ಬೆಂಗಳೂರಿನ ದಕ್ಷಿಣ ತಾಲ್ಲೂಕಿನ ಯುವ ಸಂಪರ್ಕ ಸಭೆಯನ್ನು ಯುವ ಜನ ತರಬೇತಿ ಕೇಂದ್ರದಲ್ಲಿ ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬೆಂಗಳೂರು ಸಹಾಯಕ ನಿರ್ದೇಶಕರಾದ ಶ್ರೀ ಮತಿ ಶಶಿಕಲಾ ಉದ್ಘಾಟಿಸಿ ಇಲಾಖೆಯು ಯುವ ಜನರಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದು ಅಂತಹ ಯೋಜನೆಗಳನ್ನು ಯುವಜನರು ಬಳಸಿಕೊಳ್ಳಬೇಕು.
ಸರ್ಕಾರದ ಇಲಾಖೆ ಯೋಜನೆ ಎನ್ನುವ ಬದಲು ನಾವೇ ಇದರ ಭಾಗ ಎನ್ನುವ ಭಾವನೆ ಬರಬೇಕು ಯುವಜನ ಮೇಳ,ಯುವ ಜನೋತ್ಸವ, ಸಾಹಸ, ತರಬೇತಿ, ನಿರುದ್ಯೋಗಿ ಯುವ ಜನರಿಗೆ ವಿಡಿಯೋಗ್ರಪಿ, ಜಿಮ್ ಟ್ರೇನಿಂಗ್, ವಾರ್ತವಾಚನ ದಂತಹ ಕಾರ್ಯಕ್ರಮಗಳು ಉಚಿತವಾಗಿ ತರಬೇತಿ ನೀಡಲಾಗುತ್ತದೆ ಇದನ್ನು ಸದುಪಯೋಗ ಯುವ ಜನರು ಪಡೆದುಕೊಳ್ಳಬೇಕು ಎಂದರು.
ಪ್ರಾಂಶುಪಾಲರಾದ ಶ್ರೀಮತಿ ಸ್ವೀಟಿ ಮೇಡಂರವರು ನಮ್ಮಯುವ ಜನರು ಸಮಾಜದ ಜವಾಬ್ದಾರಿ ಅರಿತು ನಡೆಯಬೇಕು ಹಾಗೂ ಮೂಲಭೂತ ಹಕ್ಕುಗಳ ಜೊತೆ ಮೂಲಭೂತ ಕರ್ತವ್ಯಗಳು ಸಹ ಇವೆ ಎಂಬುದನ್ನು ಅರಿತು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವನ್ನು ಗಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಶ್ರೀಧರ್ ಅವರು ಮಾತನಾಡಿ ಯುವಜನರಿಗೆ ಇರುವ ಕೌಶಲ್ಯಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿಸಿದರುಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಯಶೋದ,ವಕೀಲರಾದ ಯೇಜಸ್ ಪಾಷರವರು ಕಂಪ್ಯೂಟರ್ ಉಪನ್ಯಾಸಕರಾದ ಸುನೀಲ್ ರವರು ಹಾಗೂ ಸುಮಾರು ನೂರು ಜನ ಯುವ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವು ಸಹ ಯುವ ಜನರು ಪ್ರದರ್ಶಿಸಿದರು. ಇತ್ತೀಚಿನ ದಿನಗಳಲ್ಲಿ ಯುವಜನರಿಗೆ ಸಾಮಾಜಿಕ ಜಾಲತಾಣಗಳಿಂದ ಎದುರಿಸಿತ್ತಿರುವ ಸಮಸ್ಯೆಗಳನ್ನು ಕರಿತು ಬೆಥೆಲ್ ಕಾಲೇಜಿನ ವಿದ್ಯಾರ್ಥಿಗಳು ಕಿರನಾಟಕ ಪ್ರದರ್ಶಿಸಿದ್ದು ವಿಶೇಷವಾಗಿತ್ತು.