ಬೆಂಗಳೂರು: ಬೆಂಗಳೂರಿನ ಬಿಇಎಲ್ ಲೇಔಟ್ ಬಳಿ ಹೊಸದಾಗಿ ಆರಂಭಿಸಲಾಗಿರುವ ಸುಕೂನ್ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಇಂದಿನ ಯುವಕರು ಒತ್ತಡದ ನಡುವೆ ಕೆಲಸ ನಿರ್ವಹಿಸುತ್ತಾ ಮಾನಸಿಕವಾಗಿ ತಮ್ಮ ಸ್ಥಿಮತವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಜತೆಗೆ ಖಿನ್ನತೆಗೆ ಒಳಗಾಗಿ ಸಾವನ್ನಪ್ಪುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಅವರಿಗೆ ಉತ್ತಮ ಮಾನಸಿಕ ಚಿಕಿತ್ಸೆ ಅಗತ್ಯವಾಗಿದೆ.ಯುವಕರು ಪಡೆ ಸುಕೂನ್ ಚಿಕಿತ್ಸಾ ಕೇಂದ್ರವನ್ನು ಆರಂಭಿಸಿರುವುದು ಶ್ಲಾಘನೀಯ.ಇಂತಹ ಮಾನಸಿಕ ಚಿಕಿತ್ಸಾ ಕೇಂದ್ರಗಳು ಎಲ್ಲ ಜಿಲ್ಲಾ ಕೇಂದ್ರ ಗಳಲ್ಲಿ ಪ್ರಾರಂಭವಾಗಬೇಕು,ರಾಜ್ಯ ಸರ್ಕಾರ ನಿಮ್ಹಾನ್ಸ್ ಸಹಯೋಗದಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆಯ ಕೇಂದ್ರಗಳಲ್ಲಿ ಮಾನಸಿಕ ಕೇಂದ್ರಗಳನ್ನು ಆರಂಭಿಸಲಾಗಿದೆ.
ಮುಂದಿನ ದಿನಗಳಲ್ಲಿ ಕರ್ನಾಟಕ ನಿಮ್ಹಾನ್ಸ್ ನೇತೃತ್ವದಲ್ಲಿ ಮೆಂಟಲ್ ಹೆಲ್ತ್ ಹಬ್ ಆಗಿ ಪರಿವರ್ತನೆಗೊಳ್ಳಲಿದೆ ಎಂದು ಹೇಳಿದರು.ಮಾನಸಿಕ ತಜ್ಞ ಡಾ.ಸತೀಶ್ ರಾಮಯ್ಯ ಮಾತನಾಡಿ, ಮಾನಸಿಕವಾಗಿ ತೊಂದರೆಗೆ ಒಳಗಾದವರಿಗೆ ಉತ್ತಮ ಚಿಕಿತ್ಸೆ ನೀಡಲು ಸುಕೂನ್ ಎಂಬ ನಾಲ್ಕನೇ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಸುಕೂನ್ ಹೆಲ್ತ್ನಲ್ಲಿ, ನಾವು ಕೇವಲ ಚೇತರಿಕೆಗೆ ಮಾತ್ರವಲ್ಲದೆ ನಮ್ಮ ರೋಗಿಗಳ ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸಮಗ್ರ ಆರೈಕೆ ಯೋಜನೆಗೆ ಒತ್ತು ನೀಡುತ್ತೇವೆ. ಕ್ರಿಯಾತ್ಮಕ ಚೇತರಿಕೆ, ಸಾಮಾಜಿಕ ತೊಡಗಿಸಿಕೊಳ್ಳುವಿಕೆ ಮತ್ತು ಭವಿಷ್ಯದ ಮರುಕಳಿಸುವಿಕೆಯ ತಡೆಗಟ್ಟುವಿಕೆಯ ಮೇಲೆ ಕೇಂದ್ರೀಕರಿಸಿ, ನಾವು ವ್ಯಕ್ತಿಯ ಜೀವನದ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸುತ್ತೇವೆ.
ಇದು ಗುಣಪಡಿಸುವ ಪ್ರಯಾಣವನ್ನು ಹೆಚ್ಚು ವೈಯಕ್ತಿಕವಾಗಿಸುತ್ತದೆ ಆದರೆ ಉತ್ತಮ ಆರೋಗ್ಯ ಫಲಿತಾಂಶಗಳಿಗಾಗಿ ಬೆಂಬಲ ನೆಟ್ವರ್ಕ್ಗಳನ್ನು ಬಲಪಡಿಸುತ್ತದೆ ಎಂದು ಬೆಂಗಳೂರಿನ ಸುಕೂನ್ ಹೆಲ್ತ್ನ ಕೇಂದ್ರದ ಮುಖ್ಯಸ್ಥ ಡಾ. ಸತೀಶ್ ರಾಮಯ್ಯ ಹೇಳಿದರು.