ನೆಲಮಂಗಲ: ನಮ್ಮ ಸರಕಾರ ನೀಡಿದ 5 ಗ್ಯಾರಂಟಿಗಳನ್ನು ಕ್ಷೇತ್ರದ ಮನೆಮನೆಗೆ ತಲುಪಿಸುವ ಕೆಲಸ ಮಾಡಲಾಗಿದೆ ನೆಲಮಂಗಲ ಅಭಿವೃದ್ಧಿಗೆ ನಾನು ತಂದಿರುವ 869 ಕೋಟಿ ರೂ. ಅನುದಾನ, ಪ್ರತಿ ಗ್ರಾಮ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ, ವಿವಿಧ ಕೆಲಸಗಳು ನಡೆಯುತ್ತಿವೆ ಜನ ನನ್ನನ್ನು ಗೆಲ್ಲಿಸಿರುವುದು ಅಭಿವೃದ್ಧಿ ಕೆಲಸ ಮಾಡಲಿಕ್ಕೆ ಹೊರತು ವಿರೋಧ ಪಕ್ಷದವರ ಟೀಕೆಗಳಿಗೆ ಉತ್ತರಿಸುವುದಕ್ಕಲ್ಲ ನಮ್ಮ ಸಾಧನೆ. ಏನೆಂದು ಜನ ಗಮನಿಸಿದಾರೆ ಎಂದು ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ತಿಳಿಸಿದರು.
ನಗರದ ಲಕ್ಷ್ಮೀನಾರಾಯಣ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಟಿಸಿ ಮಾತನಾಡಿದ ಅವರು ಸರಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಿ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಯೋಜನೆ, ಕೆಪಿಟಿಸಿಎಲ್ ವಿದ್ಯುತ್ ಸಮಸ್ಯೆ ನಿವಾರಣೆ ಮುಂದಿನ ದಿನಗಳಲ್ಲಿ ಕಾವೇರಿ ನೀರಿನ ಯೋಜನೆ ಮೆಟ್ರೋ ಯೋಜನೆ ಗ್ರಾಮೀಣ ಭಾಗದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ತರುವ ಸಂಕಲ್ಪ ಮಾಡಿದ್ದೇನೆ ನಾನು ಈ ಕ್ಷೇತ್ರದ ಶಾಸಕನಲ್ಲ ನಿಮ್ಮೆಲ್ಲರ ಸೇವಕ ಎಂದರು.
ಕ್ಷೇತ್ರದ ಕಾರ್ಯಕರ್ತರು, ಮಹಿಳೆಯರು ದೊಡ್ಡ ಶಕ್ತಿಯಾಗಿ ನಿಂತು ನಮ್ಮ ಅಭ್ಯರ್ಥಿ ರಕ್ಷಾ ರಾಮಯ್ಯ ರವರಿಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.
ಚಿಕ್ಕಬಳ್ಳಾಪುರದ ಅಭ್ಯರ್ಥಿ ರಕ್ಷಾ ರಾಮಯ್ಯ ಮಾತನಾಡಿ ಶಾಸಕ ಶ್ರೀನಿವಾಸ್ ರವರು ಅತ್ಯಂತ ಕ್ರಿಯಾಶೀಲ ಉಮ್ಮಸ್ಸು ಇರುವಂತ ವ್ಯಕ್ತಿ ಈಗಾಗಲೇ ಒಂಬತ್ತು ತಿಂಗಳಲ್ಲಿ ಸುಮಾರು ಅನುದಾನಗಳನ್ನು ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತಿದ್ದಾರೆ ಅವರು ನಮಗೆಲ್ಲ ಮಾದರಿಯಾಗಿದ್ದು ತಾಲೂಕಿನಲ್ಲಿ ಅವರ ಬೆಂಬಲ ನಮಗೆ ಅತಿ ಹೆಚ್ಚಿನ ಶಕ್ತಿ ನೀಡಿದೆ ಚಿಕ್ಕಬಳ್ಳಾಪುರ ಕ್ಷೇತ್ರದ 8 ವಿಧಾನ ಸಭಾ ಕ್ಷೆತ್ರದ ಕಾರ್ಯಕರ್ತರು ಒಗ್ಗಟ್ಟಾಗಿ ಹಾಗೂ ಪಕ್ಷದ ಹಿರಿಯ ಮುಖಂಡರು, ಮಹಿಳೆಯರು ನಮ್ಮ ಪಕ್ಷದ ಶಕ್ತಿಯಾಗಿದ್ದು ನನಗೆ ಗೆಲುವಿನ ಭರವಸೆ ತಂದಿದ್ದೆ ಎಂದರು.
ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಆರ್ ಗೌಡ, ಬಿಎಂಎಲ್ ಕಾಂತರಾಜ್, ಮಾಜಿ ಸದಸ್ಯ ಗೌರಿಶಂಕರ್, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾರಾಯಣಗೌಡ, ಮಿಲಿಟರಿ ಮೂರ್ತಿ, ತಟ್ಟೆಕೆರೆ ಬಾಬು, ಯುವ ಕಾಂಗ್ರೆಸ್ ಮುಖಂಡ ಕಿರಣ್, ಹಾಜರಿದ್ದರು.