ತಿಪಟೂರು: ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯೋದ್ದೇಶ ತತ್ವದ ಆಧಾರದ ಮೇಲೆ ಅಂಬೇಡ್ಕರ್ರವರು ಸಂವಿಧಾನವನ್ನು ರಚಿಸಿ ದೇಶದ ಪ್ರತಿಯೊಬ್ಬ ನಾಗರೀಕನು ಮೂಲಭೂತ ಹಕ್ಕುಗಳನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಂತಹ ಸಂವಿಧಾನವನ್ನು ಬದಲಾವಣೆ ಮಾಡುವ ಹುನ್ನಾರ ನಡೆಯುತ್ತಿದ್ದು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಡಾ.ಬಿ.ಆರ್.ಅಂಬೇಡ್ಕರ್ರವರು ಸರ್ವರಿಗೂ ಒಳಿತಾಗಲಿ ಎನ್ನುವ ಉದ್ದೇಶದಿಂದ ಪ್ರಜಾಪ್ರಭುತ್ವದ ತಳಹದಿಯಲ್ಲಿ ವಿಶ್ವದಲ್ಲಿಯೇ ಉತ್ತಮವಾದ ಸಂವಿಧಾನವನ್ನು ರಚಿಸಿದರು.
ಆದರೆ ಕೆಲ ರಾಜಕಾರಿಣಿಗಳು ತಮ್ಮ ಹಿತಾಸಕ್ತಿಗಾಗಿ ಸಂವಿಧಾನದ ಆಶಯಕ್ಕೆ ಕೊಡಲಿಪೆಟ್ಟು ನೀಡುವವರಿದ್ದಾರೆ. ದೇಶದ ಯಾವುದೇ ವ್ಯಕ್ತಿಯಾದರೂ ಸರಿ ಇಂತಹ ವಿಷಯಕ್ಕೆ ಆಸ್ಪದ ನೀಡಬಾರದು ಎಂದರು.ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ, ಸ್ವತಂತ್ರ್ಯ ಭಾರತಕ್ಕೆ ಆಡಳಿತಾತ್ಮಕ ನೀತಿ ನಿಯಮಗಳನ್ನು ರೂಪಿಸಲು ಅಂಬೇಡ್ಕರ್ ರಚಿಸಿಕೊಟ್ಟ ಸಂವಿಧಾನವನ್ನು ಒಪ್ಪಿ 1950 ಜನವರಿ 26 ರಂದು ಜಾರಿಗೆ ತಂದು ಭಾರತವನ್ನು ಗಣರಾಜ್ಯವನ್ನಾಗಿಸಿದ್ದೇವೆಂದರು.
ಇಂತಹ ಸರ್ವ ಸ್ವಾತಂತ್ರ್ಯ ಗಣರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯ ತೀರ್ಮಾನವೇ ಅಂತಿಮ. ಆದ್ದರಿಂದ 18 ವರ್ಷ ತುಂಬಿದ ಪ್ರತಿಯೋಬ್ಬ ಪ್ರಜೆ ಮತದಾನದ ಹಕ್ಕನ್ನು ಪಡೆದು ಚಲಾವಣೆ ಮಾಡುವುದರ ಮೂಲಕ ಉತ್ತಮ ನಾಯಕನನ್ನು ಆಯ್ಕೆ ಮಾಡಿಕೊಂಡು ದೇಶದ ಸುಭದ್ರತೆಗೆ ಸಂಕಲ್ಪ ಮಾಡಬೇಕೆಂದು ತಿಳಿಸಿದರು.
ತಹಶೀಲ್ದಾರ್ ಪವನ್ ಕುಮಾರ್, ಡಿವೈಎಸ್ಪಿವಿನಾಯಕ್ ಶೆಟ್ಟಿಗೇರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಬೆಸ್ಕಾಂ ಎಇಇಮನೋಹರ್, ಬಿಇಓ ಚಂದ್ರಯ್ಯ, ನಗರಸಭಾ ಸದಸ್ಯರಾದ ಮಹೇಶ್, ಯಮುನಾ ಮತ್ತು ಹೂರ್ ಬಾನು ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿವರ್ಗ ಹಾಗೂ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲಾ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.