ದೇವನಹಳ್ಳಿ: ತಾಲೂಕಿನ ಬಿದಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾವಕನಹಳ್ಳಿ ಗ್ರಾಮದಲ್ಲಿ ಸಾವು ಕನಹಳ್ಳಿಯ ನಾಗದೇವತಾ ಮಹಾಗಣಪತಿ ಪ್ರತಿಷ್ಠಾಪನೆ ಮತ್ತು ಅಶ್ವತ್ ಕಲ್ಯಾಣ ಮಹೋತ್ಸವ ಹಾಗೂ ಶ್ರೀ ವೇಣುಗೋಪಾಲ ಸ್ವಾಮಿ, ಅಣ್ಣಮ್ಮ ದೇವಿ, ಚೌಡೇಶ್ವರಿ ದೇವಿ, ಗಂಗಮ್ಮ ದೇವಿ, ದೊಡ್ಡಮ್ಮ ದೇವಿ, ಸಪ್ಲಮ್ಮ ದೇವಿ, ಆಂಜನೇಯ ಸ್ವಾಮಿಗಳ ವಿಶೇಷ ಪೂಜಾ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನಡೆಯಿತು.
ಸಾವಕನಹಳ್ಳಿ ಗ್ರಾಮದ ಎಲ್ಲಾ ಮುಖ್ಯಬೀದಿಗಳಲ್ಲಿ ವಿಶೇಷವಾಗಿ ಅಲಂಕಾರಗೊಂಡಿದ್ದ “ನಾಡ ದೇವತೆ ಅಣ್ಣಮ್ಮ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತಿದ್ದ ಗಜರಾಜನ ಅಂಬಾರಿಯೂ ಗಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಗ್ರಾಮ ಪ್ರದಕ್ಷಣೆ ಮಾಡಿತು, ಸಾವಿರಾರು ಭಕ್ತಾದಿಗಳು ಸಮರ್ಪಣಾ ಭಾವದಿಂದ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಚಿತ್ರನಟ ಶರಣ್ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಕೆ ಚಿ ಮುನಿಯಪ್ಪ ಮತ್ತು ಮಾಜಿ ಸಂಸದ ವೀರಪ್ಪ ಮೊಯ್ಲಿ ಅವರು ಪಾಲ್ಗೊಂಡಿದ್ದರು.ಬಿದಲೂರು ಗ್ರಾ.ಪಂ. ಅಧ್ಯಕ್ಷ ಮತ್ತು ಎಂಪಿಸಿಎಸ್ ಅಧ್ಯಕ್ಷ ಎಸ್ .ಪಿಮುನಿರಾಜು ಸಾರಥ್ಯದಲ್ಲಿ ಅದ್ದೂರಿಯಾಗಿ ಪೂಜಾ ಕಾರ್ಯಕ್ರಮವು ನಡೆಯಿತು ಹಾಗೂ ಆನಂದ್ ಕುಮಾರ್ .ಎಂ,ಮಾಜಿ ಚೇರ್ಮನ್ ನಂಜೇಗೌಡ, ಗು|| ನಾರಾಯಣಪ್ಪ, ಕೆ.ವಿ ನಂದಕುಮಾರ್ ಹಾಗೂ ಕುಟುಂಬದವರಿಂದ ಅನ್ನ ಸಂತರ್ಪಣೆ ಸೇರಿದಂತೆ ಹಲವಾರು ಸೇವಾ ಕಾರ್ಯಗಳ ಸೇವಕರ್ತರಾಗಿದ್ದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಮುಖಂಡರುಗಳಾದ ಚನ್ನಳ್ಳಿ ರಾಜಣ್ಣ, ಚಿನ್ನಪ್ಪ,ಅನಂತಕುಮಾರಿ ಚಿನ್ನಪ್ಪ, ರಾಧಾಕೃಷ್ಣ ರೆಡ್ಡಿ, ಮಾಧವಿ ಕೋಡುಗುರ್ಕಿ ನಾರಾಯಣಸ್ವಾಮಿ ಸೇರಿದಂತೆ ಭಕ್ತಾದಿಗಳು ಮತ್ತು ಊರಿನ ಗ್ರಾಮಸ್ಥರು ಮತ್ತಿತರರು ಇದ್ದರು.