ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕಿನ ಜ್ವಲಂತ ಸಮಸ್ಯೆಯಾಗಿರುವ ಅಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಕಡಿವಾಣ ಹಾಕಬೇಕು ಎಂದು ಸದನದಲ್ಲಿ ಶಾಸಕ ಧೀರಜ್ ಮುನಿರಾಜು ಆಗ್ರಹಿಸಿದರು. ವಿಧಾನಸಭೆಯ ಬಜೆಟ್ ಅಧಿವೇಶನದ ಸದನದಲ್ಲಿ ಭಾಗವಹಿಸಿ ಮಾತನಾಡಿ ತಾಲ್ಲೂಕಿನ ಹಲವೆಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ.
ಗ್ರಾಮೀಣ ಭಾಗಗಳಲ್ಲಿ ಅಕ್ರಮವಾಗಿ ಮನೆಗಳಲ್ಲೆ ಮದ್ಯ ಮಾರಾಟ ಮಾಡಲಾಗು ತ್ತಿದೆ ಅಬಕಾರಿ ಮತ್ತು ಪೊಲೀಸ್ ಇಲಾಖೆ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ. ಶಾಸಕರ ಮತಗಟ್ಟೆಯಾದ ವಡ್ಡರಹಳ್ಳಿ ಗ್ರಾಮದಲ್ಲಿ 14 ಜನ ಯುವಕರು ಅತಿ ಹೆಚ್ಚು ಮದ್ಯ ಸೇವನೆ ಮಾಡಿ ಲಿವರ್ ವೈಫಲ್ಯ ಸೇರಿದಂತೆ ಇನ್ನಿತರೆ ಅಂಗಾಂಗ ವೈಫಲ್ಯದಿಂದ ಯುವಕರು ಸಾವನ್ನಪ್ಪಿದ್ದಾರೆ.
ಬಾರ್ ಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಸೇಲ್ಸ್ ಏಜೆಂಟ್ರ ರೀತಿಯಲ್ಲಿ ಹೆಚ್ಚು ಹೆಚ್ಚು ಮದ್ಯ ಮಾರಾಟಕ್ಕೆ ಒತ್ತಡವನ್ನ ಹೇರುತ್ತಿದ್ದಾರೆ. ಇದರಿಂದ ಗ್ರಾಮೀಣ ಬಾಗದಲ್ಲಿ ಹೆಚ್ಚು ಅಕ್ರಮ ಮಾರಾಟವಾಗುತ್ತಿದೆ.ಅಲ್ಲದೆ ಪಕ್ಕದ ಆಂಧ್ರ ಪ್ರದೇಶಕ್ಕೆ ಹೊಂದಿ ಕೊಂಡಿರುವ ಜಿಲ್ಲೆಯಾಗಿರುವುದರಿಂದ ಆಂಧ್ರದಿಂದ ಸೇಂದಿ ಕೂಡ ಸರಬರಾಜು ಆಗುತ್ತಿದೆ ಇದರಿಂದ ಆರ್ಥಿಕವಾಗಿ ಹಿಂದುಳಿದ ಪ್ರದೇಶದಯುವಕರು ಕಾಲೋನಿಗಳಲ್ಲಿ ವಾಸಿಸುವವರುಮದ್ಯವನ್ನು ಸೇವಿಸಿ ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ ಕೂಡಲೆ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮದ್ಯಕ್ಕೆ ದಾಸರಾದ 28 ರಿಂದ 40ವರ್ಷದೊಳಗಿನವರ ವಯಸ್ಕರು ಅನಾರೋಗ್ಯದಿಂದ ಸಾವನ್ನಪ್ಪುತ್ತಿರುವ ಬಗ್ಗೆಯೂ ಸ್ಪೀಕರ್ ಯು.ಟಿ ಖಾದರ್ ಅವರ ಗಮನಕ್ಕೆ ತಂದರು.ಈ ವೇಳೆ ಬೆಂಬಲಕ್ಕೆ ನಿಂತ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮಾತನಾಡಿ ನಾನು ಕೂಡ ದೊಡ್ಡಬಳ್ಳಾಪುರಕ್ಕೆ ಹಲವು ಬಾರಿ ಪ್ರವಾಸ ಕೈಗೊಂಡಿದ್ದಾಗ ಅಕ್ರಮ ಮದ್ಯ ಮಾರಾಟದ ಬಗ್ಗೆ ಗಮನಕ್ಕೆ ಬಂದಿದೆ ಎಂದು ಶಾಸಕ ಧೀರಜ್ ಮುನಿರಾಜು ಬೆಂಬಲಕ್ಕೆ ನಿಂತರು.