ಬೊಮ್ಮನಹಳ್ಳಿ: ಪುಸ್ತಕ ಸಂತೆಯಿಂದ ಓದುಗರು ಹಾಗೂ ಬರಹಗಾರರ ಆಸಕ್ತಿ ಹೆಚ್ಚಾಗುತ್ತದೆ ಎಂಬುದಾಗಿ ರಾಜ್ಯ ಸಭೆಯ ಮಾಜಿ ಸದಸ್ಯರಾದ ಡಿ.ಕುಪೇಂದ್ರರೆಡ್ಡಿ ತಿಳಿಸಿದರು.
ಅವರು ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಹೆಚ್.ಎಸ್.ಆರ್. ಬಡಾವಣೆಯ ಕುವೆಂಪು ಪಾರ್ಕಿನಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಪುಸ್ತಕ ಸಂತೆಯ ಸಮಾರೋಪ ಸಮಾರಂಭದಲ್ಲಿ ವಿವಿಧ ಪುಸಕ್ತ ಮಳಿಗೆ ಹಾಗೂ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ ಮಳಿಗೆಗಳಿಗೆ ಬೇಟಿ ನೀಡಿ ಮಾತನಾಡಿದರು.
ಕನ್ನಡ ಉಳಿಯುತ್ತದೆ ಬೆಳೆಯುತ್ತದೆ:- ಇಂತಹ ಪುಸ್ತಕ ಸಂತೆಗಳು ನಗರಗಳಲ್ಲಿ ಎಲ್ಲ ಕಡೆಗಳಲ್ಲಿ ಹೆಚ್ಚು ಹೆಚ್ಚು ನಡೆಯಬೇಕು ಆಗ ಕನ್ನಡ ಪುಸ್ತಕಗಳ ಓದುಗರ ಸಂಖ್ಯೆ ಹೆಚ್ಚುತ್ತದೆ, ಯುವ ಬರಹಗಾರರು ಹೆಚ್ಚು ಹೆಚ್ಚು ಬರೆಯುತ್ತಾರೆ ಇದರೊಂದಿಗೆ ಪುಸಕ್ತ ಪ್ರಕಾಶಕರು ಆಸಕ್ತಿ ವಹಿಸಿ ಮುದ್ರಣಗಾರರು ಹೆಚ್ಚಾಗುತ್ತಾರೆ ಇದರಿಂದ ಕನ್ನಡದ ಉಳಿವು ಮತ್ತು ಬೆಳವಣಿಗೆ ತನಗೆ ತಾನೆ ವೃದ್ದಿಗೊಳ್ಳುತ್ತದೆ ಎಂದರು.
ಗ್ರಂಥಾಲಯ ದೇಶದ ಸಂಪತ್ತು:- ಖ್ಯಾತ ಹಿರಿಯ ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಶೂದ್ರ ಶ್ರೀನಿವಾಸ್ ಮಾತನಾಡಿ ಕನ್ನಡಿಗರ ಪ್ರತಿಯೊಬ್ಬರ ಮನೆ ಮನೆಗಳಲ್ಲಿ ಪುಟ್ಟ ಪುಸ್ತಕ ಗ್ರಂಥಾಲಯ ರೂಪಗೊಂಡಾಗ ಮಾತ್ರ ನಾಡಿನಲ್ಲಿ ಸಮೃದ್ಧವಾದ ಸಂಪತ್ತು ವೃದ್ದಿಯಾಗುತ್ತದೆ ಎಂಬುದಾಗಿ ಕನ್ನಡದ ಹಿರಿಯ ಚಿಂತಕ ಜಿ.ನಾರಾಯಣ್ ಅವರ ಆಶಯದ ನುಡಿಯಾಗಿ ಹೇಳುತ್ತಿದ್ದರು ಇಂತಹ ಆರೋಗ್ಯಕರ ಅಕ್ಷರದ ಹಬ್ಬಗಳು ಎಲ್ಲಡೆ ನಡೆಯಬೇಕು ಇಂತಹ ಸಂದರ್ಭದಲ್ಲಿ ನನ್ನ ಪುಸ್ತಕ ಕೂಡ ಬಿಡುಗಡೆಯಾಗಿರುವುದು ಸಂತಸ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ ಇಂತಹ ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲ ಯುವ ಸಂಘಟಕ ಡಾ.ಅನಿಲ್ ರೆಡ್ಡಿ ಪರಿಶ್ರಮ ಮತ್ತು ವೀರಕಪುತ್ರ ಶ್ರೀನಿವಾಸ್ ಅವರ ಸಂಪರ್ಕವನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಶೈಕ್ಷಣಿಕ ಚಿಂತಕ ಕೆ.ವಾಸುದೇವ ಅವರ ಸಾರಥ್ಯದಲ್ಲಿ ಹಮ್ಮಿಕೊಂಡಿದ್ದ ಇಂಟಿಗ್ರೇಟೆಡ್ ಲರ್ನಿಂಗ್ ಅಕಾಡಮಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳಿಗೆ ವಿವಿಧ ರೀತಿಯ ಚಿತ್ರಕಲೆ, ಮರಗೆಲಸ ಗೊಂಬೆ ತಯಾರಿಕೆ, ಕುಂಬಾರಿಕೆ ವಿವಿಧ ಮಡಿಕೆ ಕುಡಿಕೆಗಳ ತಯಾರಿಕೆ, ಕಾಗದಗಳಿಂದ ಗೊಂಬೆ ತಯಾರಿಕೆ, ಹೀಗೆ ಹತ್ತು ಹಲವಾರು ರೀತಿಯ ಕರಕುಶಲ ತಯಾರಿಕೆಯ ಪ್ರಾತ್ಯಕ್ಷಿಕೆ ಹಾಗೂ ವಸ್ತುಪ್ರದರ್ಶನಗಳು ಈ ಮಳಿಗೆಯಲ್ಲಿ ಕಂಡು ಬಂದಿತು ಇಲ್ಲಿ ಹೆಚ್ಚಾಗಿ ಮಕ್ಕಳಿಗೆ ಮತ್ತು ಪ್ರೇಕರಿಗೆ ಹೆಚ್ವಿನ ಆಸಕ್ತಿ ಮತ್ತು ಕುತೂಹಲ ಮೂಡಿಸಿದವು.
ಕಾರ್ಯಕ್ರಮದಲ್ಲಿ ಜಾನಪದ ಕಲಾ ತಂಡಗಳು ಹೆಚ್ವು ಮೆರುಗು ನೀಡಿದವು.ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಡಾ.ಅನಿಲ್ ರೆಡ್ಡಿ, ವೀರಕಪುತ್ರ ಶ್ರೀನಿವಾಸ್, ಹಾಗೂ ನಿವೃತ ಅಧಿಕಾರಿ ಪರೆಡ್ಡಿ , ಇಂಟಿಗ್ರೇಟೆಡ್ ಲರ್ನಿಂಗ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಕೆ.ವಾಸುದೇವ, ಕಾರ್ಯದರ್ಶಿ ಅಮರಾವತಿ, ನಿರ್ದೆಶಕರಾದ ಪ್ರಜ್ವಲ್, ಡಾ.ಸಹನ, ಮುಖ್ಯ ಕಾರ್ಯನಿರ್ವಾಹಕ ರಂಜಿತ್, ಪ್ರಾಂಶುಪಾಲರಾದ ಸೌಮ್ಯ, ಹಾಜರಿದ್ದರು.