ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿರುವ ಹವ್ಯಕ ಭವನದಲ್ಲಿ ದಿನಾಂಕ 09.01.2024 ರಂದು ಏರ್ಪಡಿಸಿದ್ದ ರಾಜ್ಯದ ಸೌಹಾರ್ದ ಸಹಕಾರಿಗಳ ರಾಜ್ಯ ಮಟ್ಟದ ಸಮಾಲೋಚನಾ ಸಭೆಯನ್ನು ಏರ್ಪಡಸಲಾಗಿತ್ತು. ಈ ಸಮಾಲೋಚನಾ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 500ಕ್ಕೂ ಹೆಚ್ಚು ಸೌಹಾರ್ದ ಸಹಕಾರಿಗಳ ಅಧ್ಯಕ್ಷರು ಭಾಗವಹಿದ್ದರು. ಈ ಸಭೆಯ ಅಧ್ಯಕ್ಷತೆಯನ್ನು ಸಂಯುಕ್ತ ಸಹಕಾರಿ ಮಾನ್ಯ ಅಧ್ಯಕ್ಷ ಜಿ. ನಂಜನಗೌಡರವರು ವಹಿಸಿದರು.
ಈ ಸಮಾಲೋಚನಾ ಸಭೆಯಲ್ಲಿ ಪ್ರಮುಖ ವಾಗಿ ರಾಜ್ಯದ ಸೌಹಾರ್ದ ಸಹಕಾರಿ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿಯನ್ನು ಮಾಡಲು ರಾಜ್ಯ ಮಟ್ಟದ ಸಮಿತಿಯನ್ನು ಮಾಜಿ ಸಹಕಾರ ಸಚಿವ ಹಾಲಿ ಶಾಸಕ ಶ್ರೀ ಲಕ್ಷ್ಮಣ ಸವದಿಯವರ ನೇತೃತ್ವದಲ್ಲಿ ರಚಿಸಿದೆ. ಈ ಸಮಿತಿ ರಾಜ್ಯದ 2 ಸಹಕಾರ ಕಾಯ್ದೆಗಳನ್ನು ಅಧ್ಯಯನ ಮಾಡಿ ಅಗತ್ಯ ತಿದ್ದುಪಡಿಗಳನ್ನು ಸೂಚಿಸಲಿದೆ.
ಈ ತಿದ್ದುಪಡಿಗಳು ಸೌಹಾರ್ದ ಸಹಕಾರಿ ಕ್ಷೇತ್ರದ ಹಾಗೂ ಸಂಯುಕ್ತ ಸಹಕಾರಿ ಕಾರ್ಯಚಟುವಟಿಕೆಗಳಿಗೆ ಹೆಚ್ಚಿನ ಭದ್ರತೆ ಹಾಗೂ ಬಲ ನೀಡುವಂತೆ ಇರಬೇಕು ಎಂದರು.ರಾಜ್ಯದಲ್ಲಿ ಕಳೆದ 23 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ 6200ಕ್ಕೂ ಹೆಚ್ಚು ಸೌಹಾರ್ದ ಸಹಕಾರಿಗಳು ನೊಂದಣಿಯಾಗಿವೆ. 4500 ಸೌಹಾರ್ದ ಸಹಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. 65000ಕ್ಕಿಂತಲ್ಲೂ ಹೆಚ್ಚು ಜನರಿಗೆ ಉದ್ಯೋಗವನ್ನು ನೀಡಿದೆ.
ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಕಾಲದಲ್ಲಿ ಸಾಲ ಒದಗಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ. ಕೆಲವೇ ಕೆಲವು ಸೌಹಾರ್ದ ಸಹಕಾರಿಗಳು ಠೇವಣಿದಾರರ ಮೊತ್ತವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿ ಠೇವಣಿದಾದದರಿಗೆ ವಾಪಸ್ಸು ನೀಡುವಲ್ಲಿ ವಿಫಲರಾಗಿರುವ ಕಾರಣ ಸೌಹಾರ್ದ ಸಹಕಾರಿ ಕಾಯ್ದೆ ಅಡಿಯಲ್ಲಿ ಸಂಯುಕ್ತ ಸಹಕಾರಿ ಕ್ರಮವಿಡುತ್ತಿದೆ.
ಈ ಪ್ರಚಲಿತ ವಿದ್ಯಮಾನಗಳಿಗೆ ಸೌಹರ್ದ ಸಹಕಾರಿಗಳಿಗೆ ಮಾಹಿತಿ ನೀಡುವ ಧೃಷ್ಠಿಯಿಂದ ಸಂಯುಕ್ತ ಸಹಕಾರಿ ರಾಜ್ಯಮಟ್ಟದ ಸಮಾಲೋಚನಾ ಸಭೆಯನ್ನು ಆಯೋಜನೆ ಮಾಡಿದೆ. ಇದರಲ್ಲಿ ವಂಚನೆಯ ಪ್ರಕರಣಗಳಲ್ಲಿ ಸಂಯುಕ್ತ ಸಹಕಾರಿಯು ಕಟ್ಟುನಿಟ್ಟಿನ ಕ್ರಮ ಜರುಗಿಸುವುದಕ್ಕೆ ಬದ್ಧವಾಗಿದೆ. ಎಂದು ತಿಳಿಸುತ್ತಾ ಸೌಹಾರ್ದ ಸಹಕಾರಿಗಳು ಕಾಯ್ದೆ ನಿಯಮ ಉಲ್ಲಂಘನೆ ಆಗದಂತೆ ಹಣಕಾಸಿನ ಶಿಸ್ತನ್ನು ರೂಢಿಸಿಕೊಂಡು ಕಾರ್ಯನಿರ್ವಹಿಸಲು ಕರೆ ನೀಡಿದರು.
ಈ ಸಭೆಯಲ್ಲಿ ಸೌಹಾರ್ದ ಸಹಕಾರಿ ಕಾಯ್ದೆ ತಿದ್ದುಪಡಿಗೆ ಪ್ರತಿನಿಧಿಗಳಿಂದ ಸಲಹೆ ಹಾಗು ಅಭಿಪ್ರಾಯಗಳನ್ನು ಪಡೆದು ಮಾನ್ಯ ಸಹಕಾರ ಸಚಿವರಿಗೆ ಹಾಗು ತಿದ್ದುಪಡಿ ಸಮಿತಿಗೆ ಸಲ್ಲಿಸಲು ತೀರ್ಮಾನಿಸಲಾಯಿತು.ಸಂಯುಕ್ತ ಸಹಕಾರಿ ನಿಯೋಗ ಮಾನ್ಯ ಸಹಕಾರ ಸಚಿವರಿಗೆ ಹಾಗೂ ಕಾಯ್ದೆ ತಿದ್ದುಪಡಿ ಸಮಿತಿಗೆ ಮನವಿ ಸಲ್ಲಿಸುವುದೆಂದು ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಯುಕ್ತ ಸಹಕಾರಿಯ ಮಾಜಿ ಅಧ್ಯಕ್ಷರಾದ ಗುರುನಾಥ ಜ್ಯಾಂತಿಕರ್, ಬಿ.ಹೆಚ್. ಕೃಷ್ಣಾರೆಡ್ಡಿ, ನಿರ್ದೇಶಕರು ಆದ ಗದೀಶ್ ಕವಟಗಿಮಠ ಹಾಲಿ ಉಪಾಧ್ಯಕ್ಷ ಎ.ಆರ್. ಪ್ರಸನ್ನಕುಮಾರ್ ಸಂಯುಕ್ತ ಸಹಕಾರಿಯ ಶಿಕ್ಷಣ ನಿಧಿ ಸಲಹಾ ಸಮಿತಿಯ ಸದಸ್ಯರಾದ ಹೆಚ್.ವಿ. ರಾಜೀವ್ ರವರು ಮಾತನಾಡಿದರು.
ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ ಮಾತನಾಡಿ, ಸಹಕಾರ ಸಚಿವರು ತುಂಬಾ ಅನುಭವ ಉಳ್ಳವರಾಗಿದ್ದಾರೆ ಸಹಕಾರಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಳಜಿ ಇದೆ, ಸೌಹಾರ್ದ ಸಹಕಾರಿ ಕ್ಷೇತ್ರ ಹಾಗು ಸಂಯುಕ್ತ ಸಹಕಾರಿಯನ್ನು ಬಲಪಡಿಸುವ ನಿಟ್ಟಿನಲ್ಲಿ ತಿದ್ದುಪಡಿಗಳನ್ನು ಮಾಡಲು ಸಹಕರಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಹಲವಾರು ಸೌಹಾರ್ದ ಸಹಕಾರಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿ ಈ ಬಗ್ಗೆ ಸಹಕಾರ ಮಂತ್ರಿಗಳಿಗೆ, ಸರ್ಕಾರಕ್ಕೆ ಮನವರಿಕೆ ಮಾಡಿ ವ್ಯವಸ್ಥೆಯನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಕಾರ್ಯಕ್ರದ ಸ್ವಾಗತವನ್ನು ಸಂಯುಕ್ತ ಸಹಕಾರಿಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶರಣಗೌಡ ಜಿ.ಪಾಟೀಲ ನೆರವೇರಿಸಿದರು. ನಿರ್ದೆಶಕರಾದ ಶ್ರೀಧರ್ರವರು ವಂದನಾರ್ಪಣೆ ಸಲ್ಲಿಸಿದರು. ಕ.ರಾ.ಸೌ.ಸಂ.ಸ.ನಿ., ವ್ಯವಸ್ಥಾಪಕ ನಿರ್ದೆಶಕ ಶರಣಗೌಡ ಜಿ ಪಾಟೀಲ ಇದ್ದರು.