ರಾಮನಗರ: ದುಷ್ಕರ್ಮಿಗಳ ಗುಂಪೊಂದು ವ್ಯಕ್ತಿಯೊಬ್ಬನ ಮೇಲೆ ಮಾರಕಾಸಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ತಾಲೂಕಿನ ಹುಚ್ಚಮ್ಮನದೊಡ್ಡಿ ಬಳಿಯ ವಡ್ಡರದೊಡ್ಡಿ ಗೇಟ್ ನಲ್ಲಿ ಗುರುವಾರ ರಾತ್ರಿ ನಡೆದಿದೆ.
ಬೆಂಗಳೂರು ಸುಂಕದಕಟ್ಟೆ ವಾಸಿ ಮಂಜುನಾಥ್ ಕೊಲೆಯಾದವರು.ಹುಚ್ಚಮನದೊಡ್ಡಿಯಲ್ಲಿರುವ ತನ್ನ ಸ್ನೇಹಿತರಾದ ರವಿ ಮತ್ತು ರಘು ಅವರನ್ನು ಭೇಟಿಯಾಗಲು ಮಂಜುನಾಥ್ ಬೆಂಗಳೂರಿನಿಂದ ಆಗಮಿಸಿದ್ದರು. ವಡ್ಡರದೊಡ್ಡಿ ಗೇಟ್ ಬಳಿ ಕಾರಿನಿಂದ ಮಂಜುನಾಥ್ ಕೆಳಗಿಳಿಯುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ 5 – 6 ಮಂದಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಮೃತ ಮಂಜುನಾಥ್ ಮತ್ತು ಸ್ನೇಹಿತರಾದ ರವಿ, ರಘು ಅವರೆಲ್ಲರು ಬೇರೆಯವರ ಬಳಿ ಕೆಲಸ ಮಾಡಿಕೊಂಡಿದ್ದರು. ಆನಂತರ ಮೂವರು ಟ್ರಕ್ , ಟಿಪ್ಪರ್ ಗಳನ್ನು ಖರೀದಿಸಿ ವ್ಯವಹಾರದಲ್ಲಿ ತೊಡಗಿದ್ದರು.
ಮಂಜುನಾಥ್ ಬಳಿಯೇ ಟ್ರಕ್ ಮತ್ತು ಟಿಪ್ಪರ್ ಗಳ ಚಾಲಕರಾಗಿದ್ದವರೇ ಅನೈತಿಕ ಸಂಬಂಧ ಹೊಂದಿದ್ದ ಕಾರಣಕ್ಕೆ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Review