ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಕೂಟದಲ್ಲಿ ಪಾಲ್ಗೊಳ್ಳಲು 2 ಅಂಕ ಕಡಿಮೆಯಿದ್ದರೂ, ಶಾಟ್ಗನ್ ವಿಭಾಗದಲ್ಲಿ ಕರಣ್ಗೆ ಅವಕಾಶ ನೀಡಿರುವ ರಾಷ್ಟ್ರೀಯ ರೈಫಲ್ ಅಸೋಸಿಯೇಶನ್ (ಎನ್ಆರ್ಎಐ) ವಿವಾದಕ್ಕೆ ಗುರಿಯಾಗಿದೆ.
ಆದರೆ ಸೇನೆಯಲ್ಲಿರುವ ಕಾರಣ ಕರಣ್ಗೆ ಅರ್ಹತಾ ಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಎಂದು ರೈಫಲ್ ಅಸೋಸಿಯೇಶನ್ ಹೇಳಿದೆ. ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತಾ ಕೂಟದಲ್ಲಿ ಪಾಲ್ಗೊಳ್ಳಲು 110 ಅಂಕ ಗಳಿಸಿರಬೇಕು ಎಂಬ ಮಾನದಂಡವಿದೆ.
ಆದರೆ ಕರಣ್, 108 ಅಂಕ ಗಳಿಸಿದ್ದರೂ ಅವರಿಗೆ ಆಯ್ಕೆ ಟ್ರಯಲ್ಸ್ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಇದು ವಿವಾದಕ್ಕೆ ಗುರಿಯಾಗಿತ್ತು.ಈ ಬಗ್ಗೆ ಸ್ಪಷ್ಟನೆ ನೀಡಿರುವ ಎನ್ಆರ್ಎಐ ಕಾರ್ಯದರ್ಶಿ ರಾಜೀವ್ ಭಾಟಿಯ, ಕರಣ್ ಪ್ರತಿಭಾನ್ವಿತ ಶೂಟರ್. ಅವರಿಗೆ ಅವಕಾಶ ನೀಡುವಂತೆ ಭಾರತೀಯ ಸೇನೆಯಿಂದಲೂ ಶಿಫಾರಸು ಬಂದಿತ್ತು ಎಂದಿದ್ದಾರೆ.