ಹೊಸಕೋಟೆ: ಇಡೀ ವಿಶ್ವಕ್ಕೆ ಮಾದರಿಯಾದ ಲಿಖಿತರೂಪದಲ್ಲಿರುವ ಭಾರತದ ಸಂವಿಧಾನ ಎಲ್ಲಾ ಜಾತಿ ಧರ್ಮಗಳಿಗಿಂತ ಮಿಗಿಲು ಹಾಗೂ ವಿಶ್ವದಲ್ಲಿಯೇ ಅತಿ ದೊಡ್ಡ ಶ್ರೇಷ್ಠ ಸಂವಿಧಾನ ಎಂದು ಹೊಸಕೋಟೆಜೆಎಂಎಫ್ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಅರುಣ್ ಕುಮಾರ್ ತಿಳಿಸಿದರು.
ನಗರದ ಮಹದೇವ ಪದವಿ ಪೂರ್ವ ಕಾಲೇಜಿನಲ್ಲಿನಡೆದಂತಹ ಕಾನೂನು ಹರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಂವಿಧಾನದ ಮೂಲ ಉದ್ದೇಶ ಅಖಂಡ ಭಾರತ ನಿರ್ಮಾಣವಾಗಿದ್ದು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ನೇತತ್ವದಲ್ಲಿ ಕಾರ್ಯರೂಪಕ್ಕೆ ತರಲಾಯಿತು. ಸ್ವತಂತ್ರ ನಂತರ ಆಳ್ವಿಕೆಯಲ್ಲಿ ನಿಜಾಮರು ಮೈಸೂರು ಒಡೆಯರ್ ಅವರಂತಹ ಆಳ್ವಿಕೆಯನ್ನು ಏಕರೂಪ ಸಮಾನತೆಯನ್ನು ಸಾರುವ ಉದ್ದೇಶ ಹೊಂದಲಾಗಿತ್ತು.
ಭಾರತದ ಸಂವಿಧಾನವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಜೊತೆಗೆ ಮತ್ತೊಬ್ಬರಿಗೂ ತಿಳಿಸುವಂತಾಗಬೇಕು ಎಂದರು.
ಹೊಸಕೋಟೆ ಜೆಎಂಎಫ್ಸಿ ನ್ಯಾಯಾಲಯದ ಪ್ರಧಾನಿ ಸಿವಿಲ್ ನ್ಯಾಯಾಧೀಶ ಬಸವರಾಜ್ ಜಿಸನದಿ ಮಾತನಾಡಿ ನಮ್ಮ ಸಂವಿಧಾನದ ಆಧಾರದ ಮೇಲೆ ಎಲ್ಲರಿಗೂ ಸಮಾನ ಹಕ್ಕು ಕರ್ತವ್ಯಗಳನ್ನ ನೀಡುವ ಕಾನೂನುಗಳನ್ನು ರೂಪಿಸಲಾಗಿದ್ದು 18 ವರ್ಷಗಳ ನಂತರ ಲಿಂಗಭೇದವಿಲ್ಲದೆ ಪ್ರತಿಯೊಬ್ಬರಿಗೂ ಮತದಾನ ಹಕ್ಕನ್ನು ನೀಡುವಂತೆ, ಡಾ.ಬಿ.ಆರ್.ಅಂಬೇಡ್ಕರ್ ಒತ್ತಾಯದಿಂದ ಜಾರಿಗೆ ತರಲಾಯಿತು.
ದೇಶದಲ್ಲಿನ ಕಾನೂನನ್ನು ಯುವ ಪೀಳಿಗೆ ಅರಿತು ನಡೆಯುವುದರಿಂದ ಅಪರಾಧ ಪ್ರಕರಣಗಳು ಕಡಿಮೆಯಾಗುವುದಲ್ಲದೆ ದೇಶದ ಅಭಿವೃದ್ಧಿಗೆ ಯುವಕರ ಕೊಡುಗೆ ಹೆಚ್ಚಾಗಲಿದ್ದು ಪ್ರತಿಯೊಬ್ಬ ಯುವಕರು ಕಾನೂನು ಪಾಲನೆ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಹರೀಂದ್ರ ಮಾತನಾಡಿ ವಿದ್ಯಾರ್ಥಿಗಳು ಕಾಲೇಜು ಹಂತದಿಂದಲೇ ಸಂವಿಧಾನದ ಮಹತ್ವ ಹಾಗೂ ಅರಿವನ್ನ ಪಡೆದುಕೊಳ್ಳಬೇಕು. ಭಾರತದಲ್ಲಿ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ ನಮಗೆ ಸಂವಿಧಾನದ ಮಹತ್ವವೇ ತಿಳಿಯದಂತಾಗಿದೆ. ಆದ್ದರಿಂದ ಸಂವಿಧಾನದ ಅರಿವನ್ನ ಪಡೆದುಕೊಂಡರೆ ಬದುಕು ಮತ್ತಷ್ಟು ಮಹತ್ವ ಪಡೆದುಕೊಳ್ಳಲಿದೆ ಎಂದರು.
ಹೊಸಕೋಟೆ ಜೆಎಂಎಫ್ಸಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಚೈತ್ರಾ ವಿ ಕುಲಕರ್ಣಿ,ಮಹದೇವ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮಾಂಜಿನಿ, ಕಾರ್ಯದರ್ಶಿ ರಾಮನಾಥ್, ವಕೀಲರ ಸಂಘದಅಧ್ಯಕ್ಷ ಎಂ.ವೆಂಕಟಸ್ವಾಮಿ ಉಪಾಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಂ.ವಿ ನವೀನ್ ಕುಮಾರ್, ಜಂಟಿ ಕಾರ್ಯದರ್ಶಿ ಮುನಿರಾಜು, ಖಜಾಂಚಿ ರವಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್, ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ವಿದ್ಯಾ ವಸ್ತ್ರದ್ ಭಾಗವಹಿಸಿದ್ದರು.