ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಬೆನ್ನು ತಟ್ಟಿ ಮಾತನಾಡಿಸಿರುವುದು ಬಿಜೆಪಿ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇಂದು ಬೆಳಗ್ಗೆ ಬಿ.ಎಸ್.ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಉಪಹಾರ ಸೇವನೆಗೆ ಅಮಿತ್ ಶಾ ಅವರು ಆಗಮಿಸಿದರು.
ಅಮಿತ್ ಶಾ ಅವರನ್ನು ಸ್ವಾಗತಿಸಲು ಬಿ.ಎಸ್.ಯಡಿಯೂರಪ್ಪ ಅವರು ಮುಂದಾದಾಗ ಶಾ ವಿಜಯೇಂದ್ರ ಕೈಗೆ ಹೂಗುಚ್ಛ ಕೊಡುವಂತೆ ಬಿಎಸ್‍ವೈಗೆ ಸೂಚನೆ ನೀಡಿದರು. ನಂತರ ಯಡಿಯೂರಪ್ಪ ತಮ್ಮ ಕೈಯಲ್ಲಿದ್ದ ಹೂವಿನ ಬೊಕ್ಕೆಯನ್ನು ವಿಜಯೇಂದ್ರ ಕೈಗೆ ನೀಡಿದರು. ಅನಂತರ ಅದೇ ಹೂಗುಚ್ಛವನ್ನು ವಿಜಯೇಂದ್ರ, ಅಮಿತ್ ಶಾಗೆ ನೀಡಿ ಸ್ವಾಗತಿಸಿದರು.
ಇದೇ ವೇಳೆ ಅಮಿತ್ ಶಾ ವಿಜಯೇಂದ್ರಗೆ ಬೆನ್ನು ತಟ್ಟಿದರು. ಅಮಿತ್ ಶಾ ಯಡಿಯೂರಪ್ಪಗಿಂತ ವಿಜಯೇಂದ್ರಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಬಿಜೆಪಿ ಪಾಳಯದಲ್ಲಿ ಕುತೂಹಲ ಮೂಡಿಸಿದೆ. ಚುನಾವಣೆ ಎದುರಾಗುವ ಸಂದರ್ಭದಲ್ಲಿ ಕೇಂದ್ರ ಸಚಿವ ಅಮಿತ್ ಶಾ ನಡೆ ಏನು ಎಂಬುದು ಬಿಜೆಪಿಮುಖಂಡರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.
Leave a Review