ಬೆಂಗಳೂರು: ಹೋಟೆಲ್ ಗಳಲ್ಲಿ ತಿಂಡಿ ಸಿಗುತ್ತಿಲ್ಲ. ಶಾಸಕರ ಭವನದಲ್ಲಿ ಶಾಸಕರಿಗೆ ತಿಂಡಿ ಸಿಗುತ್ತಿಲ್ಲ ಎಂದು ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಸ್ತಾಪ ಮಾಡಿದರು.ಇಸ್ರೆಲ್, ಇರಾನ್ ಯುದ್ಧದಿಂದ ರಾಜ್ಯದಲ್ಲಿ ಉಂಟಾಗಿರುವ ಗ್ಯಾಸ್ ಟ್ರಬಲ್ ವಿಧಾನ ಪರಿಷತ್ನಲ್ಲಿ ಪ್ರತಿಧ್ವನಿಸಿತು.ಇಂದಿರಾ ಕ್ಯಾಂಟೀನ್ ನಲ್ಲೂ ಸಿಗುತ್ತಿಲ್ಲ. ಜನರು ಪ್ಯಾನಿಕ್ ಆಗಿದ್ದಾರೆ. ಅದಕ್ಕೆಲ್ಲ ಸರ್ಕಾರವೇ ಉತ್ತರ ಕೊಡ್ಬೇಕು ಎಂದ ಸಭಾಪತಿ ಹೊರಟ್ಟಿ ಹೇಳಿದರು. ಛಲವಾದಿ ನಾರಾಯಣಸ್ವಾಮಿ ಎದ್ದು ನಿಂತು ಐವಾನ್ ಡಿಸೋಜ ಅವರು ಹಸಿದು ಬಂದಿದ್ದಾರೆ, ದಯವಿಟ್ಟು ಇಡ್ಲಿ ವಡಾ ಕೊಡಿ ಎಂದರು.ಹೊರಟ್ಟಿ ಅವರು 10 ನಿಮಿಷ ಅನುಮತಿ ಕೊಡುತ್ತೇನೆ ತಿಂದು ಬಾ ಎಂದಾಗ ಇಡ್ಲಿ ವಡೆ ದರ ಜಾಸ್ತಿ ಮಾಡಿದ್ದಾರೆ ಸರ್ ಎಂದು ಐವಾನ್ ಡಿಸೋಜಾ ಉತ್ತರಿಸಿದರು.ಇದರಿಂದ ಸಿಟ್ಟಿಗೆದ್ದ ಸಭಾಪತಿ ಅವರು ನಿನಗೆ ಮಾನ ಮರ್ಯಾದೆ ಇದ್ಯಾ? ಕುಳಿತಿಕೋ ಎಂದು ಡಿಸೋಜಾ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ಸಂದರ್ಭದಲ್ಲಿ ಔಷಧಿ ಸಿಗುತ್ತಿಲ್ಲದರ ಬಗ್ಗೆ ಮಾತನಾಡಿ ಎಂದ ಭಾರತಿ ಶೆಟ್ಟಿ ಸಲಹೆ ನೀಡಿದರು.
-ಡಾ. ಜಿ.ವೈ. ಪದ್ಮ ನಾಗರಾಜು
ಶಾಸಕರ ಭವನದಲ್ಲಿ ತಿಂಡಿ ಸಿಗುತ್ತಿಲ್ಲ : ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜ ಪ್ರಸ್ತಾಪ



