ಬೆಂಗಳೂರು: ಸೈಬರ್ ಅಪರಾಧ ತನಿಖಾ ಶೃಂಗಸಭೆ 24 ಕಾರ್ಯಕ್ರಮವನ್ನು ಮಾನ್ಯ ಗೃಹ ಸಚಿವ ಡಾಕ್ಟರ್ ಜಿ ಆರ್ ಪರಮೇಶ್ವರ್ ರವರು ಇಂದು ಉದ್ಘಾಟಿಸಿ ರಾಜ್ಯದಲ್ಲಿ ದಿನೇ ದಿನೇ ಸೈಬರ್ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆ ಮತ್ತು ಶಿಕ್ಷೆಗೆ ಹೆಚ್ಚು ಒತ್ತು ನೀಡಬೇಕೆಂದು ಕರೆ ನೀಡಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಒರಿಸ್ಸಾ, ಪಶ್ಚಿಮ ಬಂಗಾಳ ಸೇರಿದಂತೆ ಇನ್ನೂ ಇತರೆ ರಾಜ್ಯಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.ಸೈಬರ್ ಕರೆ ಅಪರಾಧಕ್ಕೆ ಹೆಚ್ಚು ವಿದ್ಯಾವಂತರೆ ಒಳಗಾಗಿತ್ತಿರುವ ಹಿನ್ನೆಲೆಯಲ್ಲಿ ತನಿಖೆ ಅತಿ ಶೀಘ್ರವಾಗಿ ಮತ್ತು ಚುರುಕಾಗಿ ನಡೆಯಬೇಕೆಂದು ಕರೆ ನೀಡಿದ ಅವರು,
2001ರಲ್ಲಿ ಸಿಐಡಿ ಯಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಉದ್ಘಾಟನೆಯಾದಾಗ ಕ್ರೈಂ ಅಪರಾಧ ಕೇವಲ ಬೆರಳಿಣಿಕೆಯಷ್ಟು ಇದ್ದು, ಇಂದು ಪ್ರತಿವರ್ಷ 20,000ಕ್ಕೂ ಅಧಿಕ ಸೈಬರ್ ಕ್ರೈಂ ಪ್ರಕರಣಗಳು ಇಡೀ ರಾಜ್ಯದ್ಯಂತ ದಾಖಲಾಗುತ್ತಿರುತ್ತದೆ. ಶಿಕ್ಷೆ ಮತ್ತು ಅಪರಾಧಿಗಳ ಪತ್ತೆ ಪ್ರಮಾಣ ಅತಿ ಕಡಿಮೆಯಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು. ಕಾರ್ಯಕ್ರಮದಲ್ಲಿ ಡಿಜಿಪಿ ಅಲೋಕ್ ಮೋಹನ್, ಸಿಐಡಿ ಡಿಜಿಪಿ ಸಲಿಎಂ ಮತ್ತು ಇನ್ಫೋಸಿಸ್ ಹಾಗು ಇತರೆ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.