ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಒಟ್ಟು ೧೨ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ ಮೂವರು ಸರ್ಕಾರಿ ಅಧಿಕಾರಿಗಳ ಮನೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಅಕ್ರಮವಾಗಿ ಸಂಪಾದಿಸಿದ್ದ ಅಪಾರ ಮೌಲ್ಯದ ಚಿನ್ನಾಭರಣ ನಗದು ಹಾಗೂ ನಿವೇಶನ ಪತ್ರಗಳನ್ನು ವಶಪಡಿಸಿಕೊಂಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಕೆಂಗೇರಿ ಸ್ಯಾಟಲೈಟ್ ಟೌನ್ನಲ್ಲಿರುವ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಮಾಜಿ ನಿರ್ದೇಶಕಿ ಸುಮಂಗಲಿ ಅವರ ನಿವಾಸದ ಮೇಲೆ ೨೦ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುಮಂಗಲಿ ಅವರು ಸದ್ಯ ಅಮಾನತಿನಲ್ಲಿದ್ದರೂ, ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಅವರ ಮೇಲಿದೆ. ಇದೇ ರೀತಿ, ಮಲ್ಲಸಂದ್ರ ಏರಿ ಆಸ್ಪತ್ರೆಯ ವೈದ್ಯಾಧಿಕಾರಿ ಮಂಜುನಾಥ್ ಅವರ ಅನ್ನಪೂರ್ಣೇಶ್ವರಿ ನಗರದ ಮನೆ ಮೇಲೂ ಸುಮಾರು ೧೦ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ವಿಶೇಷ ಭೂಸ್ವಾಧೀನ ಅಧಿಕಾರಿ ಹಾಗೂ ಸರ್ವೇಯರ್ ಗಂಗಾ ಮರಿಗೌಡ ಅವರ ನಿವಾಸದ ಮೇಲೂ ದಾಳಿ ನಡೆದಿದ್ದು, ಶೋಧ ಕಾರ್ಯ ಪ್ರಗತಿಯಲ್ಲಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದರ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಹಾಸನ ಜಿಲ್ಲೆಯ ಜ್ಯೋತಿ ಮೇರಿ ಎಫ್ ಡಿ ಎ ಅಕೌಂಟ್ಸ್ ವಿಭಾಗ ಆರೋಗ್ಯ ಮತ್ತು ಕುಟುಂಬ ಇಲಾಖೆ. ಕಲ್ಬುರ್ಗಿ ಜಿಲ್ಲೆಯ ಧೂಳಪ್ಪ ಅಸಿಸ್ಟೆಂಟ್ ಡೈರೆಕ್ಟರ್ ತೋಟಗಾರಿಕೆ ಇಲಾಖೆ. ಚಿತ್ರದುರ್ಗದ ಚಂದ್ರಕುಮಾರ್ ಅಸಿಸ್ಟೆಂಟ್ ಡೈರೆಕ್ಟರ್ ತೋಟಗಾರಿಕೆ ಇಲಾಖೆ. ಉಡುಪಿ ಜಿಲ್ಲೆಯ ಲಕ್ಷಿ÷್ಮÃನಾರಾಯಣ ಪಿ ನಾಯಕ್ ಆರ್ ಟಿ ಓ. ಬೆಂಗಳೂರು ನಗರದ ಮಂಜುನಾಥ್ ಮೆಡಿಕಲ್ ಆಫೀಸರ್ ಮಲ್ಲಸಂದ್ರ ಮೆಟರ್ನಿಟಿ ಹಾಸ್ಪಿಟಲ್. ದಾವಣಗೆರೆ ಜಿಲ್ಲೆಯ ಜಗದೀಶ ನಾಯಕ ಎ ಇ ಇ, ಕೆ ಆರ್ ಐ ಡಿ ಎಲ್. ಹಾವೇರಿ ಜಿಲ್ಲೆಯ ಅಶೋಕ್ ರೆವೆನ್ಯೂ ಇನ್ಸ್ಪೆಕ್ಟರ್ ರಾಣೆಬೆನ್ನೂರು ತಾಲೂಕು. ಹಾವೇರಿ ಜಿಲ್ಲೆಯ ಭಾವೇಶ್ ಇಂಚಾರ್ಜ್ ಇ ಓ ಸಾವನೂರ್ ತಾಲೂಕ್ ಪಂಚಾಯತ್. ಬಾಗಲಕೋಟೆ ಜಿಲ್ಲೆಯ ಚೇತನ್ ಜೂನಿಯರ್ ಇಂಜಿನಿಯರ್ ಆಲಮಟ್ಟಿ ಬಾಲದಂಡೆ ಕೆನಲ್. ಬೆಂಗಳೂರಿನ ಶ್ರೀಮತಿ ಸುಮಂಗಳ ಡೈರೆಕ್ಟರ್ ಕರ್ನಾಟಕ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್. ದಾವಣಗೆರೆ ಜಿಲ್ಲೆಯ ನಡುವಿನಮನಿ ಜೂನಿಯರ್ ಇಂಜಿನಿಯರ್ ಕೆ ಎಫ್ ಅಂಡ್ ಸಿ ಎಸ್ ಸಿ ದಾವಣಗೆರೆ ಮತ್ತು ಬೆಂಗಳೂರಿನ ಗಂಗಾಮರಿಗೌಡ ಸರ್ವೆಯರ್ ಸ್ಪೆಷಲ್ ಲ್ಯಾಂಡ್ ಆಫೀಸ್ ೨ ( ಬಿ ಎಂಆರ್ಸಿಎಲ್ ).ಕೆಂಗೇರಿ ಸ್ಯಾಟಲೈಟ್ ಟೌನ್ನಲ್ಲಿರುವ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಮಾಜಿ ನಿರ್ದೇಶಕಿ ಸುಮಂಗಲಿ ಅವರ ನಿವಾಸದ ಮೇಲೆ ೨೦ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುಮಂಗಲಿ ಅವರು ಸದ್ಯ ಅಮಾನತಿನಲ್ಲಿದ್ದರೂ, ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಅವರ ಮೇಲಿದೆ. ಇದೇ ರೀತಿ, ಮಲ್ಲಸಂದ್ರ ಏರಿ ಆಸ್ಪತ್ರೆಯ ವೈದ್ಯಾಧಿಕಾರಿ ಮಂಜುನಾಥ್ ಅವರ ಅನ್ನಪೂರ್ಣೇಶ್ವರಿ ನಗರದ ಮನೆ ಮೇಲೂ ಸುಮಾರು ೧೦ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ವಿಶೇಷ ಭೂಸ್ವಾಧೀನ ಅಧಿಕಾರಿ ಹಾಗೂ ಸರ್ವೇಯರ್ ಗಂಗಾ ಮರಿಗೌಡ ಅವರ ನಿವಾಸದ ಮೇಲೂ ದಾಳಿ ನಡೆದಿದ್ದು, ಶೋಧ ಕಾರ್ಯ ಪ್ರಗತಿಯಲ್ಲಿದೆ.