ಇದರಲ್ಲಿ ನಾಯಕಿ ನಟಿಯಾಗಿ ರಾಧಿಕಾ ನಾರಾಯಣ್ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ಅನೇಕ ವಿದೇಶಿ ಕಲಾವಿದರುಗಳು ಇದರಲ್ಲಿ ನಟಿಸಿದ್ದಾರೆ. ದಿಗಂತ್ ರವರು ಕೂಡ ಒಂದು ಮಹತ್ವವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸಿ ರುವವರು ಶಿವಾಜಿ ಸೂರತ್ಕಲ್ 1 ಹಾಗೂ 2 ಚಿತ್ರದ ನಿರ್ದೇಶಕರಾದ ಆಕಾಶ್ ಶ್ರೀವತ್ಸ ರವರು ಹಾಗೂ ಇದರ ನಿರ್ಮಾಪಕರು ರವಿ ಕಶ್ಯಪ್ ರವರು. ರವಿ ಕಶ್ಯಪ್ ರವರ ಜೀವನದಲ್ಲಿ ನಡೆದ ನೈಜ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಅದಕ್ಕೆ ಚಿತ್ರಕಥೆ ಬರೆದು ಆಕಾಶ್ ಶ್ರೀವತ್ಸ ರವರು ಇದನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣವು ಸಂಪೂರ್ಣ ವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದ ವಿ. ಎಫ್.ಎಕ್ಸ್. , ರೀ ರೆಕಾರ್ಡಿಂಗ್, ಕೆಲಸಗಳು ನಡೆಯುತ್ತಿದ್ದು ಇನ್ನೇನು ಕೆಲವೇ ತಿಂಗಳುಗಳಲ್ಲಿ ತೆರೆಗೆ ಬರಲಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ಮುಗಿಯುತ್ತಿದ್ದಂತೆ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರ ತಂಡ ಬಹಿರಂಗ ಪಡಿಸಲಿದ್ದಾರೆ. ಈ ಚಿತ್ರಕ್ಕೆ ಛಾಯಾಗ್ರಹಣ ವನ್ನು ಶ್ರೀಶ ಕೂದುವಳ್ಳಿ ಯವರು ಮಾಡಿದ್ದು, ಹಿನ್ನೆಲೆ ಸಂಗೀತ vಚಿಟಿಟಿu ಜೂಡಾ ಸ್ಯಾಂಡಿ ರವರು ಮಾಡುತ್ತಿದ್ದಾರೆ. ಈ ಚಿತ್ರದ ವಿಶೇಷತೆ ಎಂದರೆ ದೇಶ ವಿದೇಶದ ಅನೇಕ ಜಾಗದಲ್ಲಿ ಚಿತ್ರೀಕರಣವಾಗಿದೆ – ಇಂಗ್ಲೆAಡ್ ನ ಬಾರ್ನ್ಮೌತ್, ಸ್ಕಾಟ್ ಲ್ಯಾಂಡ್ ನ ಎಡಿನ್ಬರೋ ನಲ್ಲಿ, ವಾರಣಾಸಿ, ಸಕಲೇಶಪುರ, ಮಡಿಕೇರಿ, ಬೆಂಗಳೂರಿನಲ್ಲಿ ಹೀಗೆ ಸಾಕಷ್ಟು ಬೇರೆ ಬೇರೆ ತಾಣದಲ್ಲಿ ಚಿತ್ರಿತ ವಾಗಿದೆ. ಇದೊಂದು ವಿಭಿನ್ನ ಶೈಲಿಯ ಚಿತ್ರವಾಗಿ ಮೂಡಿಬಂದಿದೆ.



