ಆರೋಗ್ಯಕರ ಹೃದಯವೇ ಆರೋಗ್ಯಕರ ಜೀವನದ ಕೀಲಿ ಕೈ. ಹೃದಯವನ್ನು ಆರೋಗ್ಯವಾಗಿಡಲು ಪ್ರತಿದಿನ ಮಾಡಿ ಈ ೫ ಪ್ರಾಣಾಯಾಮಗಳು. ಹೌದು, ಪ್ರಸ್ತುತ ವೇಗದ ಜೀವನಶೈಲಿಯಲ್ಲಿ ಹೃದಯ ಕಾಯಿಲೆಗಳು ಹೆಚ್ಚಾಗುತ್ತಿವೆ. ಒತ್ತಡ, ಬದಲಾದ ಆಹಾರ ಪದ್ಧತಿ ಮತ್ತು ದೈಹಿಕ ನಿಷ್ಕಿçಯತೆ ಇದಕ್ಕೆ ಪ್ರಮುಖ ಕಾರಣಗಳು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಪ್ರತಿ ವರ್ಷ ಲಕ್ಷಾಂತರ ಜನರು ಹೃದ್ರೋಗದಿಂದ ಪ್ರಾಣ ಕಳೆದುಕೊಳ್ಳುತ್ತಾರೆ.
ಹೃದಯವನ್ನು ಆರೋಗ್ಯವಾಗಿಡಲು ಯೋಗ ಮತ್ತು ಪ್ರಾಣಾಯಾಮ ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಪರಿಹಾರಗಳಾಗಿವೆ. ಪ್ರಾಣಾಯಾಮವು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ರಕ್ತದೊತ್ತಡವನ್ನು ಸುಧಾರಿಸುತ್ತದೆ ಮತ್ತು ಹೃದಯವನ್ನು ಬಲಪಡಿಸುತ್ತದೆ. ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುವ ೫ ಪ್ರಾಣಾಯಾಮಗಳನ್ನು ನಾವು ಈ ಲೇಖನದಲ್ಲಿ ತಿಳಿಸಿದ್ದೇವೆ.
೧. ಅನುಲೋಮ-ವಿಲೋಮ ಪ್ರಾಣಾಯಾಮ ಅನುಲೋಮ-ವಿಲೋಮ ಅಥವಾ ಪರ್ಯಾಯ ಮೂಗಿನ ಉಸಿರಾಟವು ಅತ್ಯಂತ ಸುಲಭವಾದ ಪ್ರಾಣಾಯಾಮ. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ನರಮಂಡಲವು ಸಮತೋಲನಗೊಳ್ಳುತ್ತದೆ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಅನುಲೋಮ-ವಿಲೋಮ ಪ್ರಾಣಾಯಾಮವು ಹೃದಯ ಬಡಿತವನ್ನು ಸಾಮಾನ್ಯಗೊಳಿಸುತ್ತದೆ ಮತ್ತು ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಪ್ರತಿದಿನ ಕನಿಷ್ಠ ೧೦ ರಿಂದ ೧೫ ನಿಮಿಷಗಳ ಕಾಲ ಈ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ಹೃದ್ರೋಗದ ಸಾಧ್ಯತೆ ಕಡಿಮೆಯಾಗುತ್ತದೆ.
೨. ಭ್ರಮರಿ ಪ್ರಾಣಾಯಾಮ ಭ್ರಮರಿ ಪ್ರಾಣಾಯಾಮವು ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸಲು (ಜೇನುನೊಣದ ಉಸಿರಾಟ) ಅತ್ಯಂತ ಪ್ರಯೋಜನಕಾರಿ. ಇದರಲ್ಲಿ ಜೇನುನೊಣದಂತೆ ಗುನುಗುವ ಶಬ್ದವನ್ನು ಮಾಡುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ಒತ್ತಡ ಮತ್ತು ಅಧಿಕ ರಕ್ತದೊತ್ತಡವು (ಊigh bಟooಜ ಠಿಡಿessuಡಿe) ಹೃದಯದ ಸಮಸ್ಯೆಗಳಿಗೆ ಪ್ರಮುಖ ಕಾರಣಗಳಾಗಿವೆ. ಇಂತಹ ಸಂದರ್ಭಗಳಲ್ಲಿ, ಭ್ರಮರಿ ಪ್ರಾಣಾಯಾಮ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಜೊತೆಗೆ ಹೃದಯಕ್ಕೆ ಆರಾಮ ಸಿಗುತ್ತದೆ.
೩. ಡಯಾಫ್ರಾಗ್ಮಾ÷್ಯಟಿಕ್ ಉಸಿರಾಟ ಡಯಾಫ್ರಾಗ್ಮಾ÷್ಯಟಿಕ್ ಉಸಿರಾಟ ಎಂದರೆ ನಿಧಾನವಾಗಿ ಮತ್ತು ಆಳವಾಗಿ ಉಸಿರಾಡುವುದು. ಇದನ್ನು ಹೊಟ್ಟೆಯಿಂದ ಉಸಿರಾಟ ಎಂದೂ ಕರೆಯುತ್ತಾರೆ. ನೀವು ನಿಧಾನವಾಗಿ ಮತ್ತು ಆಳವಾಗಿ ಉಸಿರಾಡಿದಾಗ, ದೇಹಕ್ಕೆ ಸಾಕಷ್ಟು ಆಮ್ಲಜನಕ ಸಿಗುತ್ತದೆ ಮತ್ತು ಮನಸ್ಸು ಶಾಂತವಾಗುತ್ತದೆ. ಈ ತಂತ್ರವು ಹೃದಯ ಬಡಿತದ ವ್ಯತ್ಯಾಸವನ್ನು (ಊಖಗಿ) ಸುಧಾರಿಸುತ್ತದೆ. ಇದು ಆರೋಗ್ಯಕರ ಹೃದಯದ ಸಂಕೇತವಾಗಿದೆ. ಈ ಪ್ರಾಣಾಯಾಮವು ಹೃದಯದ ಕಾರ್ಯಕ್ಷಮತೆಯನ್ನು ಸುಧಾರಿಸಲು ಅತ್ಯಂತ ಪ್ರಯೋಜನಕಾರಿ.
೪. ಕಪಾಲ್ಭಾತಿ ಪ್ರಾಣಾಯಾಮ ಕಪಾಲ್ಭಾತಿ ಒಂದು ಶಕ್ತಿಶಾಲಿ ಪ್ರಾಣಾಯಾಮವಾಗಿದೆ. ಇದರಲ್ಲಿ ವೇಗವಾಗಿ ಉಸಿರನ್ನು ಹೊರಹಾಕಿ ಹೊಟ್ಟೆಯ ಸ್ನಾಯುಗಳನ್ನು ಸಂಕುಚಿತಗೊಳಿಸಲಾಗುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗೆಯೇ ದೇಹದಿಂದ ವಿಷವನ್ನು ಹೊರಹಾಕುತ್ತದೆ. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಕೆಟ್ಟ ಕೊಲೆಸ್ಟಾçಲ್ ಕಡಿಮೆಯಾಗಬಹುದು. ಆದರೆ, ತೀವ್ರ ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡ ಇರುವವರು ಇದನ್ನು ಅಭ್ಯಾಸ ಮಾಡುವ ಮೊದಲು ವೈದ್ಯರ ಸಲಹೆ ಪಡೆಯಬೇಕು.
೫. ಭಸ್ತಿçಕಾ ಪ್ರಾಣಾಯಾಮ ಭಸ್ತಿçಕಾವನ್ನು ಪ್ರಾಣಾಯಾಮದ ಶಕ್ತಿ ಎಂದು ಕರೆಯಲಾಗುತ್ತದೆ. ಇದರಲ್ಲಿ ವೇಗವಾಗಿ ಉಸಿರನ್ನು ಒಳಗೆ ತೆಗೆದುಕೊಂಡು ಹೊರಹಾಕುವುದು ಸೇರಿದೆ. ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಹೃದಯವನ್ನು ಬಲಪಡಿಸುತ್ತದೆ. ಇದು ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತದೆ. ಆದರೆ ಹೃದ್ರೋಗ, ಅಧಿಕ ರಕ್ತದೊತ್ತಡ ಅಥವಾ ಉಸಿರಾಟದ ಸಮಸ್ಯೆ ಇರುವವರು ಈ ಪ್ರಾಣಾಯಾಮವನ್ನು ತಪ್ಪಿಸಬೇಕು.
ವಿಶ್ವ ಹೃದಯ ದಿನ ೨೦೨೫ ರಂದು ಈ ಪ್ರಾಣಾಯಾಮಗಳನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಹೃದಯವನ್ನು ಆರೋಗ್ಯವಾಗಿಡಬಹುದು. ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಬಹುದು. ಯಾವುದೇ ಪ್ರಾಣಾಯಾಮವನ್ನು ನಿಧಾನವಾಗಿ ಪ್ರಾರಂಭಿಸಿ ಮತ್ತು ನಿಮಗೆ ಈಗಾಗಲೇ ಹೃದಯ ಸಂಬAಧಿ ಕಾಯಿಲೆಗಳಿದ್ದರೆ, ತಜ್ಞರ ಸಲಹೆ ಪಡೆಯುವುದು ಉತ್ತಮ.



