ಬೆಂಗಳೂರು: ಗೋವುಗಳಿಗೆ ಅಘ್ನ್ಯಾ ಎಂಬ ಹೆಸರಿದೆ. ಅಂದರೆ ಕೊಲ್ಲಬಾರದ ಪ್ರಾಣಿ ಎಂದು ಅರ್ಥ. ಗೋವು ನಮಗೆ ಅಗತ್ಯ ಮಾತ್ರವಲ್ಲ ಅನಿವಾರ್ಯ ಕೂಡಾ.
ಇದನ್ನು ನಾವೆಲ್ಲ ಮನವರಿಕೆ ಮಾಡಿಕೊಳ್ಳಬೇಕಿದೆ ದೇಸಿ ಗೋವುಗಳನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಮಠ ಮಂದಿರಗಳು ಜಾಗರೂಕವಾಗಬೇಕಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.ಪೂರ್ಣ ಪ್ರಜ್ಞ ವಿದ್ಯಾ ಪೀಠದಲ್ಲಿ ಗೋವತ್ಸ ದ್ವಾದಶಿ ಪ್ರಯುಕ್ತ ನಡೆದ ಗೋ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡುಶ್ರೀ ಗಳು ಆಶೀರ್ವಚನ ನೀಡಿದರು.
ಹೊರದೇಶಗಳಿಗೆ ಗೋಮಾಂಸ ರಫ್ತನ್ನು ನಿಲ್ಲಿಸಿದರೆ ಗೋ ರಕ್ಷಣೆ ಸಾಧ್ಯ ಎಂದು ಅಭಿಪ್ರಾಯಪಟ್ಟ ರಾಜ್ಯ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಗೋವಿನ ರಕ್ಷಣೆಗೆ ಸರಕಾರ ಕಟಿಬದ್ಧವಾಗಿದೆ ಎಂದರು.ಗೋವು ಉಳಿಯಬೇಕಾದರೆ ಗೋಪಾಲಕರು ಉಳಿಯಬೇಕು. ನೀಲಾವರದಲ್ಲಿ ಈಗಾಗಲೇ ಬೃಹತ್ ಗೋಶಾಲೆ ಪೋಷಿಸುತ್ತಿರುವ ಪೇಜಾವರ ಶ್ರೀಗಳು ಬೆಂಗಳೂರು ಸಮೀಪದಲ್ಲಿಸಹ ಗೋಶಾಲೆ ತೆಗೆಯುವ ಮೂಲಕ ಜಾಗೃತಿ ಉಂಟು ಮಾಡಬೇಕಿದೆ ಎಂದು ಡಾ. ವ್ಯಾಸನಕೆರೆ ಪ್ರಭಂಜನಾ ಚಾರ್ಯ ಅಭಿಪ್ರಾಯಪಟ್ಟರು.
ಗೋಶಾಲೆಯ ನಿರ್ಮಾಣಕ್ಕೆ ಗುರು ಮನೆಗೆ ಅರಮನೆಯ ಬೆಂಬಲ ಬೇಕು ಹಾಗಾಗಿ ಪೇಜಾವರ ಶ್ರೀ ಗಳ ಈ ಕಾರ್ಯಕ್ಕೆ ಸರಕಾರ ಸಹಕರಿಸಬೇಕು ಎಂದರು.ಗೋ ತಜ್ಞ ಶೈಲೇಶ ಹೊಳ್ಳಅವರು ಮಾತನಾಡಿ ದೇಸಿ ಹಸುಗಳ ತಳಿ ಬದಲಿನಿಂದ ಪ್ರಾಕೃತಿಕ ವ್ಯತ್ಯಾಸ ಆಗುತ್ತಿದೆ ವಿದೇಶಗಳಲ್ಲಿ ಈ ಬಗ್ಗೆ ಜಾಗೃತ ರಾದ ತಜ್ಞರು ಗೋ ಸಾಕಣೆ ಕಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ ನಾವು ಇದನ್ನು ನಿರ್ಲಕ್ಷ ಮಾಡುತ್ತಿದ್ದೇವೆ ಎಂದು ಖೇದ ವ್ಯಕ್ತ ಪಡಿಸಿದರು.
ಕೃಷ್ಣರಾಜ ಕುತ್ಪಾಡಿ ಹಾಗೂ ಸಮನಾ ಭಟ್ ನೇತೃತ್ವದಲ್ಲಿ ಪೂರ್ಣಪ್ರಮತಿ ಶಾಲೆಯ ವಿದ್ಯಾರ್ಥಿಗಳು ಗೋ ಸಂಬಂಧಿ ಬೊಂಬೆಗಳ ಪ್ರದರ್ಶನ, ವಸ್ತು ಪ್ರದರ್ಶನ, ಗೋವಿನ ಮಹತ್ವ ಸಾರುವ ವಿಡಿಯೋ ಪ್ರದರ್ಶನ ಆಯೋಜಿಸಿದ್ದರು.ಗೋವಿಗೆ ತುಲಾಭಾರ ಮಾಡುವ ಮೂಲಕ ಅರ್ಥಪೂರ್ಣವಾಗಿ ಗೋ ವತ್ಸ ದ್ವಾದಶಿ ನಡೆಸಲಾಯಿತು.