ನೆಲಮಂಗಲ: ಅಭಿವೃದ್ಧಿ ಕೆಲಸ ಮಾಡುತ್ತಿರುವ ಶಾಸಕರ ಮೇಲೆ ದ್ವೇಶ, ಅಸೂಯೆ ಪಡುತ್ತಿರುವವರ ಮನಸ್ಥಿತಿ ಸರಿಯಿಲ್ಲ ಜನಪರ ಕೆಲಸ ಮಾಡಿದ ಶಾಸಕರ ನಡೆಯನ್ನು ದುರುದ್ದೇಶದಿಂದ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಮುಖಂಡರುಗಳು ವಿರೋದಿಸುತ್ತಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಓಬಳಾಪುರ ಹನುಮಂತೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿ ಗೊಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗೊಲ್ಲಹಳ್ಳಿ ಗ್ರಾಪಂ ಹ್ಯಾಡಾಳು ಹಾಲು ಉತ್ಪಾದಕರ ಸಂಘದ ಕೊಠಡಿಯೊಂದರಲ್ಲಿ ಪಡಿತರ ವಿತರಣ ಉಪ ಕೇಂದ್ರಕ್ಕೆ ಅವಕಾಶ ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜನಪರ ಕೆಲಸ ಮಾಡುತಿದ್ದರೆ ಇದನ್ನು ಸಹಿಸದ ಪಂಚಾಯಿತಿ ಅಧ್ಯಕ್ಷ ಹರ್ಷ
ಹಾಗೂ ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಗದೀಶ್ ಚೌದರಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಗೊಲ್ಲಹಳ್ಳಿ ಪಂಚಾಯಿತಿ ಅಧ್ಯಕ್ಷ ಹರ್ಷ ಹಾಗೂಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕಿರಣ್ ಇಬ್ಬರುಸಹೋದರರು. ಜಗದೀಶ್ ಚೌದರಿ ಇಬ್ಬರನ್ನು ಒಂದು ಮಾಡುವ ಬದಲು ಇಬ್ಬರ ನಡುವೆ ಹೆಚ್ಚುಮನಸ್ತಾಪವನ್ನು ಉಂಟು ಮಾಡಲು ಹೊರಟಿರು ವುದು ಬೇಸರದ ಸಂಗತಿ. ಬಿಜೆಪಿ ಸರ್ಕಾರ ಇದ್ದಾಗ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡದೆ.
ಕ್ಷೇತ್ರವನ್ನು ನಿರ್ಲಕ್ಷಿಸಿದ್ದರು. ಆದರೆ ನಮ್ಮ ಶಾಸಕರು ಕೇವಲ 9 ತಿಂಗಳಲ್ಲಿ ಜನಪರ ಕೆಲಸವನ್ನು ಮಾಡಿದ್ದಾರೆ. ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಏನು, ಕಾಂಗ್ರೆಸ್ ಸರ್ಕಾರದ ಕೊಡುಗೆ ಏನು ಎಂದು ಸಾರ್ವಜನಿಕವಾಗಿ ಚರ್ಚೆ ಮಾಡಲಿ, ನಾವು ಚರ್ಚೆಗೆ ಸಿದ್ದರಿದ್ದೇವೆ ಎಂದರು.
ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣ ಗೌಡ ಮಾತನಾಡಿ ಶಾಸಕರು ಅಭಿವೃದ್ಧಿ ಪರವಾಗಿದ್ದಾರೆ ದ್ವೇಷದ ರಾಜಕೀಯ ಮಾಡುವವರಲ್ಲ ಅಸೂಯೆಪಡುವಂತಹ ಮನಸ್ಥಿತಿ ಅವರಲ್ಲಿಲ್ಲ, ಶಾಸಕ ಮೇಲೆ ಅಪಪ್ರಚಾರ ಮಾಡಿದರೆ ಮು0ದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರುಗಳು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಕಾಂಗ್ರೆಸ್ ಮುಖಂಡ ಹನುಮಂತೇಗೌಡ, ಗ್ರಾಮಾಂತರ ಜಿಲ್ಲಾಧ್ಯಕ್ಷ ಸಿಆರ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ಮೂರ್ತಿ, ನಾರಾಯಣಗೌಡ, ವಾಸುದೇವ್, ಸಿ.ಪ್ರದೀಪ್, ನಾಗರತ್ನಮ್ಮ, ಮತ್ತಿತರರು ಇದ್ದರು.