ಕನಕಪುರ: ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆದಿರುವ ರೈತ ಸೇವಾ ಸಹಕಾರ ಬ್ಯಾಂಕಿನಲ್ಲಿ ಠೇವಣಿ ಹಣ ವರ್ಗಾವಣೆ ಮಾಡಿ ಹಣ ಕಳೆದುಕೊಂಡಿರುವ ಸದಸ್ಯರ ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆ ಎಂದು ಸಂಘದ ಸದಸ್ಯರು ಅಕ್ರೋಶ ವ್ಯಕ್ತಪಡಿಸಿದರು.
ನಗರದ ಸಂಗಮ ರಸ್ತೆಯಲ್ಲಿರುವ ರೈತ ಸೇವಾ ಸಹಕಾರ ಸಂಘದ ಬಳಿ ಜಮಾಯಿಸಿದ್ದ ಸಂಘದ ಸದಸ್ಯರು ಹಾಗೂ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿರುವ ದೇವಮ್ಮ, ಜಯಮ್ಮ, ನಾಗೇಶ್, ಶ್ರೀನಿವಾಸ್ ಮೂರ್ತಿ ತಿಮ್ಮೇಗೌಡ ಅನೇಕರು ಮಾಧ್ಯಮ ಗಳೊಂದಿಗೆ ಮಾತನಾಡಿ ರೈತ ಸೇವಾ ಸಹಕಾರ ಸಂಘ ದಲ್ಲಿ ಕಳೆದ ಒಂದು ವರ್ಷದ ಹಿಂದೆ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆದು ಪ್ರಕರಣ ಬೆಳಕಿಗೆ ಬಂದಿದ್ದು ತನಿಖೆ ಆಡಿಟ್ ನಡೆಯುವ ಕಾರ್ಯ ಪ್ರಗತಿ ಯಲ್ಲಿದೆ ಎಂದು ಹೇಳುತ್ತಿದ್ದಾರೆ ಆದರೆ ಸಂಘದ ಅಧಿಕಾರಿಗಳು ಆಡಳಿತ ಮಂಡಳಿ ಸದಸ್ಯರು ಇಟ್ಟಿರುವ ಠೇವಣಿ ಹಣವನ್ನು ಡ್ರಾ ಮಾಡಲು ಅಥವಾ ವರ್ಗಾವಣೆ ಮಾಡಲು ಅವಕಾಶವಿಲ್ಲ.
ಆದರೆ ಮಾಜಿ ಅಧ್ಯಕ್ಷರು ಇಟ್ಟಿದ್ದ ಠೇವಣಿ ಹಣವನ್ನು ಅವರ ಪತ್ನಿ ಮಾಡಿದ ಸಾಲದ ಹಣಕ್ಕೆ ವರ್ಗಾವಣೆ ಮಾಡಿ ಜಮಾ ಮಾಡಿದ್ದಾರೆ ಇಂದು ಸಭೆ ಇರುವುದು ಬ್ಯಾಂಕಿಗೆ ಭೇಟಿ ಕೊಟ್ಟಾಗ ವಿಚಾರ ಬೆಳಕಿಗೆ ಬಂದಿದೆ ಹಣ ವರ್ಗಾವಣೆ ಆಗಿರುವ ವಿಚಾರದಲ್ಲಿ ಅವರವರಲ್ಲೇ ಗೊಂದಲ ಸೃಷ್ಟಿಯಾಗಿದೆ ಈ ವಿಚಾರವಾಗಿ ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳು ಬ್ಯಾಂಕಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ ಹಣ ಕಳೆದುಕೊಂಡಿರುವವರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾವು ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಶಿಕ್ಷಣಕ್ಕೆ ಅನುಕೂಲವಾಗಲಿ ಎಂದು ಲಕ್ಷಾಂತರ ಹಣ ಇಲ್ಲಿ ಠೇವಣಿ ಇಟ್ಟಿದ್ದೇವೆ ಆದರೆ ಸಂಘದಲ್ಲಿ ಅವ್ಯವಹಾರ ನಡೆದು ಒಂದು ವರ್ಷ ಕಳೆಯುತ್ತ ಬಂದಿದೆ ಇದುವರೆಗೂ ಠೇವಣಿ ಇಟ್ಟಿದ್ದ ಗ್ರಾಹಕರಿಗೆ ಹಣ ಮರುಪಾವತಿ ಮಾಡದೆ ಇಂದು ನಾಳೆ ಎಂದು ಕಾಲಹರಣ ಮಾಡುತ್ತಿದ್ದಾರೆ, ಸಾಕಷ್ಟು ರೈತರು,ಸಾಮಾನ್ಯ ಜನರು ಚಿನ್ನ ಅಡಮಾನ ಇಟ್ಟು ಸಾಲ ಪಡೆದಿದ್ದರು ಪಡೆದಿರುವ ಸಾಲ ಕಟ್ಟುತ್ತೆವೆ ಎಂದರು ಸಹ ನಮಗೆ ನಮ್ಮ ಚಿನ್ನಾಭರಣಗಳನ್ನು ಕೊಡದೆ ಕಳೆದ ಒಂದು ವರ್ಷದಿಂದ ಆಡಿಟ್ ನಡೆಯುತ್ತಿದೆ ಎಂದು ಕಾಲಹರಣ ಮಾಡುತ್ತಿದ್ದಾರೆ ಎಂದು ಆಡಳಿತ ಮಂಡಳಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.
ರೈತರು ಬ್ಯಾಂಕಿನಲ್ಲಿ ಅಡಮಾನವಿಟ್ಟಿದ್ದ ಚಿನ್ನಾಭರಣ ವನ್ನು ಪೊಲೀಸರು ವಶಕ್ಕೆ ಪಡೆದು ಬ್ಯಾಂಕಿಗೆ ಒಪ್ಪಿಸಿದ್ದಾರೆ ಅಡಮಾನಟ್ಟಿದ್ದ ರೈತರಿಗೆ ಚಿನ್ನಾಭರಣವನ್ನು ವಾಪಸ್ ಕೊಡಲು ಆಡಳಿತ ಮಂಡಳಿಗೆ ಅವಕಾಶ ಇದೆ ಎಂದು ಆಡಳಿತ ಮಂಡಳಿಯ ನಿರ್ದೇಶಕರು ನಮಗೆ ಮಾಹಿತಿ ಕೊಟ್ಟಿದ್ದಾರೆ,ರೈತರಿಗೆ ಚಿನ್ನಾಭರಣ ಕೊಟ್ಟರೆ ಅವರು ಪಡೆ ದಿರುವ ಸಾಲವನ್ನು ಮರುಪಾವತಿ ಮಾಡುವುದರಿಂದ ಬ್ಯಾಂಕಿನ ವ್ಯವಹಾರಗಳಿಗೆ ಅನುಕೂಲ ಆಗಲಿದೆ ಆದರೆ ಅಡಮಾನ ಇಟ್ಟಿದ್ದ ರೈತರಿಗೆ ಚಿನ್ನಾಭರಣವನ್ನು ಕೊಡದೆ ಸತಾಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಠೇವಣಿ ಇಟ್ಟಿದ್ದ ವಯೋ ವೃದ್ಧರು ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರ ದಿಂದ ಕಂಗಲಾಗಿದ್ದಾರೆ ಅದೇ ಚಿಂತೆಯಲ್ಲಿ ಕೆಲವರು ಅನಾರೋಗ್ಯಕ್ಕೆ ತುತ್ತಾಗಿ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಯಲ್ಲಿದ್ದಾರೆ ಬಹಳಷ್ಟು ಜನರಿಗೆ ಅನ್ಯಾಯ ಆಗಿದೆ ಹಣ ಕಳೆದುಕೊಂಡಿರುವವರಿಗೆ ಹಂತ ಹಂತವಾಗಿ ಹಣ ಕೊಡುವ ಕೆಲಸ ಮಾಡಬೇಕು ಕೂಡಲೇ ಸಹಕಾರ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.