ಕೆ.ಆರ್.ಪುರ: ಕಚೇರಿ ಪೀಠೋಪಕರಣಗಳ ತಯಾರಿಕೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಸ್ಟೀಲ್ಕೇಸ್ ಕಂಪನಿಯು ಭಾರತದಾದ್ಯಂತ ಇರುವ ಕಚೇರಿಗಳಿಗೆ ಹೊಸ ರೂಪ ಕೊಡುತ್ತಾ, ಆ ಕ್ಷೇತ್ರದಲ್ಲಿ ನಾಯಕತ್ವ ಸಾಧಿಸುತ್ತಾ 25 ವರ್ಷಗಳನ್ನು ಪೂರೈಸಿದೆ. ಆರಂಭಿಕ ಹಂತದಲ್ಲಿ ಜಂಟಿ ಉದ್ಯವಾಗಿ ಕೆಲಸ ಶುರು ಮಾಡಿದ ಸ್ಟೀಲ್ಕೇಸ್ ನಿಧಾನಕ್ಕೆ ತನ್ನ ಅಸ್ತಿತ್ವವನ್ನು ಸ್ಥಿರವಾಗಿ ವಿಸ್ತರಿಸುತ್ತಾ ಬಂದಿದೆ.
ಸ್ಥಳೀಯ ಅಗತ್ಯಗಳನ್ನು ಪೂರೈಸುವ ಮತ್ತು ಸ್ಥಳೀಯ ಉತ್ಪಾದನೆಯಲ್ಲಿ ಗಣನೀಯವಾಗಿ ಹೂಡಿಕೆ ಮಾಡುವ ಮೂಲಕ ಸೂಕ್ತವಾದ ಉತ್ಪನ್ನಗಳನ್ನು ನೀಡುತ್ತಾ ಬಂದಿದೆ. ಈ ಮೂಲಕ ಕಂಪನಿಯು ಭಾರತದ ಕಚೇರಿಗಳಲ್ಲಿ ಸ್ಫೂರ್ತಿದಾಯಕ ಉದ್ಯೋಗಿ ಕೇಂದ್ರಿತ ವಾತಾವರಣ ನಿರ್ಮಿಸಲು ನೆರವಾಗಿದೆ ಮತ್ತು ಅದರಿಂದ ಕೆಲಸದ ಸ್ಥಳಗಳಲ್ಲಿ ಉದ್ಯೋಗಿಗಳ ತೊಡಗಿಕೊಳ್ಳುವಿಕೆ ಮತ್ತು ಉತ್ಪಾದಕತೆ ಹೆಚ್ಚಿಸಲು ನೆರವಾಗಿದೆ.
ಈ ಮಹತ್ವದ ಮೈಲಿಗಲ್ಲು ಸಾಧಿಸಿರುವ ನೆನಪಿಗೆ ಸ್ಟೀಲ್ಕೇಸ್ ಏಷ್ಯಾದಲ್ಲಿ ತನ್ನ ಮೊಟ್ಟ ಮೊದಲ ವರ್ಕ್ ಬೆಟರ್ ಕಾನ್ಫರೆನ್ಸ್ ಆಯೋಜಿಸಿದ್ದು, ಈ ಸಮಾವೇಶವು ಭಾರತದ ಬೆಂಗಳೂರಿನಲ್ಲಿ ನಡೆಯಿತು. ಈ ಅದ್ದೂರಿ ಸಮಾವೇಶದಲ್ಲಿ ಉದ್ಯಮದ ಉನ್ನತ ಹಂತದ ವೃತ್ತಿಪರರು ಭಾಗವಹಿಸಿ ಇತ್ತೀಚಿನ ಟ್ರೆಂಡ್ ಗಳು ಮತ್ತು ಕಚೇರಿ ವಿನ್ಯಾಸ ಮತ್ತು ಕಾರ್ಯಚಟುವಟಿಕೆಗಳಲ್ಲಿ ಬಳಸಬಹುದಾದ ನವೀನ ಪರಿಹಾರೋತ್ಪನ್ನಗಳ ಕುರಿತು ಸಂವಾದ ನಡೆಸಿದರು.
ಲಲಿತ್ ಅಹುಜಾ, ಎಎನ್ಎಸ್ಆರ್, ಸಿಇಓ, ಡಾ. ಅರವಿಂದ್ ಸುಬ್ರಮಣಿಯನ್, ರಿಲಯನ್ಸ್ನ ಮಾನವ ಸಂಪನ್ಮೂಲ ವಿಭಾಗದ ವಿಪಿ, ಸಲೀಂ ಭಟ್ರಿ, ಸಿಇಪಿಟಿ ವಿಶ್ವವಿದ್ಯಾಲಯದ ಡಿಸೈನ್ ಫ್ಯಾಕಲ್ಟಿ ಡೀನ್, ಸುನಿಲ್ ಸುರೇಶ್, ಸ್ಟಾನ್ಲಿ ಲೈಫ್ಸ್ಟೈಲ್ನ ಸಿಇಓ ಈ ತಜ್ಞರ ತಂಡವು ಅಭಿವೃದ್ಧಿ ಹೊಂದುತ್ತಿರುವ ಕೆಲಸದ ಸ್ಥಳಗಳು, ಸಹಯೋಗ ಮತ್ತು ಹೆಚ್ಚು ಉತ್ಪಾದಕತೆ ಸಾಧಿಸುವಲ್ಲಿ ವಿನ್ಯಾಸದ ಪಾತ್ರದ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಂಡರು.