ಭಾರತ ಪ್ರಮುಖ ವೇಗಿ ಮೊಹಮ್ಮದ್ ಶಮಿ ಅವರನ್ನು ನಿರಂತರವಾಗಿ ತಂಡದಿಂದ ಹೊರಗಿಡುತ್ತಿರುವ ವಿಚಾರವಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಣಜಿಯಲ್ಲಿ ಬಂಗಾಳ ತಂಡ ರೂವಾರಿ ಯಾಗಿರುವ ಅವರು ಫಿಟ್ ಆಗಿದ್ದಾರೆ. ಅವರ ಕೌಶಲ್ಯದಲ್ಲೂ ಯಾವುದೇ ಕೊರತೆಯಿಲ್ಲ. ಫಿಟ್ ಆಗಿದ್ದಾರೆ. ಹಾಗಾಗಿ ಟೆಸ್ಟ್, ಏಕದಿನ ಮತ್ತು ಟಿ೨೦ ಮೂರೂ ಮಾದರಿಗಳಲ್ಲಿ ಅವರನ್ನು ಹೊರಗಿಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಮೊಹಮ್ಮದ್ ಶಮಿ ಅವರವಿಚಾರವಾಗಿ ಬಿಸಿಸಿಐ ಆಯ್ಕೆ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಫಿಟ್ನೆಸ್, ಕೌಶಲ್ಯ ಅಸಾಧಾರಣವಾಗಿದ್ದು ಕ್ರಿಕೆಟ್ ಮೂರೂ ಮಾದರಿಗಳಿಂದ ದೂರ ಇಡಲು ಯಾವುದೇ ಕಾರಣ ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ.
ಗಂಗೂಲಿ ಅವರು ರಣಜಿ ಟ್ರೋಫಿಯಲ್ಲಿ ಶಮಿ ಅವರ ಪ್ರದರ್ಶನವನ್ನು ಉಲ್ಲೇಖಿಸಿ, ಅವರು ಮೂರು ಪಂದ್ಯಗಳಲ್ಲಿ ೧೫ ವಿಕೆಟ್ ಪಡೆದಿದ್ದಾರೆ. ಇಂತಹ ಆಟಗಾರ ಏಕೆ ಅಂತರಾಷ್ಟ್ರೀಯ ಕ್ರಿಕೆಟ್ ಆಡಬಾರದು ಎಂಬುದು ತನಗೆ ಅರ್ಥವಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋಲ್ಕತಾದಲ್ಲಿ ಈ ಬಗ್ಗೆ ಸುದ್ದಿಗಾರರಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಮೊಹಮ್ಮದ್ ಶಮಿ ಅವರು ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರು ಫಿಟ್ ಆಗಿದ್ದಾರೆ. ರಣಜಿ ಟ್ರೋಫಿಯ ಮೂರು ಪಂದ್ಯಗಳಲ್ಲಿ ಅವರು ಬಂಗಾಳ ತಂಡವನ್ನು ಗೆಲ್ಲಿಸಿದ್ದಾರೆ.
ಆಯ್ಕೆಗಾರರು ಇವನ್ನೆಲ್ಲಾ ಗಮನಿಸುತ್ತಿದ್ದಾರೆ ಮತ್ತು ಮೊಹಮ್ಮದ್ ಶಮಿ ಹಾಗೂ ಆಯ್ಕೆಗಾರರ ನಡುವೆ ಸಂವಹನ ಇದೆ ಎಂದು ನಾನು ಖಚಿತವಾಗಿ ನಂಬುತ್ತೇನೆ. ಆದರೆ ನನ್ನ ಪ್ರಕಾರ, ಫಿಟ್ನೆಸ್ ಮತ್ತು ಕೌಶಲ್ಯದ ದೃಷ್ಟಿಯಿಂದ ಮೊಹಮ್ಮದ್ ಶಮಿ ಅವರನ್ನು ಭಾರತಕ್ಕಾಗಿ ಟೆಸ್ಟ್, ಏಕದಿನ ಮತ್ತು ಟಿ೨೦ ಕ್ರಿಕೆಟ್ ಆಡುವುದನ್ನು ಮುಂದುವರಿಸದೇ ಇರಲು ಯಾವುದೇ ಕಾರಣ ಕಾಣುತ್ತಿಲ್ಲ. ಏಕೆಂದರೆ ಅವರ ಕೌಶಲ್ಯ ಅಸಾಧಾರಣವಾಗಿದೆ” ಎಂದು ಅಭಿಪ್ರಾಯಪಟ್ಟರು.
ಈ ಋತುವಿನಲ್ಲಿ ಮೊಹಮ್ಮದ್ ಶಮಿ ಅವರು ಇದುವರೆಗೆ ಮೂರು ರಣಜಿ ಪಂದ್ಯಗಳಲ್ಲಿ ೯೧ ಓವರ್ಗಳನ್ನು ಬೌಲ್ ಮಾಡಿ ೧೫ ವಿಕೆಟ್ಗಳನ್ನು ಉರುಳಿಸಿದ್ದಾರ. ಮೊದಲ ಎರಡು ಪಂದ್ಯಗಳಲ್ಲಿ ಬಂಗಾಳ ತಂಡದ ಗೆಲುವಿಗೆ ಅವರು ಪ್ರಮುಖ ಕೊಡುಗೆ ನೀಡಿದ್ದರು. ತ್ರಿಪುರ ವಿರುದ್ಧದ ಪಂದ್ಯದಲ್ಲಿ ಅವರು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದ ಅವರನ್ನು ಬಳಿಕ ಯಾವ ಸರಣಿಗೂ ಆಯ್ಕೆ ಮಾಡಿಲ್ಲ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಅವರನ್ನೂ ದೂರ ಇಡಲಾಗಿದೆ. ಟೀಂ ಇಂಡಿಯಾ ಪರವಾಗಿ ಮೊಹಮ್ಮದ್ಶಮಿ ಅವರು ಒಟ್ಟು ೬೪ ಟೆಸ್ಟ್ ಪಂದ್ಯಗಲಿಂದ ೨೭.೭೧ ಸರಾಸರಿಯಲ್ಲಿ ೨೨೯ ವಿಕೆಟ್, ೧೦೮ ಏಕದಿನ ಪಂದ್ಯಗಳಿಂದ ೨೪.೦೫ ಸರಾಸರಿಯಲ್ಲಿ ೨೦೬ ವಿಕೆಟ್ ಮತ್ತು ೨೫ ಟಿ೨೦ ಪಂದ್ಯಗಳಿಂದ ೨೮.೧೮ ಸರಾಸರಿಯಲ್ಲಿ ೨೭ ವಿಕೆಟ್ ಗಳನ್ನು ಗಳಿಸಿದ್ದಾರೆ. ಐಪಿಎಲ್ ನಲ್ಲಿ ಐದು ತಂಡಗಳ ಪರ ಆಡಿರುವ ಅವರು ಒಟ್ಟು ೧೧೯ ಪಂದ್ಯಗಳಿಂದ ೨೮.೧೮
ಸರಾಸರಿಯಲ್ಲಿ ೧೩೩ ವಿಕೆಟ್ ಗಳನ್ನು ಕಬಳಿಸಿದ್ದಾರೆ.



