮುಂದೆ ಸಹ ದೇಶದ ಅಭಿವೃದ್ಧಿ ಮತ್ತು ಸುಭದ್ರತೆಗೆ ನರೇಂದ್ರ ಮೋದಿಯವರು ಅವಶ್ಯಕತೆ ಇರುವುದರಿಂದ ಅವರ ಕೈ ಬಲ ಪಡಿಸಲು ಭಾಜಪದ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸಿ ಕಳಿಸಿಕೂಡಿ ಎಂದು ಮನವಿ ಮಾಡಿದರು.
ಮಾಜಿ ಸಚಿವ ಮಹೇಶ್ ಮಾತನಾಡಿ, ಮಹಿಳಿಯರ ಗೌರವ ಮತ್ತು ಸ್ವಾಭಿಮಾನದ ಯೋಜನೆ ಕೂಟ್ಟ ಮೋದಿ ಬೇಕೋ ಅಥವಾ ನಿಮ್ಮ ಮನೆ ಗಂಡಸರ ಹಣ ಕಸಿದು ನಿಮಗೆ ಎರಡು ಸಾವಿರ ಕೂಟ್ಟ ಕಾಂಗ್ರೆಸ್ ಸರ್ಕಾರ ಬೇಕೋ ತಿರ್ಮಾನ ಮಾಡಬೇಕು ಎಂದರು.ಮುಖಂಡ ಆರ್.ಮಣಿಕಂಠರಾಜ್ ಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ರಮೇಶ್,ತೋಟದಪ್ಪ ಬಸವರಾಜು, ಕಾಂಪೋಸ್ಟ್ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಪುರಸಭೆ ಸದಸ್ಯ ಆರ್.ಅರ್ಜುನ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿ. ಪಂ. ಸದಸ್ಯ ಸದಾನಂದ, ಹೆಳವರಹುಂಡಿ ಸಿದ್ದಪ್ಪ, ಶರತ್ ಪುಟ್ಟಬುದ್ಧಿ, ಬಿಜೆಪಿ ವರುಣ ಮಂಡಲ ಅಧ್ಯಕ್ಷ ಸತೀಶ್, ತಿ. ನರಸೀಪುರ ಮಂಡಲ ಅಧ್ಯಕ್ಷ ಸತ್ಯರಾಜು, ಮುಖಂಡರುಗಳಾದ ಮಣಿಕಂಠ ರಾಜ್ ಗೌಡ, ವೀರಭದ್ರ, ವೆಂಕಟ ರಮಣ ಶೆಟ್ಟಿ, ಆಲಗೂಡು ಮಂಜು, ಬಾಗಳಿ ಯೋಗೀಶ್, ದೀಪು, ಬೈರಾಪುರ ಬಾಲು, ಇನ್ನಿತರರು ಹಾಜರಿದ್ದರು.