ಹೈದರಾಬಾದ್: ತೆಲಂಗಾಣ ವಿಧಾನಸಭೆಗೆ ಇಂದು ಮತದಾನ ನಡೆಯುತ್ತಿದೆ.ಸಿನಿಮಾ ತಾರೆಯರು ಮತದಾನ ಕೇಂದ್ರಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ನಟರಾದ ಜೂ.ಎನ್ಟಿಆರ್, ಅಲ್ಲು ಅರ್ಜುನ್, ಸುಮಂತ್, ಸಂಗೀತ ನಿರ್ದೇಶಕ ಕೀರವಾಣಿ ಮತ್ತಿತರರು ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದರು.
ಹೈದರಾಬಾದ್ನ ಜುಬಿಲಿ ಹಿಲ್ಸ್ನ ಓಬುಲ್ ರೆಡ್ಡಿ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಜೂ.ಎನ್ಟಿಆರ್ ತಮ್ಮ ಕುಟುಂಬ ದೊಂದಿಗೆ ಮತ ಹಾಕಿದರು. ಜೂ.ಎನ್ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿ ಹಾಗೂ ತಾಯಿ ಶಾಲಿನಿ ಜೊತೆಗಿದ್ದರು. ಬಿಎಸ್ಎನ್ಎಲ್ ಕೇಂದ್ರದ ಮತಗಟ್ಟೆಯಲ್ಲಿ ಅಲ್ಲು ಅರ್ಜುನ್ ಹಕ್ಕು ಚಲಾಯಿಸಿದರು. ಸುಮಂತ್ ಜುಬಿಲಿ ಹಿಲ್ಸ್ ಕ್ಲಬ್ನಲ್ಲಿ ಮತದಾನ ಮಾಡಿದ್ದಾರೆ.
ಹೈದರಾಬಾದ್ ಜಿಲ್ಲಾಚುನಾವಣಾಧಿಕಾರಿ ರೊನಾಲ್ಡ್ ರೋಸ್ ಅವರು ಮಾದಾಪುರದ ವೆಂಕಟೇಶ್ವರ ಫೈನ್ ಆಟ್ರ್ಸ್ ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಪತ್ನಿಯೊಂದಿಗೆ ಅವರು ಮತಗಟ್ಟೆಗೆ ಬಂದಿದ್ದರು.ಟಾಲಿವುಡ್ ಮೇಗಾಸ್ಟಾರ್ ಚಿರಂಜೀವಿ ತಮ್ಮ ಕುಟುಂಬದೊಂದಿಗೆ ಆಗಮಿಸಿ ಹಕ್ಕು ಚಲಾಯಿಸಿದರು. ಅದರಂತೆ ವಿಕ್ಟರಿ ವೆಂಕಟೇಶ್ ಸಹ ಮತದಾನ ಮಾಡಿದ್ದಾರೆ.
ಅಂಬರ್ಪೇಟ್ನ ಮತಗಟ್ಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಕೇಂದ್ರ ಮಂತ್ರಿ ಕಿಶನ್ ರೆಡ್ಡಿ ಕುಟುಂಬದೊಂದಿಗೆ ಆಗಮಿಸಿ ಮತದಾನ ಮಾಡಿದರು. ರಾಜ್ಯದ ಪ್ರತಿಯೊಬ್ಬರೂ ಮತ ಚಲಾಯಿಸುವಂತೆ ಅವರು ಕೋರಿದರು.



