ಕೆ.ಆರ್.ಪೇಟೆ: ಹೈನುಗಾರಿಕೆಯು ದೇಶದಲ್ಲಿ ಶರವೇಗದಲ್ಲಿ ಬೆಳೆಯುತ್ತಿರುವುದರಿಂದ ಯುವಕರು ಯುವತಿಯರು ಹೈನುಗಾರಿಕೆಯಲ್ಲಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ತೊಡಗಿಸಿಕೊಂಡರೆ ಹೈನುಗಾರಿಕೆಗೆ ಮೆರುಗು ಬಂದAತಾಗುತ್ತದೆ ಎಂದು ಮನ್ಮುಲ್ ಹ್ಯಾಟ್ರಿಕ್ ನಿರ್ದೇಶಕ ಹಾಗೂ ಸಮಾಜ ಸೇವಕ ಡಾಲು ರವಿ ಯುವಕರಿಗೆ ಕಿವಿ ಮಾತು ಹೇಳಿದರು.
ಅವರು ತಾಲ್ಲೂಕಿನ ಬಣ್ಣೇನಹಳ್ಳಿ, ಮೋದೂರು, ಬಂಡಿಹೊಳೆ, ವಡ್ಡರಹಳ್ಳಿ ಹಾಗೂ ಕುಪ್ಪಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಾಲಿನ ಡೇರಿಗೆ ಉತ್ತಮ ಗುಣಮಟ್ಟದ ಹಾಲನ್ನು ಹಾಕುವ ಉತ್ಪಾದಕರೇ ಸಂಘದ ಮಾಲಿಕರು. ಆದ್ದರಿಂದ ಕರೆದ ಹಾಲನ್ನು ಕರೆದಂಗೆ ತಂದು ಡೇರಿಗೆ ಸರಬರಾಜು ಮಾಡಬೇಕು ಹಾಗೂ ಹಾಲು ಉತ್ಪಾದಕರು ಕಡ್ಡಾಯವಾಗಿ ವೈಯುಕ್ತಿಕವಾಗಿ ಹಾಗೂ ರಾಸುಗಳಿಗೆ ವಿಮೆ ಮಾಡಿಸಿಕೊಳ್ಳಬೇಕೆಂದು ಮನ್ಮುಲ್ ನಿರ್ದೇಶಕ ಡಾಲು ರವಿ ರೈತರಿಗೆ ತಿಳುವಳಿಕೆ ಮೂಡಿಸಿದರು. ಸಂಘವು ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ಉತ್ಪಾದಕರ ಸಹಕಾರ ಬಹಳ ಮುಖ್ಯ ವಾಗುತ್ತದೆ. ಕಾಯಿಲೆ ಹಾಗೂ ಸಾವು ಎಂಬುದು ಯಾರನ್ನು ಕೇಳಿ ಹೇಳಿ ಬರುವುದಿಲ್ಲ. ಭವಿಷ್ಯದ ದೃಷ್ಟಿಯಿಂದ ರಾಸುಗಳಿಗೆ ಹಾಗೂ ರೈತರು ವೈಯುಕ್ತಿಕವಾಗಿ ವಿಮೆ ಮಾಡಿಸಿಕೊಂಡಿದ್ದಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವ ಸಂದರ್ಭದಲ್ಲಿ ರೈತರು ಆರ್ಥಿಕವಾಗಿ ಕುಗ್ಗಬಾರದು ಎಂಬ ಏಕೈಕ ದೃಷ್ಟಿಯಿಂದ ರೈತರು ಅರ್ಧದಷ್ಟು ವಿಮೆಗೆ ಹಣ ಕಟ್ಟಿಕೊಟ್ಟರೆ ಉಳಿದ ಹಣವನ್ನು ಮಂಡ್ಯ ಜಿಲ್ಲಾ ಒಕ್ಕೂಟದಿಂದ ಭರಿಸಲಾಗುತ್ತದೆ.ಒಂದು ವೇಳೆ ಹಾಲು ಉತ್ಪಾದಕರು ವಿಮೆ ಮಾಡಿಸಿಕೊಳ್ಳದಿದ್ದರೆ ಮರಣ ಹೊಂದಿದಾಗಲೂ ೧೫ಸಾವಿರ ರೂಗಳನ್ನು ಪರಿಹಾರವಾಗಿ ಜಿಲ್ಲಾ ಒಕ್ಕೂಟದಿಂದ ನೀಡಲಾಗುತ್ತದೆ.
ವಿಮೆ ಮಾಡಿಸಿಕೊಂಡು ಹಾಲು ಉತ್ಪಾದಕರು ಹಾಗೂ ರಾಸುಗಳು ಮರಣ ಹೊಂದಿದರೆ ೫೦ಸಾವಿರದಿಂದ ೬೦ಸಾವಿರ ಹಣವು ಹಾಲು ಉತ್ಪಾದಕರ ಖಾತೆಗೆ ಜಮಾ ಆಗುತ್ತದೆ. ಖಾಸಗಿ ಫೀಡ್ಸ್ ಕಡೆಗೆ ಗಮನ ಕೊಡದೇ ಕೆ ಎಂ ಎಫ್ ವತಿಯಿಂದ ತಯಾರಾಗುವ ಅತ್ಯಂತ ಗುಣಮಟ್ಟದ ಹೊಂದಿರುವ ನಂದಿನಿ ಫೀಡ್ಸ್ ನ್ನು ರಾಸುಗಳಿಗೆ ನೀಡಿ ರಾಸುಗಳ ಆರೋಗ್ಯ ಆರೈಕೆ ಮಾಡುವುದು ಒಳ್ಳೆಯ ಬೆಳವಣಿಗೆಯಾಗಿದೆ. ರಾಸುಗಳಿಗೆ ಕ್ಯಾಲ್ಸಿಯಂ ಹೆಚ್ಚಬೇಕಾದರೆ ಫೀಡ್ಸ್ ಜೊತೆಗೆ ಖನಿಜ ಮಿಶ್ರಣ ಹಾಗೂ ಗೋಧಾರ್ ಶಕ್ತಿ ಹಾಗೂ ಸಮೃದ್ಧಿ ಪುಡಿ ಹಾಗೂ ಜೊತೆಗೆ ಉಪ್ಪುನೇರಳೆ ಸೊಪ್ಪು, ಸೋರೆಕಾಯಿ, ಸೀಮೆ ಬದನೆಕಾಯಿ, ಟೊಮ್ಯಾಟೊ ನೀಡುವಂತೆ ಸಲಹೆ ನೀಡಿದರು.
ಮನ್ಮುಲ್ ನಿರ್ದೇಶಕ ಎಂ.ಬಿ.ಹರೀಶ್ ಮಾತನಾಡಿ ಡೇರಿ ಹುಟ್ಟಿದ ನಿಂದಲೂ ಇವತ್ತಿನ ವರೆಗೂ ಯಾರು ಸಹ ಹಾಲನ್ನು ಸೇವನೆ ಮಾಡುತ್ತಿಲ್ಲ.ಹಾಲನ್ನು ಡೇರಿಗೆ ಹಾಕಿ ಬಂದ ಹಣದಿಂದ ನಮ್ಮ ರೈತರು ಮಕ್ಕಳ ಶಿಕ್ಷಣ, ಬಟ್ಟೆ, ಪುಸ್ತಕ, ಹಬ್ಬ, ಹರಿದಿನಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದು ನಿಜವಾದರೂ ಉತ್ತಮ ಆರೋಗ್ಯ ದೃಷ್ಟಿಯಿಂದ ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಟ ೩೦೦ಎಂ ಎಲ್ ಹಾಲನ್ನು ಸೇವನೆ ಮಾಡುವುದರಿಂದ ಮೂಳೆಗಳಿಗೆ ಕ್ಯಾಲ್ಸಿಯಂ ಅಂಶ ಬರುತ್ತದೆ. ಆರೋಗ್ಯವು ಗಟ್ಟಿಯಾಗುತ್ತದೆ.ಖಾಸಗಿ ಡೇರಿಗೆ ಹಾಲನ್ನು ಹಾಕುವ ಬದಲು ನಿಮ್ಮೂರಿನ ಡೇರಿಗೆ ಹಾಲನ್ನು ಹಾಲು ಉತ್ಪಾದಕರು ಸರಬರಾಜು ಮಾಡಿದರೆ ಜಿಲ್ಲಾ ಹಾಲು ಒಕ್ಕೂಟದಿಂದ ಅನೇಕ ಸೌಲಭ್ಯಗಳನ್ನು ಒದಗಿಸುತ್ತದೆ. ಉದಾಹರಣೆಗೆ ಎಂಬಿಬಿಎಸ್, ಇಂಜಿನಿಯರಿAಗ್, ಪಶು ಇಲಾಖೆಯ ವೈದ್ಯಕೀಯ ಉನ್ನತ ವ್ಯಾಸಂಗಕ್ಕೆ ೫೦ಸಾವಿರ ರೂಗಳು ಹಾಗೂ ಬಿಎಸ್ಸಿ ಅಗ್ರಿಕಲ್ಚರಲ್ ಸೇರಿದಂತೆ ಇನ್ನೂ ಅನೇಕ ಉನ್ನತ ವ್ಯಾಸಂಗಕ್ಕೆ೪೦ಸಾವಿರೂಗಳನ್ನು ಪ್ರೋತ್ಸಾಹ ನೀಡುವ ಮೂಲಕ ರೈತರ ಬೆನ್ನಿಗೆ ಜಿಲ್ಲಾ ಹಾಲು ಒಕ್ಕೂಟ ನಿಂತಿದೆ.ಹಾಲು ಕರೆಯುವ ಯಂತ್ರ,ರಾಸುಗಳ ನೆಲಹಾಸು(ಮ್ಯಾಟ್),ಮೇವು ಕತ್ತರಿಸುವ ಯಂತ್ರ (ಚಾಪ್ ಕಟ್ಟರ್)ಹೀಗೆ ಅನೇಕ ಸಬ್ಸಿಡಿ ದರದಲ್ಲಿ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಇದೇ ಸಮಯದಲ್ಲಿ ಗ್ರಾಮದ ಸಂಘಕ್ಕೆ ಹೆಚ್ಚು ಗುಣಮಟ್ಟದ ಹಾಲನ್ನು ಸರಬರಾಜು ಮಾಡಿದ ಹಾಲು ಉತ್ಪಾದಕರನ್ನು ಅಭಿನಂದಿಸಿದರು ಹಾಗೂ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದ ಉತ್ಪಾದಕರ ಮಕ್ಕಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮನ್ಮುಲ್ ಮಾರ್ಗ ವಿಸ್ತರಣಾಧಿಕಾರಿ ರಾಘವೇಂದ್ರ, ಸಂಧ್ಯಾ, ನಾಗಪ್ಪ ಅಲ್ಲಿಬಾದಿ, ಭಾವನಾ, ಮೋದೂರು ಡೇರಿ ಅಧ್ಯಕ್ಷ ಗೋವಿಂದರಾಜು, ಸಂಘದ ಕಾರ್ಯದರ್ಶಿ ಶಿವಕುಮಾರ್ (ಪಾಪಣ್ಣಿ), ಕುಪ್ಪಹಳ್ಳಿ ಡೇರಿ ಅಧ್ಯಕ್ಷ ರವಿ, ಸಂಘದ ಕಾರ್ಯದರ್ಶಿ ಲವಕುಮಾರ್, ಬಂಡಿಹೊಳೆ ಡೇರಿ ಅಧ್ಯಕ್ಷ ಸುರೇಶ್, ಸಂಘದ ಕಾರ್ಯದರ್ಶಿ ಪ್ರವೀಣ್, ಬಣ್ಣೇನಹಳ್ಳಿ ಡೇರಿ ಕಾರ್ಯದರ್ಶಿ ಶೋಭ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಧನಂಜಯ, ವಡ್ಡರಹಳ್ಳಿ ಡೇರಿ ಅಧ್ಯಕ್ಷ ಎ.ಪವಿತ್ರ, ಕಾರ್ಯದರ್ಶಿ ದೀಪಿಕಾ ಶಿವಕುಮಾರ್ ಸೇರಿದಂತೆ ಎಲ್ಲಾ ಸಂಘದ ನಿರ್ದೇಶಕರು ಗ್ರಾಮದ ಮುಖಂಡರು ಭಾಗವಹಿಸಿದ್ದರು.