ಬೆಂಗಳೂರು: ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಮಟ್ಟದ ಪ್ರಥಮ ಸಮ್ಮೇಳನವನ್ನು ಗದಗನಲ್ಲಿ ಆಯೋಜಿಸಲಾಗುತ್ತಿದ್ದು ಈ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವಂತೆ ಸಂಪಾದಕರ ಸಂಘದಿಂದ ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೆಸ್ವಾಮಿ, ರಾಜ್ಯದಲ್ಲಿ ಈಗಾಗಲೇ ಮಾದ್ಯಮ ಪಟ್ಟಿಯಲ್ಲಿ 600ಕ್ಕೂ ಹೆಚ್ಚು ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳು ಇವೆ. ಈ ಪತ್ರಿಕೆಗಳ ಸಂಪಾದಕರು ರಾಜ್ಯ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಂಪಾದಕರ ಸಂಘದಿಂದ ಆಯೋಜಿಸಿರುವ ಪ್ರಥಮ ಸಮ್ಮೇಳನ ಗದಗಿನಲ್ಲಿ ಅದು ಸಚಿವರಾದ ಎಚ್.ಕೆ. ಪಾಟೀಲರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪತ್ರಿಕೋದ್ಯಮ ಹಾಗೂ ಪತ್ರಿಕೆಗಳ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಎಚ್.ಕೆ. ಪಾಟೀಲರು ಪತ್ರಕರ್ತರಾಗಿ, ಸಂಪಾದಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದವರು. ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾವೇಶದ ಯಶಸ್ವಿಗೆ ಎಲ್ಲರ ಶ್ರಮಿಸೋಣ ಎಂದರು.ಇದೇ ವೇಳೆ ಸಮಾವೇಶ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಆವ್ಹಾನಿಸುವ ಉದ್ದೇಶ ಹೊಂದಿದ್ದು, ತಾವು ಮುಖ್ಯಮಂತ್ರಿಗಳ ದಿನಾಂಕ ನಿಗದಿಪಡಿಸಿ ಅವರನ್ನು ಸಮಾವೇಶಕ್ಕೆ ಕರೆತರುವಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ, ಪ್ರಧಾನ ಕಾರ್ಯದರ್ಶಿ ಚನ್ನಬಸವ, ಡಾ.ಕೆ.ಎಸ್. ಸ್ವಾಮಿ, ಗದಗ ಜಿಲ್ಲಾಧ್ಯಕ್ಷ ನೂರ ಅಹ್ಮದ್ ಮಕಾನದಾರ, ದೇವಪ್ಪ ಲಿಂಗದಾಳ ಸೇರಿದಂತೆ ಇತರರು ಇದ್ದರು.