ಮಧ್ಯಪ್ರಾಚ್ಯ ಸಂಘರ್ಷವು ಕೇವಲ ಇಂಧನ ಪೂರೈಕೆ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಮಾತ್ರವಲ್ಲದೆ ಕ್ರೀಡಾ ಪ್ರಪಂಚದ ಮೇಲೂ ಯಾರೂ ಅಂದುಕೊಳ್ಳದ ರೀತಿಯಲ್ಲಿ ಹೊಡೆತ ನೀಡಿದೆ. ವಿಶೇಷವಾಗಿ ಇಂಗ್ಲೆAಡ್ ಮೂಲದ ಪ್ರಖ್ಯಾತ ‘ಡ್ಯೂಕ್ಸ್’ ಕ್ರಿಕೆಟ್ ಬಾಲ್ಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಜಾಗತಿಕ ಕ್ರಿಕೆಟ್ನಲ್ಲಿ ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ವರದಿಯಾಗಿದೆ.ಮುಖ್ಯವಾಗಿ ಇಂಗ್ಲೆಂಡ್, ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಗಳಲ್ಲಿ ಡ್ಯೂಕ್ಸ್ ಬಾಲ್ ಗಳನ್ನು ಬಳಸಲಾಗುತ್ತದೆ. ಈ ದೇಶಗಳಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳೆರಡನ್ನು ಆಡಲೂ ಇದೇ ಚೆಂಡನ್ನು ಬಳಸಲಾಗುತ್ತದೆ. ಇನ್ನು ನೆರೆಯ ಪಾಕಿಸ್ತಾನದಲ್ಲಿ ದೇಶೀಯ ಪಂದ್ಯಗಳನ್ನು ಆಡಲು ಡ್ಯೂಕ್ಸ್ ಚೆಂಡುಗಳನ್ನು ಬಳಸಲಾಗುತ್ತದೆ. ಭಾರತದ ಮೂಲದ ಉದ್ಯಮಿ ದಿಲೀಪ್ ಜಿಜೋಡಿಯಾ ಈ ಚೆಂಡು ತಯಾರಕ ಕಂಪನಿಯ ಮಾಲೀಕರಾಗಿದ್ದಾರೆ.ಇದೀಗ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಕೆಂಪು ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿಯ ಮೂಲಕ ಹಡಗು ಸಂಚಾರಕ್ಕೆ ಅಡ್ಡಿಯಾಗಿದೆ. ಡ್ಯೂಕ್ಸ್ ಚೆಂಡುಗಳನ್ನು ತಯಾರಿಸಲು ಬೇಕಾದ ಕಚ್ಚಾ ವಸ್ತುಗಳ ಆಮದು ಮತ್ತು ಅಂತಿಮವಾಗಿ ತಯಾರಾದ ಚೆಂಡುಗಳನ್ನು ಇಂಗ್ಲೆಂಡ್ನಿಂದ ಇತರ ದೇಶಗಳಿಗೆ ರಫ್ತು ಮಾಡಲು ಇದರಿಂದಾಗಿ ಸಾಧ್ಯವಾಗುತ್ತಿಲ್ಲ. ಸಾರಿಗೆ ವೆಚ್ಚಗಳು ಏರಿಕೆಯಾಗಿರುವುದು ಮತ್ತು ಸರಕು ಸಾಗಣೆಯ ಮಾರ್ಗಗಳು ಬದಲಾಗಿರುವುದು ಈ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿವೆ ಎಂದು ಡೈಲಿಮೇಲ್ ವರದಿ ಮಾಡಿದೆ.
ಈ ಬಿಕ್ಕಟ್ಟಿನಿಂದಾಗಿ ಸದ್ಯ ಮಾರುಕಟ್ಟೆಯಲ್ಲಿ ಡ್ಯೂಕ್ಸ್ ಚೆಂಡುಗಳ ಬೆಲೆ ಆಕಾಶಕ್ಕೆ ಏರಿದೆ. ಲಭ್ಯವಿರುವ ಕೆಲವೇ ಕೆಲವು ಚೆಂಡುಗಳನ್ನು ಪಡೆಯಲು ವಿವಿಧ ದೇಶಗಳ ಕ್ರಿಕೆಟ್ ಮಂಡಳಿಗಳು ಪರದಾಡುತ್ತಿವೆ. ಬ್ರಿಟಿಷ್ ಸ್ಟಾ÷್ಯಂಡರ್ಡ್ ಡ್ಯೂಕ್ಸ್ ಬಾಲ್ಗಳ ಬೆಲೆ ದುಪ್ಪಟ್ಟಾಗಿದ್ದು, ಸ್ಥಳೀಯ ಲೀಗ್ಗಳಿಂದ ಹಿಡಿದು ಅಂತಾರಾಷ್ಟ್ರೀಯ ಪಂದ್ಯಗಳವರೆಗೆ ಇದರ ಪರಿಣಾಮ ಬೀರಿದೆ.ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ ಸೀಸನ್ ಆರಂಭವಾಗುತ್ತಿರುವ ಈ ಸಮಯದಲ್ಲಿ ಈ ಕೊರತೆಯು ಇಂಗ್ಲೆAಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯನ್ನು (ಇಅಃ) ಕಳವಳಕ್ಕೀಡು ಮಾಡಿದೆ. ಡ್ಯೂಕ್ಸ್ ಚೆಂಡುಗಳು ತಮ್ಮ ಗುಣಮಟ್ಟ ಮತ್ತು ಸ್ವಿಂಗ್ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿವೆ. ಈಗ ಇವುಗಳ ಕೊರತೆಯಿಂದಾಗಿ ಪಂದ್ಯಗಳನ್ನು ನಡೆಸಲು ಕಷ್ಟವಾಗುತ್ತಿದೆ ಅಥವಾ ಪರ್ಯಾಯವಾಗಿ ಬೇರೆ ಕಂಪನಿಗಳ (ಉದಾಹರಣೆಗೆ ಕೂಕಬರ್ರಾ ಅಥವಾ ಎಸ್ಜಿ) ಚೆಂಡುಗಳನ್ನು ಬಳಸುವ ಅನಿವಾರ್ಯತೆ ಎದುರಾಗಿದೆ.
`ಇರಾನ್- ಇಸ್ರೇಲ್ ಯುದ್ಧದಿಂದ ಇಂಗ್ಲೆAಡ್ನಲ್ಲಿ ಕ್ರಿಕೆಟ್ಗೂ ಹೊಡೆತ’



